ಬಳ್ಳಾರಿ: ಹೊಸಪೇಟೆಯಲ್ಲಿ ಒಂದೇ ಕುಟುಂಬದ ಮೂವರಿಗೆ ಕೊರೊನ ವೈರಸ್ ಪಾಸಿಟಿವ್, ಟ್ರಾವೆಲ್ ಹಿಸ್ಟರಿ ಹೀಗಿದೆ..

ಹೊಸಪೇಟೆಯ ಎಸ್.ಆರ್.ನಗರದಲ್ಲಿ ಒಂದೇ ಕುಟುಂಬದ ಮೂರು ಜನರಿಗೆ ಕೊರೊನ ಪಾಸಿಟಿವ್ ಪಕ್ಕ ಆಗಿದೆ, ಕುಟುಂಬಲ್ಲಿ ಇನ್ನುಳಿದ ಇಬ್ಬರು ಸದಸ್ಯರು ಸೇರಿದಂತೆ ಸೋಂಕಿತರ ಸಂಪರ್ಕದಲ್ಲಿದ್ದ ಒಟ್ಟು ಏಳು ಜನರನ್ನ ವಶಕ್ಕೆ ಪಡೆದು ವೈದ್ಯಾದಿಕಾರಿಗಳು ಪರೀಕ್ಷಗೆ ಒಳಪಡಿಸಿದ್ದು, ಅವರ ರಕ್ತದ ಮಾದರಿಯನ್ನ ಮತ್ತು ಗಂಟಲು ದ್ರವವನ್ನ ಪರೀಕ್ಷೆಗೆ ರವಾನಿಸಿದ್ದಾರೆ.
ಹೊಸಪೇಟೆ
ಹೊಸಪೇಟೆ

ಹೊಸಪೇಟೆ: ಹೊಸಪೇಟೆಯ ಎಸ್.ಆರ್.ನಗರದಲ್ಲಿ ಒಂದೇ ಕುಟುಂಬದ ಮೂರು ಜನರಿಗೆ ಕೊರೊನ ಪಾಸಿಟಿವ್ ಪಕ್ಕ ಆಗಿದೆ, ಕುಟುಂಬಲ್ಲಿ ಇನ್ನುಳಿದ ಇಬ್ಬರು ಸದಸ್ಯರು ಸೇರಿದಂತೆ ಸೋಂಕಿತರ ಸಂಪರ್ಕದಲ್ಲಿದ್ದ ಒಟ್ಟು ಏಳು ಜನರನ್ನ ವಶಕ್ಕೆ ಪಡೆದು ವೈದ್ಯಾದಿಕಾರಿಗಳು ಪರೀಕ್ಷಗೆ ಒಳಪಡಿಸಿದ್ದು, ಅವರ ರಕ್ತದ ಮಾದರಿಯನ್ನ ಮತ್ತು ಗಂಟಲು ದ್ರವವನ್ನ ಪರೀಕ್ಷೆಗೆ ರವಾನಿಸಿದ್ದಾರೆ.

ಇದರಂತೆ ಸೋಂಕಿತ ಕುಟುಂಬದ ಓರ್ವ ಸದಸ್ಯನ ಟ್ರಾವೆಲ್ ಹಿಸ್ಟರಿ ಹೀಗಿದೆ...

ದುಬೈನಿಂದ ಬೆಂಗಳೂರಿಗೆ ಮರಳಿದ್ದ ಸೋಂಕಿತ ಸ್ನೇಹಿತನನ್ನ ಬೇಟಿಯಾಗಲು ಬೆಂಗಳೂರಿಗೆ ತೆರಳಿದ ಹೊಸಪೇಟೆ ಎಸ್.ಆರ್.ನಗರದ ವ್ಯಕ್ತಿ, ಇದೇ ತಿಂಗಳು 19ನೇ ತಾರೀಕಿಗೆ ಹೊಸಪೇಟೆಗೆ ಮರಳಿದ್ದ, 

ಇದಾದ ಬಳಿಕ ದುಬೈಯ್ ನಿಂದ ಬೆಂಗಳೂರಿಗೆ ಮರಳಿದ್ದ ವ್ಯಕ್ತಿ ಕೊರೊನ ಪಾಸಿಟಿವ್ ಎಂದು ತಿಳಿದ ನಂತರ ಆತನ ಸಂಪರ್ಕಕ್ಕೆ ಬಂದ ಎಲ್ಲಾ ಸದಸ್ಯರನ್ನ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಮುಂದಾಗಿತ್ತು, 

ಆ ಹಿನ್ನೆಲೆಯಲ್ಲಿ ದಿನಾಂಕ 25 ತಾರೀಕಿಗೆ ಹೊಸಪೇಟೆಯ ಎಸ್.ಆರ್.ನಗರದ ನಿವಾಸಿ ಮನೆಗೆ ಬಂದ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೋಂಕಿತನ ಸಂಪರ್ಕಕ್ಕೆ ಬಂದ ವ್ಯಕ್ತಿ ಸೇರಿದಂತೆ ಒಟ್ಟು ಮನೆಯ ಮೂರು ಜನ ಸದಸ್ಯರನ್ನ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿ ಅವರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನ ಪರೀಕ್ಷೆಗೆ ಒಳಪಡಿಸಿದ್ದಾರೆ, ಪರೀಕ್ಷೆಗೆ ಒಳಪಡಿಸಿದ ಐದು ದಿನಗಳ ನಂತರ ಕುಟುಂಭದ ಮೂರು ಜನ ಸದಸ್ಯರಲ್ಲಿ ಕೊರೊನ ಪಾಜಿಟಿವ್ ಪಕ್ಕಾ ಆಗಿದೆ,

ದುರಂತ ಎಂದ್ರೆ ಈಗಿರುವ ಸೋಂಕಿತರ ಸಂಖ್ಯೆ ಇನ್ನೂ ದೊಡ್ಡ ಮಟ್ಟದಲ್ಲಿ ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ, ಕಾರಣ 19ನೇ ತಾರೀಕಿಗೆ ಹೊಸಪೇಟೆ ಗೆ ಮರಳಿದ ಸೋಂಕಿತ ವ್ಯಕ್ತಿ ತನ್ನ ಕುಟುಂಭದ ಇಬ್ಬರು ಸದಸ್ಯರಿಗೆ ಸೋಂಕು ಹರಡುವುದಲ್ಲದೆ, ಆತ ವಾಸವಾಗಿರುವ ಪ್ರದೇಶದ ಕೆಲವು ಜನರಿಗೂ ಸೋಂಕು ಅರಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ,ಅಲ್ಲದೆ 20ನೇ ತಾರೀಕು ಶುಕ್ರವಾರದಂದು ಮಸೀದಿಗೆ ತೆರಳಿ ಸಾಮೋಹಿಕ ಪ್ರಾರ್ಥನೆಯನ್ನ ಸಲ್ಲಿಸಿ ಮನೆಗೆ ಬಂದಿದ್ದಾನೆ, 

ಇದಾದ ಬಳಿಕ 22ರಂದು ಜನತಾ ಕರ್ಪ್ಯೂ ಘೋಷಣೆಯಾಗಿತ್ತು, ಆಗಲು ಕೂಡ ಆ ಸೋಂಕಿತ ವ್ಯಕ್ತಿ, ತಾನು ವಾಸವಾಗಿರುವ ನಗರದ ಸ್ನೇಹಿತ ಸಂಭಂದಿಗಳೊಂದಿಗೆ ಹೆಚ್ಚು ಒಡನಾಟ ಹೊಂದಿದ್ದ ಎನ್ನಲಾಗುತ್ತಿದೆ, ಅಂದ್ರೆ ದಿನಾಂಕ 19ನೇ ತಾರೀಕಿನಿಂದ 25ರ ವರೆಗೆ, ಆತನ ಒಡನಾಟದಲ್ಲಿದ್ದವರು ಸುಮಾರು 30ಜನ ಎಂದು ಹೇಳಲಾಗುತ್ತಿದೆ, ಇನ್ನು ಈ 30 ಜನರಿಗೆ ಸೋಂಕು ಹರಿದ್ದೇ ಆದ್ರೆ ಅವರ ಸಂಭಂದಿಗಳು ಮತ್ತು ಸ್ನೇಹಿತರಿಗೆ ಈ ಮಹಾಮಾರಿ ಹರಡದೆ ಬಿಟ್ಟೀತೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. 

ಒಟ್ಟಿನಲ್ಲಿ ಇಂದು ಮೂರು ಜನರಿಗೆ ಈ ಸೋಂಕು ಹರಡಿರುವುದು ಪಕ್ಕಾ ಆಗಿದ್ರು, ನಾಳೆ ಅಥವಾ ನಾಡಿದ್ದು ಈಗ ಪರೀಕ್ಷೆಗೆ ಒಳಪಟ್ಟಿರುವ ಏಳು ಜನರಿಗೂ ಸೋಂಕು ಹರಡಿದ್ರು ಆಶ್ಚರ್ಯಪಡಬೇಕಿಲ್ಲ, ಸದ್ಯಕ್ಕೆ ಎಸ್.ಆರ್.ನಗರವನ್ನ ಸಂಪೂರ್ಣ ವಶಕ್ಕೆ ಪಡೆದಿರುವ ಜಿಲ್ಲಾಡಳಿತ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರತಿಯೊಂದು ರಸ್ತೆಗಳನ್ನ ಬಂದ್ ಮಾಡಿ ಬೇರೆ ಬೇರೆ ನಗರವಾಸಿಗಳು ಎಸ್.ಆರ್.ನಗರವನ್ನ ಸಂಪರ್ಕಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಇನ್ನು ಈ ಮಾರಕ ಕಾಯಿಲೆ ಇನ್ನೂ ಹೆಚ್ಚಿನ ಸಂಖೆಯಲ್ಲಿ ಈ ಪ್ರದೇಶದಲ್ಲಿ ಹಬ್ಬುವ ಸಾದ್ಯತೆ ಇದೆ ಎನ್ನಲಾಗುತ್ತಿದೆ.

ಕಾರಣ ಹೊಸಪೇಟೆ ನಗರದಲ್ಲೇ ಅತಿ ಹೆಚ್ಚು ಜನ ಸಂದಣಿ ಇರುವ ಪ್ರದೇಶ ಇದಾಗಿದೆ. ಅಕ್ಕ ಪಕ್ಕದಲ್ಲಿ ಚಿಕ್ಕ ಚಿಕ್ಕದಾಗಿರುವ ಮನೆಗಳಿದ್ದು, ಒಂದೊಂದು ಮನೆಯಲ್ಲಿ ನಾಲ್ಕರಿಂದ ಐದು ಜನಗಳು ವಾಸಿಸುವುದು ಸರ್ವೇ ಸಾಮಾನ್ಯವಾಗಿದೆ. ಇನ್ನು ಈ ಮಹಾಮಾರಿ ಪತ್ತೆಯಾದ ಹಿನ್ನೆಲೆಯಲ್ಲಿ ಹಗಲು ರಾತ್ರಿ ಪೊಲೀಸರು ನಗರದಾದ್ಯಂತ ಕಟ್ಟೆಚ್ಚರ ವಹಿಸಿ, ಅನಾವಶ್ಯಕವಾಗಿ ಯಾರೇ ಮನೆಯಿಂದ ಆಚೆ ಬಂದ್ರು ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ದ್ವನಿ ವರ್ಧಕದ ಮೂಲಕ ಜನ ಸಾಮಾನ್ಯರಿಗೆ ತಿಳಿ ಹೇಳುತಿದ್ದಾರೆ, 

ಅದಲ್ಲದೆ ನಾಳೆಯಿಂದ ಮನೆಯಿಂದ ಒಬ್ಬ ಸದಸ್ಯರು ಮಾತ್ರ ನಿಗದಿತ ಸಮಯದಲ್ಲಿ ಮನೆಯಿಂದ ಆಚೆ ಬಂದು ದಿನ ಬಳಕೆ ವಸ್ತುಗಳನ್ನ ಖರೀದಿಮಾಡಬೇಕು ಮತ್ತು ಯಾವುದೇ ವಾಹನವನ್ನ ಬಳಸದೆ ಪಾದಚಾರಿಗೆ ನಗರದಲ್ಲಿ ಸಂಚರಿಸಬೇಕೆಂದು ಆದೇಶ ಹೊರಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com