ಕೊರೋನಾ ವೈರಸ್ ನಿಂದ ಎಲ್ಲರಿಗೂ ಕಷ್ಟಕಾಲ, ಕುಡುಕರಿಗಂತೂ ತೀವ್ರ ಬರಗಾಲ!

ಕೊರೋನಾ ವೈರಸ್ ಸಂಬಂಧ ಸಂಪೂರ್ಣ ಲಾಕ್ ಡೌನ್ ಆಗಿರುವುದರಿಂದ ರಾಜ್ಯದಲ್ಲಿ ಮದ್ಯ ಪೂರೈಕೆ ಸ್ಥಗಿತಗೊಂಡಿದೆ. ಇದು ಮದ್ಯಪಾನಿಗಳಿಗೆ ಬೇಸರ ತರಿಸಿದ್ದಂತೂ ಹೌದು.
ಕೊರೋನಾ ವೈರಸ್ ನಿಂದ ಎಲ್ಲರಿಗೂ ಕಷ್ಟಕಾಲ, ಕುಡುಕರಿಗಂತೂ ತೀವ್ರ ಬರಗಾಲ!

ಶಿವಮೊಗ್ಗ: ಕೊರೋನಾ ವೈರಸ್ ಸಂಬಂಧ ಸಂಪೂರ್ಣ ಲಾಕ್ ಡೌನ್ ಆಗಿರುವುದರಿಂದ ರಾಜ್ಯದಲ್ಲಿ ಮದ್ಯ ಪೂರೈಕೆ ಸ್ಥಗಿತಗೊಂಡಿದೆ. ಇದು ಮದ್ಯಪಾನಿಗಳಿಗೆ ಬೇಸರ ತರಿಸಿದ್ದಂತೂ ಹೌದು.

ಮದ್ಯಪಾನ ಮಾಡುವ ಚಟ ಹೊಂದಿರುವವರು ಮದ್ಯ ಸಿಗದೆ ಮಾನಸಿಕ ತೊಳಲಾಟದಿಂದ ಆತ್ಮಹತ್ಯೆ ದಾರಿ ಕಂಡುಕೊಂಡಿದ್ದಾರೆ. ದಕ್ಷಿಣ ಕನ್ನಡದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದು ಕಳೆದ 5 ದಿನಗಳಿಂದೀಚೆಗೆ ಮೂರು ದಕ್ಷಿಣ ರಾಜ್ಯಗಳಲ್ಲಿ ಕುಡಿಯಲು ಸಿಗದೆ 15 ಮಂದಿ ಆತ್ಮಹತ್ಯೆ ಮಾಡಿಕೊಂಡ ವರದಿಯಾಗಿದೆ. ಸರ್ಕಾರ ಮದ್ಯ ಮಾರಾಟ ಆದೇಶವನ್ನು ವಾಪಸ್ಸು ಪಡೆಯುವ ಪರಿಸ್ಥಿತಿಯಲ್ಲಿದೆ.

ಭಾರತೀಯ ಮಾನಸಿಕ ರೋಗಿಗಳ ಸೊಸೈಟಿಯ ಡಾ ಹರೀಶ್ ದೇಲಂತಬೆಟ್ಟು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ಮದ್ಯದ ಚಟ ಹೊಂದಿರುವವರ ಆತ್ಮಹತ್ಯಾ ಪ್ರವೃತ್ತಿ ಬಗ್ಗೆ ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳುತ್ತಾರೆ,

ಮದ್ಯ ಮಾರಾಟವನ್ನು ಹಠಾತ್ ನಿಲ್ಲಿಸಿರುವುದು ಅದರ ಚಟ ಹೊಂದಿರುವವರು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮಾಡುತ್ತಿದೆ, ಸಾವಿರಾರು ಮಂದಿ ದಿನನಿತ್ಯ ಆಲ್ಕೊಹಾಲ್ ಸೇವನೆಯನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಅದು 2-3 ದಿನ ಸಿಗದಿದ್ದಾಗ ಜೀವವನ್ನು ಕಳೆದುಕೊಳ್ಳುವ ದಾರಿ ಹುಡುಕಿಕೊಳ್ಳುತ್ತಾರೆ ಎಂದರು.

ಸಾಮಾಜಿಕ ಕಾರ್ಯಕರ್ತೆ ಮತ್ತು ಮನಃಶಾಸ್ತ್ರಜ್ಞೆ ಡಾ ಸಂಧ್ಯಾ ಕಾವೇರಿ, ಮದ್ಯದ ಅಭ್ಯಾಸ ಹೊಂದಿರುವವರಿಗೆ ಅದು ಸಿಗದಿದ್ದಾಗ ಶಾರೀರಿಕ ಮತ್ತು ಮಾನಸಿಕ ಬದಲಾವಣೆ ತೋರಿಸುತ್ತಾರೆ. ಆತಂಕ, ಕೈ ನಡುಕ, ತಲೆನೋವು, ನಿದ್ದೆ ಬಾರದಿರುವುದು, ಬೆವರುವುದು ಇತ್ಯಾದಿ ಆಗುತ್ತದೆ. ಭ್ರಮೆಯನ್ನು ಕೂಡ ಹೊಂದಿರುತ್ತಾರೆ ಎಂದರು.

ಆಲ್ಕೊಹಾಲ್ ಸೇವನೆ ಹೊಂದಿರುವವರಲ್ಲಿ ಕೋವಿಡ್ 19 ಕಾಣಿಸುತ್ತದೆಯೇ?: ಜರ್ದಾ, ಸಿಗರೇಟು ರೂಪದಲ್ಲಿ ಮದ್ಯ ಸೇವಿಸುವವರು ತಂಬಾಕು ಸೇವನೆ ಮಾಡುತ್ತಾರೆ. ಅವರಲ್ಲಿ ಬಹುತೇಕರಿಗೆ ಕಫ, ಉಸಿರಾಟದ ತೊಂದರೆಯಿರುತ್ತದೆ. ಹೀಗಾಗಿ ಮದ್ಯ ಸೇವನೆ ಸಮಸ್ಯೆ ಇರುವವರಲ್ಲಿ ಕೂಡ ಕೊರೋನಾ ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಹಳ್ಳಿಗಳಲ್ಲಿ ಕೊರೋನಾ ಲಾಕ್ ಡೌನ್ ನಿಂದ ಮದ್ಯ ಸಿಗದೆ ಜನರು ಕಳ್ಳಭಟ್ಟಿ ಸಾರಾಯಿ ಸೇವನೆ ಮೊರೆ ಹೋಗುತ್ತಿದ್ದು ಅದು ಇನ್ನೂ ಅಪಾಯಕಾರಿ ಎನ್ನಲಾಗುತ್ತಿದೆ.

ಹಾಸನದ ಚನ್ನರಾಯಪಟ್ಟಣ ತಾಲ್ಲೂಕಿನ ಮಂಚೇನಹಳ್ಳಿಯಲ್ಲಿ 55 ವರ್ಷದ ವಿಷಕಂಠೇ ಗೌಡ ಎಂಬುವವರು ಕಳೆದ ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕಳೆದ ಕೆಲ ಸಮಯಗಳಿಂದ ಹಲವು ರೋಗಗಳಿಂದ ಬಳಲುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com