ಕೊರೋನಾ ಬರುತ್ತೆ ಅಂತ ಎಲ್ಲರೂ ಮಾಸ್ಕ್ ಧರಿಸಬೇಕಿಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ

ಅನೇಕ ಮಳಿಗೆಗಳು , ಅಂಗಡಿಗಳು ಮತ್ತು ಸಂಸ್ಥೆಗಳು ಮಾಸ್ಕ್ ಧರಿಸುವಂತೆ ಜನರಿಗೆ ಒತ್ತಾಯಿಸುತ್ತಿದೆ ಎನ್ನುವುದು ಗಮನಿಸಿದ ರಾಜ್ಯ ಸರ್ಕಾರ ಮಂಗಳವಾರ ಈ ಸಂಬಂಧ ಸ್ಪಷ್ಟನೆ ನೀಡಿದೆ. ಅದರಂತೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕಾಗಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳುರು: ಅನೇಕ ಮಳಿಗೆಗಳು , ಅಂಗಡಿಗಳು ಮತ್ತು ಸಂಸ್ಥೆಗಳು ಮಾಸ್ಕ್ ಧರಿಸುವಂತೆ ಜನರಿಗೆ ಒತ್ತಾಯಿಸುತ್ತಿದೆ ಎನ್ನುವುದು ಗಮನಿಸಿದ ರಾಜ್ಯ ಸರ್ಕಾರ ಮಂಗಳವಾರ ಈ ಸಂಬಂಧ ಸ್ಪಷ್ಟನೆ ನೀಡಿದೆ. ಅದರಂತೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕಾಗಿಲ್ಲ.

ಹಾಗಾದರೆ ಯಾರ್ಯಾರು ಮಾಸ್ಕ್ ಧರಿಸಬೇಕು ಇಲ್ಲಿದೆ ವಿವರ-

ಒಬ್ಬ ವ್ಯಕ್ತಿಯು ಶೀತ ಅಥವಾ ಕೆಮ್ಮು ಅಥವಾ ಜ್ವರ ಅಥವಾ ಇನ್ನಾವುದೇ ಉಸಿರಾಟದ ತೊಂದರೆಯ ಲಕ್ಷಣದಿಂದ ಕೂಡಿದ್ದಲ್ಲಿ ಮಾತ್ರವೇ ಮಾಸ್ಕ್ ಧರಿಸಬೇಕು ಎಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಹೇಳೀದ್ದಾರೆ.

ಇದಲ್ಲದೆ ಕೋವಿಡ್-19 ಶಂಕಿತ ಅಥವಾ ದೃಢವಾಗಿರುವ ರೋಗಿಯನ್ನು ನೋಡಿಕೊಳ್ಳುವ ವ್ಯಕ್ತಿಯು ಮಾಸ್ಕ್ ಧರಿಸಬೇಕು 

ಉಸಿರಾಟದ ತೊಂದರೆಯ ಲಕ್ಷಣಗಳಿರುವ ರೋಗಿಯ ಪರೀಕ್ಷಿಸಲು ಹಾಜರಾಗುವ  ಆರೋಗ್ಯ ಕಾರ್ಯಕರ್ತ ಮಾಸ್ಕ್ ಧರಿಸಬೇಕಿದೆ. ಕೊರೋನಾ ಶಂಕಿತರು  ಅಥವಾ ರೋಗಿಗಳಿಗೆ ಚಿಕಿತ್ಸೆ ನೀಡುವ ಅಥವಾ ಅವರ ಮೇಲ್ವಿಚಾರಣೆ ನಡೆಸುವ ವ್ಯಕ್ತಿಗಳು ಎನ್95 ಮಾಸ್ಕ್ ಧರಿಸಬೇಕಾಗುತ್ತದೆ. ಉಳಿದವರು  ಟ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್ ಧರಿಸಬಹುದು ಎಂದು ಸರ್ಕಾರ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com