ಹುಬ್ಬಳ್ಳಿ: ಲಾಕ್ ಡೌನ್‌ನಲ್ಲಿ ಸಿಕ್ಕಿಬಿದ್ದ ಮಗ, ತಂದೆ ಚಿತೆಗೆ ಬೆಂಕಿಯಿಟ್ಟ ಪುತ್ರಿ!

ಲಾಕ್ ಡೌನ್ ನಿಂದಾಗಿ ಗದಗದಲ್ಲಿ ಸಿಕ್ಕಿಬಿದ್ದ ಮಗನಿಗೆ ತಂದೆಯ ಅಂತಿಮ ದರ್ಶನವನ್ನು ಪಡೆಯಲು ಸಾಧ್ಯವಾಗಿಲ್ಲ. ಕೊನೆಗೆ ಮಗಳೆ ತಂದೆಯ ಚಿತೆಗೆ ಬೆಂಕಿಯಿಟ್ಟು ಅಂತ್ಯ ಸಂಸ್ಕಾರ ನೆರವೇರಿಸಿದ ಮನಕಲಕುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 

Published: 31st March 2020 06:03 PM  |   Last Updated: 31st March 2020 06:03 PM   |  A+A-


graveyard

ಸ್ನಶಾನ

Posted By : Vishwanath S
Source : The New Indian Express

ಹುಬ್ಬಳ್ಳಿ: ಲಾಕ್ ಡೌನ್ ನಿಂದಾಗಿ ಗದಗದಲ್ಲಿ ಸಿಕ್ಕಿಬಿದ್ದ ಮಗನಿಗೆ ತಂದೆಯ ಅಂತಿಮ ದರ್ಶನವನ್ನು ಪಡೆಯಲು ಸಾಧ್ಯವಾಗಿಲ್ಲ. ಕೊನೆಗೆ ಮಗಳೆ ತಂದೆಯ ಚಿತೆಗೆ ಬೆಂಕಿಯಿಟ್ಟು ಅಂತ್ಯ ಸಂಸ್ಕಾರ ನೆರವೇರಿಸಿದ ಮನಕಲಕುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 

60 ವರ್ಷದ ಅಶೋಕ್ ಚೌಹಾಣ್ ಎಂಬುವರು ಹುಬ್ಬಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಅವರನ್ನು ನೇರವಾಗಿ ಸ್ನಶಾನಕ್ಕೆ ಸಾಗಿಸಲಾಗಿತ್ತು. 10 ಮಂದಿ ಸಮ್ಮುಖದಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. 

ದೇಶಾದ್ಯಂತ ಲಾಕ್ ಡೌನ್ ಇದ್ದ ಹಿನ್ನೆಲೆಯಲ್ಲಿ ಅಶೋಕ್ ಚೌಹಾಣ್ ಪುತ್ರ ಗದಗದಲ್ಲಿ ಸಿಲುಕಿದ್ದರು. ಇನ್ನು ಪುರೋಹಿತರು ಇಲ್ಲದೆ ಕೊನೆಯ ವಿಧಿವಿಧಾನ ಏನನ್ನು ಮಾಡದೇ ಬರೀ ಮರದ ದಿಮ್ಮಿಗಳನ್ನು ಜೋಡಿಸಿ ಅಗ್ನಿ ಸ್ಪರ್ಶ ನೀಡಲಾಯಿತು

ಹೊಟೇಲ್ ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಅಶೋಕ್ ಚೌಹಾಣ್ ಅವರು ಭಾನುವಾರ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp