ಕಲಬುರಗಿ: ಕ್ವಾರಂಟೈನ್ ಆಸ್ಪತ್ರೆಗಳಾಗಿ ಮಾರ್ಪಟ್ಟ 48 ಹೋಟೆಲ್ಸ್ ಗಳು
ಜಿಲ್ಲೆಯ 48 ಹೊಟೇಲ್ ಗಳನ್ನು ಕೋವಿದ್ 19 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳನ್ನಾಗಿ ಮಾರ್ಪಡಿಸುವಂತೆ ಜಿಲ್ಲಾಧಿಕಾರಿ ಬಿ.ಶರತ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Published: 01st May 2020 11:46 AM | Last Updated: 01st May 2020 11:46 AM | A+A A-

ಸಾಂದರ್ಭಿಕ ಚಿತ್ರ
ಕಲಬುರಗಿ: ಜಿಲ್ಲೆಯ 48 ಹೊಟೇಲ್ ಗಳನ್ನು ಕೋವಿದ್ 19 ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳನ್ನಾಗಿ ಮಾರ್ಪಡಿಸುವಂತೆ ಜಿಲ್ಲಾಧಿಕಾರಿ ಬಿ.ಶರತ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಹೊಟೇಲ್ ಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಬದಲಿಸುವಂತೆ ಸೂಚಿಸಿದ್ದಾರೆ.
ಕಾಳಿಂಗ್ ಡೀಲಕ್ಸ್ ಲಾಡ್ಜ್, ಸಿಟಿ ಪಾರ್ಕ್, ಸೆಂಟ್ರಲ್ ಪಾರ್ಕ್, ಮಲ್ಲಿಗೆ ಲಾಡ್ಜ್, ಸೇರಿದಂತೆ ಒಟ್ಟು 48 ಹೊಟೆಲ್ ಗಳನ್ನು ಜಿಲ್ಲಾಡಳಿತ ಗುರುತಿಸಿದೆ.
ಏಪ್ರಿಲ್ 29 ರಿಂದ ಏಪ್ರಿಲ್ 30 ರವೆರೆಗೆ ಕಲಬುರಗಿಯಲ್ಲಿ 30 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಟ್ಟಾರೆ ಇದುವರೆಗೆ 565 ಕೇಸ್ ಗಳು ದಾಖಲಾಗಿವೆ.