ಕೊರೋನಾ ಬಿಕ್ಕಟ್ಟನ್ನು ಶಮನ ಮಾಡಲು ಬೆಂಗಳೂರು ಮೂಲದ ವೈದ್ಯೆಗೆ ಬ್ರಿಟನ್‌ನಿಂದ ದುಂಬಾಲು!

ಕೋವಿಡ್ ಬಿಕ್ಕಟ್ಟನ್ನು ನಿರ್ವಹಿಸಲು ರಾಷ್ಟ್ರಕ್ಕೆ ಸಹಾಯ ಮಾಡುವಂತೆ ಬ್ರಿಟನ್ ಸರ್ಕಾರವು ಬೆಂಗಳೂರು ಮೂಲದ ವೈದ್ಯಗೆ ಮನವಿ ಮಾಡಿದೆ. 
ರೂಪಾ ವೆಂಕಟೇಶ್
ರೂಪಾ ವೆಂಕಟೇಶ್

ಬೆಂಗಳೂರು: ಕೋವಿಡ್ ಬಿಕ್ಕಟ್ಟನ್ನು ನಿರ್ವಹಿಸಲು ರಾಷ್ಟ್ರಕ್ಕೆ ಸಹಾಯ ಮಾಡುವಂತೆ ಬ್ರಿಟನ್ ಸರ್ಕಾರವು ಬೆಂಗಳೂರು ಮೂಲದ ವೈದ್ಯಗೆ ಮನವಿ ಮಾಡಿದೆ. 

ಬೆಂಗಳೂರು ಮೂಲದ ವೈದ್ಯ ರೂಪ ವೆಂಕಟೇಶ್ ಎಂಬುವರಿಗೆ ಯುಕೆ ಸರ್ಕಾರವು ವೈಯಕ್ತಿಕ ಇಮೇಲ್ ಕಳುಹಿಸಿದೆ. ಹೀಗಾಗಿ ರೂಪಾ ಅವರು ಬ್ರಿಟನ್ ಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಯುಕೆ ನಿವಾಸ ಪರವಾನಗಿ ಮತ್ತು ಅಲ್ಲಿ ಸಾಮಾನ್ಯ ವೈದ್ಯರಾಗಿ ಅಭ್ಯಾಸ ಮಾಡಲು ಪರವಾನಗಿ ಹೊಂದಿರುವ ಡಾ.ರೂಪಾ ವೆಂಕಟೇಶ್ ಅವರು ತನ್ನ 13 ವರ್ಷದ ಮಗ ಸ್ಕಂದ ಅವರೊಂದಿಗೆ ಯುಕೆಗೆ ತೆರಳಲು ಯೋಜಿಸುತ್ತಿದ್ದು, ಅಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಲು ಬಯಸುತ್ತಿದ್ದಾರೆ. 

ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಇದನ್ನು ವಿಶೇಷ ಪ್ರಕರಣವೆಂದು ಭಾವಿಸಿ ಮತ್ತು ಬಹಳ ಕಡಿಮೆ ಅವಧಿಯಲ್ಲಿ ತನ್ನ ಪಾಸ್ಪೋರ್ಟ್ ಅನ್ನು ನವೀಕರಿಸುತ್ತಿದೆ. ಅವರು ಯುಕೆ ಸರ್ಕಾರ ಆಯೋಜಿಸುತ್ತಿರುವ ಯಾವುದೇ ವಿಶೇಷ ವಿಮಾನಗಳ ಮೂಲಕ ಪ್ರಯಾಣಿಸಲಿದ್ದಾರೆ. ರೂಪಾ ಜುಲೈ 2016ರಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ತನ್ನದೇ ಆದ ಕ್ಲಿನಿಕ್ ತೆರೆಯುವ ಯೋಜನೆ ಹೊಂದಿದ್ದರು. ಅವರು ರಾಜರಾಜೇಶ್ವರಿ ನಗರದಲ್ಲಿ ಪತಿ ವೆಂಕಟೇಶ್ ಅವರೊಂದಿಗೆ ವಾಸಿಸುತ್ತಿದ್ದಾರೆ, ಯುಕೆ ನಲ್ಲಿ ಅಭ್ಯಾಸ ಮಾಡಲು ಪರವಾನಗಿ ಹೊಂದಿರುವ ವೈದ್ಯರೂ ಆಗಿದ್ದಾರೆ. ದಂಪತಿಗೆ ಎಂಟು ವರ್ಷದ ಇನ್ನೊಬ್ಬ ಮಗ ಮತ್ತು ಮೂರು ವರ್ಷದ ಮಗಳು ಇದ್ದಾರೆ.

ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವೀಧರೆ, ಅವರು ಸ್ನಾತಕೋತ್ತರ ಪದವಿಗಾಗಿ 2002ರಲ್ಲಿ ಯುಕೆಗೆ ತೆರಳಿದ್ದರು. ಮತ್ತು ಅಲ್ಲಿ 15 ವರ್ಷಗಳ ಕಾಲ ವಾಸಿಸುತ್ತಿದ್ದರು. "ಯುಕೆ ಆಸ್ಪತ್ರೆಗಳಲ್ಲಿ ಮುಂಚೂಣಿ ಸಿಬ್ಬಂದಿಯಾಗಿ ಹಲವು ವರ್ಷಗಳ ಅನುಭವ ನನಗಿದೆ. ಹೀಗಾಗಿ ನಾನು ಹೆಚ್ಚಿನ ಕೊಡುಗೆ ನೀಡಬಹುದೆಂದು ನಾನು ಭಾವಿಸುತ್ತೇನೆ ಎಂದರು. 

ಟೆಲಿಕಾನ್ಸಲ್ಟೇಶನ್ ಮುಂಭಾಗದಲ್ಲಿ ಅನುಭವಿ ಸಿಬ್ಬಂದಿಗೆ ಭಾರಿ ಬೇಡಿಕೆಯಿದೆ ಮತ್ತು ನಾನು ಆ ಪಾತ್ರವನ್ನು ಆಯ್ಕೆ ಮಾಡಲು ನಿರ್ಧರಿಸಿದ್ದೇನೆ. ಇದು ರೋಗಿಗಳೊಂದಿಗೆ ಮುಖಾಮುಖಿ ಭೇಟಿಯನ್ನು ಒಳಗೊಂಡಿರುವುದಿಲ್ಲ ಎಂದು ಡಾ. ರೂಪಾ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ರೂಪಾ ಅವರು ಬ್ರಿಟನ್ ನಲ್ಲಿ ಇರಾನ್-ಇರಾಕ್ ಯುದ್ಧದ ಸಮಯದಲ್ಲಿ, ಅಸಂಖ್ಯಾತ ಹಂದಿ ಜ್ವರ ರೋಗಿಗಳಿಗೆ ಮತ್ತು ರಾಸಾಯನಿಕ ಯುದ್ಧದಲ್ಲಿ ಗಾಯಗೊಂಡಿದ್ದವರಿಗೆ ಚಿಕಿತ್ಸೆ ನೀಡಿದ್ದಾರೆ. ಸೆಪ್ಟೆಂಬರ್ ವರೆಗೆ ಅವಳು ಅಲ್ಲಿ ಕೆಲಸ ಮಾಡಬೇಕೆಂದು ಯುಕೆ ಬಯಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com