ಗ್ರಾಮ ಪಂಚಾಯತ್ ನ ಟ್ಯಾಂಕ್, ಕೊಳ, ಪಟ್ಟಾ ಜಮೀನುಗಳಲ್ಲಿ ಮರಳುಗಾರಿಕೆಗೆ ಅವಕಾಶ:ಸಚಿವ ಸಂಪುಟ ಒಪ್ಪಿಗೆ

ದುಬಾರಿ ಮರಳು ಬೆಲೆ ನಿಯಂತ್ರಣಕ್ಕೆ ಮತ್ತು ಸರ್ಕಾರಕ್ಕೆ ಹೆಚ್ಚಿನ ಆದಾಯ ತರಲು ರಾಜ್ಯ ಸಚಿವ ಸಂಪುಟ ನದಿ ಜಲಾನಯನ ಮತ್ತು ತೀರ ಪ್ರದೇಶಗಳಿಗೆ ಸೀಮಿತವಾಗಿದ್ದ ಮರಳು ಗಣಿಗಾರಿಕೆ ವಿಸ್ತರಿಸಲು ನಿರ್ಧರಿಸಿದೆ. ಸಚಿವ ಸಂಪುಟ ಹೊಸ ಮರಳು ನೀತಿಗೆ ಒಪ್ಪಿಗೆ ನೀಡಿದ್ದು ಅದರ ಪ್ರಕಾರ ಟ್ಯಾಂಕ್, ಕೆರೆ ಮತ್ತು ಪಟ್ಟಾ ಜಮೀನುಗಳಲ್ಲಿ ಸಹ ಗಣಿಗಾರಿಕೆ ಮಾಡಬಹುದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದುಬಾರಿ ಮರಳು ಬೆಲೆ ನಿಯಂತ್ರಣಕ್ಕೆ ಮತ್ತು ಸರ್ಕಾರಕ್ಕೆ ಹೆಚ್ಚಿನ ಆದಾಯ ತರಲು ರಾಜ್ಯ ಸಚಿವ ಸಂಪುಟ ನದಿ ಜಲಾನಯನ ಮತ್ತು ತೀರ ಪ್ರದೇಶಗಳಿಗೆ ಸೀಮಿತವಾಗಿದ್ದ ಮರಳು ಗಣಿಗಾರಿಕೆ ವಿಸ್ತರಿಸಲು ನಿರ್ಧರಿಸಿದೆ. ಸಚಿವ ಸಂಪುಟ ಹೊಸ ಮರಳು ನೀತಿಗೆ ಒಪ್ಪಿಗೆ ನೀಡಿದ್ದು ಅದರ ಪ್ರಕಾರ ಟ್ಯಾಂಕ್, ಕೆರೆ ಮತ್ತು ಪಟ್ಟಾ ಜಮೀನುಗಳಲ್ಲಿ ಸಹ ಗಣಿಗಾರಿಕೆ ಮಾಡಬಹುದಾಗಿದೆ.

ಗ್ರಾಮ ಪಂಚಾಯತ್ ಸರಹದ್ದಿನ ಟ್ಯಾಂಕ್, ಕೊಳಗಳು ಮತ್ತು ಪಟ್ಟಾ ಜಮೀನುಗಳಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲು ಸಚಿವ ಸಂಪುಟ ನಿರ್ಧರಿಸಿದ್ದು ಹೊಸ ನೀತಿಯ ಉಸ್ತುವಾರಿ ನೋಡಿಕೊಳ್ಳಲು ಪ್ರಾಧಿಕಾರವನ್ನು ರಚಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ. ಆಯಾ ತಾಲ್ಲೂಕುಗಳ ತಹಶಿಲ್ದಾರ್ ಗಳು ಯಾವ ರೀತಿ, ಎಷ್ಟು ಮರಳು ಗಣಿಗಾರಿಕೆ ಮಾಡಬೇಕೆಂದು ಅನುಮತಿ ನೀಡುವ ಅಧಿಕಾರ ಹೊಂದಿರುತ್ತಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ತಿಳಿಸಿದರು.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಅವರು, ಮರಳು ಕೊರತೆ ಮತ್ತು ಬೆಲೆಯಲ್ಲಿ ಆಗುತ್ತಿರುವ ಏರಿಳಿತವನ್ನು ತಡೆಗಟ್ಟಲು ಹೊಸ ಮರಳು ನೀತಿಗೆ ಒಪ್ಪಿಗೆ ನೀಡಲಾಗಿದೆ. ಸರ್ಕಾರದ ಕಟ್ಟಡಗಳ ನಿರ್ಮಾಣಕ್ಕೆ ಅಥವಾ ಜನತಾ ಮನೆಗಳ ನಿರ್ಮಾಣಕ್ಕೆ ಬಳಸುವ ಮರಳಿಗೆ ಒಂದು ಮೆಟ್ರಿಕ್ ಟನ್ ಗೆ ಸುಮಾರು 700 ರೂಪಾಯಿ ನಿಗದಿಪಡಿಸಲಾಗಿದೆ. ದೊಡ್ಡ ದೊಡ್ಡ ಉದ್ದಿಮೆ ಕಟ್ಟಡಗಳು, ನಿರ್ಮಾಣ ಮನೆಗಳ ನಿರ್ಮಾಣಕ್ಕೆ ಬಳಸುವ ಮರಳಿಗೆ ಬಿಡ್ಡಿಂಗ್ ಮೂಲಕ ದರ ನಿಗದಿಪಡಿಸಲಾಗುತ್ತದೆ. ಹೊಸ ಮರಳು ನೀತಿಯಿಂದ ಸರ್ಕಾರದ ಬೊಕ್ಕಸಕ್ಕೆ 60ರಿಂದ 70 ಕೋಟಿ ರೂಪಾಯಿ ಸಂಗ್ರಹವಾಗಬಹುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com