ಲಾಕ್ ಡೌನ್ ನಿಂದ ಮುನ್ನೆಲೆಗೆ ಬಂದ ಅಂಚೆಯಣ್ಣ: ಶೀಘ್ರದಲ್ಲೇ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ತರಕಾರಿ

ಲಾಕ್‌ಡೌನ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ರವಾನಿಸಲು ನೋಡುತ್ತಿರುವ ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಕರ್ನಾಟಕ ಅಂಚೆ ಇಲಾಖೆ ಹೊಸ ಕ್ರಮವನ್ನು ಪ್ರಾರಂಭಿಸಿದ್ದು, ಅಂಚೆ ಕಚೇರಿಗಳಲ್ಲಿ ಕಾಯ್ದಿರಿಸಿದ ಪಾರ್ಸೆಲ್‌ಗಳ ಮೂಲಕ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಬಹುದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲಾಕ್‌ಡೌನ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ರವಾನಿಸಲು ನೋಡುತ್ತಿರುವ ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಕರ್ನಾಟಕ ಅಂಚೆ ಇಲಾಖೆ ಹೊಸ ಕ್ರಮವನ್ನು ಪ್ರಾರಂಭಿಸಿದ್ದು, ಅಂಚೆ ಕಚೇರಿಗಳಲ್ಲಿ ಕಾಯ್ದಿರಿಸಿದ ಪಾರ್ಸೆಲ್‌ಗಳ ಮೂಲಕ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಬಹುದಾಗಿದೆ.

ಹದಿನೈದು ದಿನಗಳ ಹಿಂದೆ ಪ್ರಾರಂಭವಾದ ಮಾವಿನ ಹಣ್ಣಿನ ಪಾರ್ಸೆಲ್‌ಗಳನ್ನು ರವಾನಿಸಿದಾಗ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ರಮವನ್ನು ಪ್ರಾರಂಭಿಸಲಾಗಿದೆ. ಅಂಚೆ ಮೂಲಕ ಯಾರು ಪಾರ್ಸೆಲ್ ಬುಕ್ ಮಾಡುತ್ತಾರೋ ಅವರಿಗೆ ಕಳುಹಿಸಲಾಗುತ್ತದೆ.

ಲಾಕ್ ಡೌನ್ ಬಿಕ್ಕಟ್ಟಿನ  ವಿವಿಧ ಪ್ರದೇಶಗಳಲ್ಲಿನ ಅಂಚೆ ಕಚೇರಿಗಳ ಅಧೀಕ್ಷಕರಿಂದ ಒಪ್ಪಿಗೆ ಪಡೆದ ನಂತರ ಹಾಳಾಗುವ ಉತ್ಪನ್ನಗಳನ್ನು  ಪೋಸ್ಟ್ ಮೂಲಕ ರವಾನಿಸಬಹುದು ಎಂದು ಮುಖ್ಯ ಪೋಸ್ಟ್  ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೊ ಹೇಳಿದ್ದಾರೆ. ಅಧೀಕ್ಷಕರ ಕಚೇರಿಯಿಂದ ರವಾನೆಗೆ ಪರವಾನಗಿ ಪಡೆಯದೇ ರೈತರು ನೇರವಾಗಿ ಅಂಚೆ ಕಚೇರಿಗಳನ್ನು ಸಂಪರ್ಕಿಸಲು  ಸಾಧ್ಯವಿಲ್ಲ.

ಏಕೆಂದರೇ ಹಾಳಾಗದಂತೆ ತರಕಾರಿ ಮತ್ತು ಹಣ್ಣುಗಳನ್ನು ಸುರಕ್ಷಿತವಾಗಿ ಅದು ತಲುಪಬೇಕಾದ ಸ್ಥಳಕ್ಕೆ ತಲುಪಿಸಬೇಕಾಗುತ್ತದೆ. ಸಮಯ ಮತ್ತು ಅಂತರವನ್ನು ಈ ವೇಳೆ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಲಾಕ್ ಡೌನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬೆಳೆ ಬೆಳೆದಿರುವ ರೈತರ ಉತ್ಪನ್ನಗಳು ಹಾಳಾಗಬಾರದೆಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ
ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನೊಳಗೆ ಪ್ರಾರಂಭಿಸಲಾದ ಮಾವಿನ ವಿತರಣೆಯ ಬಗ್ಗೆ ಕೇಳಿದ ಆಂಧ್ರಪ್ರದೇಶದ ರೈತ ಮಹೇಶ್ ರಾಂಪುರಂ ಅವರು ಗುರುವಾರ ಗದಗದಲ್ಲಿನ ಅಂಚೆ ಕಚೇರಿಯನ್ನು ಸಂಪರ್ಕಿಸಿದರು ಮತ್ತು ಸಾವಯವ ಮಾವಿನಕಾಯಿಗಳನ್ನು ಬೃಹತ್ ಪ್ರಮಾಣದಲ್ಲಿ ಬೆಂಗಳೂರಿಗೆ ಕಳುಹಿಸಬೇಕೆಂದು ಕೋರಿದ್ದಾರೆ.

ಸದ್ಯ ಈ ಯೋಜನೆ ಕೇವಲ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿತ್ತು.  ಆದರೆ ಆಂಧ್ರದ ರೈತನಿಗೆ ಗದಗ ಪೋಸ್ಟ್ ಮಾಸ್ಚರ್ ಸಹಾಯ ಮಾಡಲು ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com