ಮದ್ಯ ಸೇವನೆ ಮತ್ತೆ ಪ್ರಾರಂಭಿಸಬೇಡಿ-ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಮನವಿ

ಕೊರೋನಾ ಲಾಕ್ ಡೌನ್ ಕಾರಣದಿಂದಾಗಿ ಮದ್ಯ ಮಾರಾಟ ನಿಷೇಧವಾಗಿದ್ದರಿಂದ ಕಳೆದ 40 ದಿನಗಳಿಂದ ಮದ್ಯ ಲಭ್ಯವಿಲ್ಲದೆ ಮದ್ಯವ್ಯಸನಿಗಳು ದಿನಕಳೆದಿದ್ದಾರೆ. ಮತ್ತೆ ಮದ್ಯಸೇವನೆ ಆರಂಭಿಸುವುದು ಬೇಡ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಜನರಲ್ಲಿ ಮನವಿ ಮಾಡಿದ್ದಾರೆ.
ಧರ್ಮಸ್ಥಳ ವೀರೇಂದ್ರ ಹೆಗ್ಗಡೆ
ಧರ್ಮಸ್ಥಳ ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ:ಕೊರೋನಾ ಲಾಕ್ ಡೌನ್ ಕಾರಣದಿಂದಾಗಿ ಮದ್ಯ ಮಾರಾಟ ನಿಷೇಧವಾಗಿದ್ದರಿಂದ ಕಳೆದ 40 ದಿನಗಳಿಂದ ಮದ್ಯ ಲಭ್ಯವಿಲ್ಲದೆ ಮದ್ಯವ್ಯಸನಿಗಳು ದಿನಕಳೆದಿದ್ದಾರೆ. ಮತ್ತೆ ಮದ್ಯಸೇವನೆ ಆರಂಭಿಸುವುದು ಬೇಡ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಜನರಲ್ಲಿ ಮನವಿ ಮಾಡಿದ್ದಾರೆ.

ಮದ್ಯ ಸೇವನೆಯಿಲ್ಲದೆ ಮನೆಗಳಲ್ಲಿ ಸಂತೋಷ, ನೆಮ್ಮದಿ ಹೆಚ್ಚಾಗಿದೆ. ಅನೇಕರ ಆರೋಗ್ಯ ಸುಧಾರಿಸಿದೆ.ಮನೆಯ ಖರ್ಚು ಕಡಿಮೆಯಾಗಿದೆ. ಮದ್ಯ ಸೇವನೆ ಬಿಟ್ಟಿದ್ದರಿಂದ ಏನೂ ಕೆಡುಕಾಗಿಲ್ಲ. ಹಾಗಿರುವಾಗ ಇದೀಗ ಮತ್ತೊಮ್ಮೆ ಮದ್ಯ ಸೇವನೆ ಯಾಕೆ, ದಯವಿಟ್ಟು ಯಾರೂ ಮದ್ಯ ಸೇವನೆಯನ್ನು ಪುನರ್ ಪ್ರಾರಂಭಿಸಬೇಡಿ ಎಂದು ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಮದ್ಯಸೇವನೆ ಮುಕ್ತ ಸಮಾಜ ನಿರ್ಮಾಣ ಮಹಾತ್ಮಾ ಗಾಂಧೀಜಿಯವರ ಕನಸಾಗಿತ್ತು. ನಮ್ಮ ಆಶಯವೂ ಕೂಡ ಅದುವೇ. ಹೀಗಾಗಿ ಮದ್ಯಪಾನ ಶಾಶ್ವತವಾಗಿ ತ್ಯಜಿಸುವ ತೀರ್ಮಾನ ಮಾಡಿ ಎಂದು ಜನರಲ್ಲಿ ಹೆಗ್ಗಡೆ ಮನವಿ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com