ರಾಜ್ಯದಲ್ಲಿ ಇಂದು 13 ಹೊಸ ಕೊರೋನಾವೈರಸ್ ಪ್ರಕರಣಗಳು ಪತ್ತೆ: ಸೋಂಕಿತರ ಸಂಖ್ಯೆ 614ಕ್ಕೆ ಏರಿಕೆ

ರಾಜ್ಯದಲ್ಲಿ ಇಂದು 13 ಹೊಸ ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗಿನ ಒಟ್ಟಾರೇ ಸೋಂಕಿತರ ಸಂಖ್ಯೆ 614ಕ್ಕೆ ಏರಿಕೆ ಆಗಿದೆ. 25 ಮಂದಿ ಮೃತಪಟ್ಟಿದ್ದು  293 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ

ಬೆಂಗಳೂರು: ರಾಜ್ಯದಲ್ಲಿ ಇಂದು 13 ಹೊಸ ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗಿನ ಒಟ್ಟಾರೇ ಸೋಂಕಿತರ ಸಂಖ್ಯೆ 614ಕ್ಕೆ ಏರಿಕೆ ಆಗಿದೆ. 25 ಮಂದಿ ಮೃತಪಟ್ಟಿದ್ದು  293 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಲಾಗಿದೆ.

ಕಲಬುರಗಿಯಲ್ಲಿ ಆರು, ಬೆಂಗಳೂರು ನಗರ ಜಿಲ್ಲೆಯಲ್ಲಿ 4 ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ಪ್ರಕರಣಗಳು ಇಂದು ಪತ್ತೆಯಾಗಿವೆ.

602ನೇ ರೋಗಿ ಕಲಬುರಗಿಯ 13 ವರ್ಷದ  ಬಾಲಕಿಯಾಗಿದ್ದು, 532 ನೇ ರೋಗಿಯೊಂದಿಗೆ ಸಂಪರ್ಕ ಹೊಂದಿದ್ದಾರೆ. 603ನೇ ರೋಗಿ ಕಲಬುರಗಿಯ 54 ವರ್ಷದ ಪುರುಷನಾಗಿದ್ದು,  532 ರೋಗಿಯೊಂದಿಗೆ ಸಂಪರ್ಕ ಹೊಂದಿದ್ದವರಾಗಿದ್ದಾರೆ. 604ನೇ ರೋಗಿ ಕಲಬುರಗಿಯವರಾಗಿದ್ದು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ.  605, 606ನೇ ರೋಗಿ ಬಾಗಲಕೋಟೆ ಜಿಲ್ಲೆಯ  ಮುದೋಳದವರಾಗಿದ್ದಾರೆ. 607ನೇ ರೋಗಿ ಬಾದಾಮಿಯ ಮಹಿಳೆಯಾಗಿದ್ದಾರೆ.
 
608ನೇ ರೋಗಿ ಬೆಂಗಳೂರಿನ 24 ವರ್ಷದ ಯುವಕನಾಗಿದ್ದಾರೆ. 609, 610 ಮತ್ತು 611ನೇ ರೋಗಿ ಕಲಬುರಗಿಯವರಾಗಿದ್ದಾರೆ. 612, 613 ಮತ್ತು 614ನೇ ರೋಗಿಗಳು ಬೆಂಗಳೂರಿನ ಮಹಿಳೆಯರಾಗಿದ್ದಾರೆ. ಇವರೆಲ್ಲರಿಗೂ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com