ಬೆಂಗಳೂರು: ಮೇ 4ರಿಂದ ಕಾಲೇಜು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ

ಕೊರೊನಾ ವೈರಸ್ ಲಾಕ್‌ಡೌನ್ ಮೇ 17ರವರೆಗೆ ಮುಂದುವರಿಕೆಯಾಗಿದ್ದರೂ ಕೂಡಾ, ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸರ್ಕಾರ ಸೂಚನೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೊನಾ ವೈರಸ್ ಲಾಕ್‌ಡೌನ್ ಮೇ 17ರವರೆಗೆ ಮುಂದುವರಿಕೆಯಾಗಿದ್ದರೂ ಕೂಡಾ, ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೋಮವಾರದಿಂದ ಕರ್ತವ್ಯಕ್ಕೆ  ಹಾಜರಾಗಬೇಕೆಂದು ಸರ್ಕಾರ ಸೂಚನೆ ನೀಡಿದೆ.

ಕಾಲೇಜಿಗೆ ವಿದ್ಯಾರ್ಥಿಗಳು ಬರಲು ನಿರ್ಬಂಧ ಮುಂದುವರೆದಿದ್ದರೂ ಕೂಡಾ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕಿದೆ.ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯ ಎಲ್ಲಾ ಸರ್ಕಾರಿ ಕಚೇರಿಗಳು, ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳ ಗ್ರೂಪ್‌ ಎ ಮತ್ತು ಬಿ ವೃಂದದ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಾಲೇಜ್‌ಗೆ ಕಡ್ಡಾಯವಾಗಿ
ಹಾಜರಾಗಬೇಕಿದೆ. 

ಗ್ರೂಪ್‌ ಸಿ ಮತ್ತು ಡಿ ವೃಂದದ ಶೇ. 33ರಷ್ಟು ಸಿಬ್ಬಂದಿ ಕೂಡಾ ಕರ್ತವ್ಯಕ್ಕೆ ಹಾಜರಿರಬೇಕಿದೆ. ಗ್ರೂಪ್‌ ಸಿ ಮತ್ತು ಡಿ ವೃಂದದ ಸಿಬ್ಬಂದಿಯ ಪೈಕಿ ಯಾರು ಬರಬೇಕು, ಬರಬಾರದು ಅನ್ನೋದನ್ನು ಕಚೇರಿ ಮುಖ್ಯಸ್ಥರು ನಿರ್ಧರಿಸಬೇಕಿದೆ. ಇನ್ನು, ಕೆಂಪು ವಲಯ ಹೊರತುಪಡಿಸಿ ಇನ್ನು ಮಿಕ್ಕೆಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯ ಎಲ್ಲಾ ಸರ್ಕಾರಿ ಕಚೇರಿಗಳು, ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳ ಶೇ. 100ರಷ್ಟು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೂಡಾ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com