ಮದ್ಯ ಕೊಳ್ಳಲು ಸಾಲಲ್ಲಿ ನಿಂತಿರುವ ಮದ್ಯ ಪ್ರಿಯರು
ಮದ್ಯ ಕೊಳ್ಳಲು ಸಾಲಲ್ಲಿ ನಿಂತಿರುವ ಮದ್ಯ ಪ್ರಿಯರು

ಅಜ್ಞಾತವಾಸ ಅಂತ್ಯ: 40 ದಿನಗಳ ಬಳಿಕ ಮದ್ಯದಂಗಡಿ ಓಪನ್, ಕಿಲೋಮೀಟರ್'ಗಟ್ಟಲೆ ಕ್ಯೂ ನಿಂತ ಮದ್ಯಪ್ರಿಯರು

ಲಾಕ್'ಡೌನ್ ಜಾರಿಯಾಗಿ ಬರೋಬ್ಬರಿ 40 ದಿನಗಳ ಬಳಿಕ ಕೊರೋನಾ ಕಂಟೈನ್ಮೆಂಟ್ ವಲಯ ಹೊರತುಪಡಿಸಿ ರಾಜ್ಯದಾದ್ಯಂತ ಸೋಮವಾರ ಮದ್ಯ ಮರಾಟ  ಆರಂಭವಾಗಿದ್ದು, ಕಿಲೋಮೀಟರ್ ಗಟ್ಟಲೆ ನಿಲ್ಲುತ್ತಿರುವ ಮದ್ಯಪ್ರಿಯರು ಎಣ್ಣೆ ಖರೀದಿ ಮಾಡಲು ಮುಗಿ ಬೀಳುತ್ತಿದ್ದಾರೆ. 

ಬೆಂಗಳೂರು: ಲಾಕ್'ಡೌನ್ ಜಾರಿಯಾಗಿ ಬರೋಬ್ಬರಿ 40 ದಿನಗಳ ಬಳಿಕ ಕೊರೋನಾ ಕಂಟೈನ್ಮೆಂಟ್ ವಲಯ ಹೊರತುಪಡಿಸಿ ರಾಜ್ಯದಾದ್ಯಂತ ಸೋಮವಾರ ಮದ್ಯ ಮರಾಟ  ಆರಂಭವಾಗಿದ್ದು, ಕಿಲೋಮೀಟರ್ ಗಟ್ಟಲೆ ನಿಲ್ಲುತ್ತಿರುವ ಮದ್ಯಪ್ರಿಯರು ಎಣ್ಣೆ ಖರೀದಿ ಮಾಡಲು ಮುಗಿ ಬೀಳುತ್ತಿದ್ದಾರೆ. 

ಎಲ್ಲಾ ಎಂಎಂಐಎಲ್, ಎಂಆರ್'ಪಿ ಮತ್ತು ಮದ್ಯದ ಅಂಗಡಿಗಳಲ್ಲಿ ಮಾರ್ಗಸೂಚಿ ನಿಯಮದ ಪ್ರಕಾರ ಮದ್ಯ ಮಾರಾಟ ಮಾಡಲಾಗುತ್ತಿದೆ. 

ಪ್ರತಿ ಮದ್ಯದ ಅಂಗಡಿಗಳ ಮುಂದೆ ವೈಯಕ್ತಿಕ ಅಂತರ ಕಾಪಾಡಿಕೊಳ್ಳಲು, ಗುರುತು ಹಾಕಲಾಗಿದ್ದು, ಬೆಳಗಿನ ಜಾವದಿಂದಲೇ ಮದ್ಯ ಪ್ರಿಯರು ಗುರುತು ಹಾಕಲಾಗಿರುವ ಜಾಗದಲ್ಲಿ ಕೈಚೀಲ ಹಾಕಿ ಕಾದು ಕುಳಿತಿರುವ ದೃಶ್ಯಗಳು ಸಾಮಾನ್ಯವಾಗಿದೆ. 

ಈ ನಡುವೆ ನುಕು ನುಗ್ಗಲು ಉಂಟಾಗದಂತೆ ಹಾಗೂ ನಿಯಮಗಳನ್ನು ಕಾಯ್ದುಕೊಳ್ಳುವ ಕುರಿತಂತೆ ಪರಿಶೀಲನೆ ನಡೆಸಲು ಈಗಾಗಲೇ ಅಂಗಡಿಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ಭದ್ರತೆ ನೀಡುತ್ತಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com