ಲಾಕ್'ಡೌನ್ ಸಡಿಲಿಕೆ ಬೆನ್ನಲ್ಲೇ ದೇಶದಲ್ಲಿ ಮದ್ಯಕ್ಕೆ ಮುಗಿಬಿದ್ದ ಪಾನಪ್ರಿಯರು: ಹಲವೆಡೆ ಲಾಠಿ ಚಾರ್ಜ್

ದೇಶದಾದ್ಯಂತ ಸೋಮವಾರ ಲಾಕ್'ಡೌನ್ ಸಡಿಲಿಕೆಗೊಂಡಿದ್ದು ಹಾಗೂ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೇ ಕೊರೋನಾ ವೈರಸ್ ಮರೆತ ಜನರು ಭಾರೀ ಪ್ರಮಾಣದಲ್ಲಿ ಬೀದಿಗಿಳಿದಿದ್ದರು. ಪ್ರಮುಖವಾಗಿ ಪಾನಪ್ರಿಯರಂತೂ ಮದ್ಯ ಖರೀದಿಗೆ ಮುಗಿಬಿದ್ದಿದ್ದಾರೆ. 
ಬೆಂಗಳೂರಿನ ಕಗ್ಗದಾಸಪುರದಲ್ಲಿ ಸೋಮವಾರ ವೈನ್ ಶಾಪ್ ಎದುರು ಕಂಡುಬಂದ ಗ್ರಾಹಕರು ಸಾಲು. ಚಿತ್ರ: ಬಿ.ಪಂಡರಿನಾಥ.
ಬೆಂಗಳೂರಿನ ಕಗ್ಗದಾಸಪುರದಲ್ಲಿ ಸೋಮವಾರ ವೈನ್ ಶಾಪ್ ಎದುರು ಕಂಡುಬಂದ ಗ್ರಾಹಕರು ಸಾಲು. ಚಿತ್ರ: ಬಿ.ಪಂಡರಿನಾಥ.
Updated on

ನವದೆಹಲಿ: ದೇಶದಾದ್ಯಂತ ಸೋಮವಾರ ಲಾಕ್'ಡೌನ್ ಸಡಿಲಿಕೆಗೊಂಡಿದ್ದು ಹಾಗೂ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೇ ಕೊರೋನಾ ವೈರಸ್ ಮರೆತ ಜನರು ಭಾರೀ ಪ್ರಮಾಣದಲ್ಲಿ ಬೀದಿಗಿಳಿದಿದ್ದರು. ಪ್ರಮುಖವಾಗಿ ಪಾನಪ್ರಿಯರಂತೂ ಮದ್ಯ ಖರೀದಿಗೆ ಮುಗಿಬಿದ್ದಿದ್ದಾರೆ. 

ಹಲವು ರಾಜ್ಯಗಳಲ್ಲಿ ಮುಂಜಾನೆ 6 ಗಂಟೆಯಿಂದಲೇ ಖರೀದಿಗಾಗಿ ಜನ ಸರಿದಿ ನಿಂತು ತಮ್ಮ ಮದ್ಯಪ್ರೇಮ ಮೆರೆದಿದ್ದಾರೆ. ಕೆಲ ರಾಜ್ಯಗಳಲ್ಲಿ ಕಿ.ಮೀ ಉದ್ದದ ಸಾಲುಗಳೂ ಕಂಡು ಬಂದಿವೆ. ಖರೀದಿ ವೇಳೆ ಕೆಲವೆಡೆ ಮಾತ್ರವೇ ಸಾಮಾಜಿಕ ಅಂತರ ಪಾಲನೆ ಮಾಡಲಾಗಿತ್ತು, ಕೆಲವು ಕಡೆ ಪೊಲೀಸರು, ಸಾಮಾಜಿಕ ಅಂತರ ಪಾಲನೆ ಮಾಡದ್ದಕ್ಕೆ ಲಾಠಿ ಪ್ರಹಾರ ಮಾಡಿದರೆ, ಕೆಲವೆಡೆ ಅಂಗಡಿ ಮುಚ್ಚಿಸಿದ್ದರು. 

ಈ ನಡುವೆ ಲಾಕ್'ಡೌನ್ ಸಡಿಲಿಕೆಗೊಂಡ ಬೆನ್ನಲ್ಲೇ ಕೆಂಪು ವಲಯ ಹೊರತುಪಡಿಸಿ ಹಸಿರುವ ಮತ್ತು ಕಿತ್ತಳೆ ವಲಯದಲ್ಲಿ ಬಹುತೇಕ ಚಟುವಟಿಕೆ, ಸೇವೆಗೆ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜನ 40 ದಿನಗಳ ಬಳಿಕ ಮುಕ್ತವಾಗಿ ಬೀದಿಗೆ ಇಳಿದು ಸಂಭ್ರಮಿಸಿದರು. 

ಆದರೆ, ಕೊರೋನಾ ಬೀತಿ ಇನ್ನು ದೂರವಾಗಿರದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿದ್ದ ಮನವಿಯನ್ನು ಬದಿಗೊತ್ತಿದ ಜನತೆ ಎಂದಿನಂತೆ ಅಗತ್ಯ ವಸ್ತುಗಳ ಖರೀದಿಗೆ ಮುಂದಾದರು. ಹೀಗಾಗಿ ದೇಶದ ಬಹುತೇಕ ರಾಜ್ಯಗಳಲ್ಲಿ ದಿಢೀರೆ ಜನ ಮತ್ತು ವಾಹನ ಸಂಚಾರ ಭಾರೀ ಪ್ರಮಾಣದಲ್ಲಿ ಹೆಚ್ಚಳಗೊಂಡಿತು. 

ಬಹುತೇಕ ಕಡೆ ರಾಜ್ಯದೊಳಗೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಮತ್ತು ಕಿತ್ತಳೆ ಹಾಗ ಹಸಿರು ವಲಯದಲ್ಲಿ ಬಸ್ ಸಂಚಾರಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಬಸ್ ಗಳು ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡವು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com