ವಿದೇಶದಿಂದ‌ ಬರುವ ಕನ್ನಡಿಗರನ್ನು ಅವರ ಜಿಲ್ಲೆಯಲ್ಲೇ ಕ್ವಾರಂಟೈನ್: ಸಚಿವ ಆರ್.ಅಶೋಕ್

ವಿದೇಶದಿಂದ ಬರುವ ಕನ್ನಡಿಗರನ್ನು ಅವರವರ ಜಿಲ್ಲೆಗಳಲ್ಲಿಯೇ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ
ಆರ್.ಅಶೋಕ್ ಮತ್ತಿತರ ಚಿತ್ರ
ಆರ್.ಅಶೋಕ್ ಮತ್ತಿತರ ಚಿತ್ರ

ಬೆಂಗಳೂರು:ವಿದೇಶದಿಂದ ಬರುವ ಕನ್ನಡಿಗರನ್ನು ಅವರವರ ಜಿಲ್ಲೆಗಳಲ್ಲಿಯೇ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅಶೋಕ್, ವಿದೇಶದಿಂದ ಬಂದ ಕನ್ನಡಿಗರನ್ನು ಕ್ವಾರಂಟೇನ್ ಮಾಡ ಲಾಗುತ್ತದೆ .ಶಾಸಕರು, ಸಂಸದರು ಆಯಾ ಜಿಲ್ಲೆಯ ವಿದೇಶದಿಂದ ಬರೋರನ್ನ ಆಯಾ ಜಿಲ್ಲೆಯಲ್ಲಿ ಕ್ವಾರಂಟೇನ್ ಮಾಡಲು ಮನವಿ ಮಾಡಿದ್ದಾರೆ.ಈ‌ ನಿಟ್ಟಿನಲ್ಲಿ ಸರ್ಕಾರ ಆಯಾ ಜಿಲ್ಲೆಯಲ್ಲಿ ಕ್ವಾರಂಟೇನ್ ಮಾಡಲು ಕ್ರಮ ತೆಗೆದುಕೊಳ್ಳಲಿದೆ ಎಂದರು.

ಕಾರ್ಮಿಕರನ್ನ ಮನವೊಲಿಸಿ ವಾಪಸ್ ಕ್ಯಾಂಪಸ್ ಗೆ ಕಳುಹಿಸುವ ಕೆಲಸ ಮಾಡುತ್ತಿದ್ದೇವೆ.ಈಗಾಗಲೇ 1500 ಕಾರ್ಮಿಕರು ವಾಪಸ್ ಬಂದಿದ್ದಾರೆ ಉಳಿದವರ ಮನವೊಲಿಸುವ ಕೆಲಸ ನಾವು ಮಾಡುತ್ತಿದ್ದೇವೆ. ಬಿಲ್ಡರ್ ಗಳ ಜೊತೆ ಸಿಎಂ ಸಭೆ ಮಾಡಿದ್ದಾರೆ.ಬಿಲ್ಡರ್ ಗಳು ಪಾಸ್ ಬೇಕು ಅಂತ ಕೇಳಿದ್ದಾರೆ‌ ಅದನ್ನು ವ್ಯವಸ್ಥೆ ಮಾಡುತ್ತೇವೆ,ಕಾರ್ಮಿಕರ ಹಿತ ಕಾಪಾಡಲು ಸರ್ಕಾರ ಬದ್ದವಾಗಿದೆ ಇದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ಜಮೀನು ಹಾಗೂ ನಿವೇಶನ ನೊಂದಣಿ ಆರಂಭವಾಗಿದ್ದು ಸಬ್ ರಿಜಿಸ್ಟರ್ ಡ್ಯೂಟಿ ಆದಾಯ ಸಂಗ್ರಹ ಪಿಕ್ ಅಪ್ ಆಗಿದೆ. ಮೊದಲ ದಿನ 6 ಲಕ್ಷ ಆದಾಯ ಸಂಗ್ರಹ ಆಗಿತ್ತು. ಇವತ್ತು 10 ಕೋಟಿ ಸಂಗ್ರಹ ಆಗಿದೆ ಎಂದು ಮಾಹಿತಿ ನೀಡಿದರು. 

ಬಗರ್ ಹುಕುಂ ಸಾಗುವಳಿಯನ್ನು ಸಕ್ರಮ ಮಾಡಿ ಕೊಳ್ಳಲು ರೈತರಿಗೆ ಮತ್ತೊಂದು ಅವಕಾಶ ನೀಡಲಾಗುತ್ತದೆ. ಈ ಹಿಂದೆ ಭೂ ಸುಧಾರಣಾ ಕಾಯ್ದೆ ಅಡಿ ಅಕ್ರಮ ಭೂಮಿಯನ್ನು ಸಕ್ರಮ ಗೊಳಿಸಿಕೊಳ್ಳಲು ಹಾಕಲಾಗಿದ್ದ ರೈತರ ಅರ್ಜಿಗಳು ತಿರಸ್ಕೃರಗೊಂಡಿದ್ದವು. ಇದೀಗ ಅಂತಹ ರೈತರಿಗೆ ಮತ್ತೊಂದು ಅವಕಾಶ ಮಾಡಿ ಕೊಡಲು ನಿರ್ಧರಿಸಲಾಗಿದೆ.ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲ ಆಗಲಿದೆ ಎಂದು ಆರ್ ಅಶೋಕ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com