ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮದ್ಯ ಮಾರಾಟ ಆರಂಭ: ಎಳನೀರು ಮಾರಾಟದಲ್ಲಿ ಭಾರೀ ಇಳಿಕೆ

ಬರೋಬ್ಬರಿ 40 ದಿನಗಳ ಬಳಿಕ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದ್ದು, ಮದ್ಯ ಖರೀದಿ ಮಾಡಲು ಮದ್ಯಪ್ರಿಯರಂತೂ ಕಿಲೋಮೀಟರ್'ಗಟ್ಟಲೆ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಆದರೆ, ಎಳನೀರು ಕೊಳ್ಳುವವರ ಸಂಖ್ಯೆ ಮಾತ್ರ ಬೆರಳಣಿಕೆಯಷ್ಟಾಗಿದೆ. 

ಮೈಸೂರು: ಬರೋಬ್ಬರಿ 40 ದಿನಗಳ ಬಳಿಕ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದ್ದು, ಮದ್ಯ ಖರೀದಿ ಮಾಡಲು ಮದ್ಯಪ್ರಿಯರಂತೂ ಕಿಲೋಮೀಟರ್'ಗಟ್ಟಲೆ ಕ್ಯೂನಲ್ಲಿ ನಿಲ್ಲುತ್ತಿದ್ದಾರೆ. ಆದರೆ, ಎಳನೀರು ಕೊಳ್ಳುವವರ ಸಂಖ್ಯೆ ಮಾತ್ರ ಬೆರಳಣಿಕೆಯಷ್ಟಾಗಿದೆ. 

ಮದ್ಯ ಮಾರಾಟಗಾರರಿಗೆ ಸಂತೋಷದ ದಿನಗಳು ಬಂದಿದ್ದು, ನಮಗೆ ಕಷ್ಟಕರ ದಿನಗಳು ಮತ್ತೆ ಮರುಕಳುಹಿಸಿದೆ ಎಂದು ಎಳನೀರು ಮಾರಾಟಗಾರರೊಬ್ಬರು ಹೇಳಿದ್ದಾರೆ. 

ಮದ್ಯದಂಗಡಿಗಳು ಆರಂಭವಾದ ಬಳಿಕ ಎಳನೀರು ವ್ಯಾಪಾರ ಭಾರೀ ಇಳಿಕೆ ಕಂಡಿದೆ ಎಂದು ಇದೇ ರೀತಿ ಸಾಕಷ್ಟು ಎಳನೀರು ಮಾರಾಟಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

ಲಾಕ್ಡೌನ್ ಆಗುತ್ತಿದ್ದಂತೆಯೇ ರಾಜ್ಯದ ಎಲ್ಲಾ ಮದ್ಯದ ಅಂಗಡಿಗಳು ಬಂದ್ ಆಗಿದ್ದವು, ಈ ಹಿನ್ನೆಲೆಯಲ್ಲಿ ಬಿಸಿಲ ಬೇಗೆ ನೀಗಿಸುವ ಸಲುವಾಗಿ ಸಾಕಷ್ಟು ಜನರು ಎಳನೀರು ಮೊರೆ ಹೋಗಿದ್ದರು. ಸೋಮವಾರ ಮದ್ಯದಂಗಡಿಗಳು ಆರಂಭವಾಗುತ್ತಿದ್ದಂತೆಯೇ ಮದ್ಯಪ್ರಿಯರು ಮದ್ಯದಂಗಡಿಗಳ ಮುಂದೆ ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತು ಮದ್ಯ ಖರೀದಿ ಮಾಡುತ್ತಿದ್ದಾರೆ. ಮದ್ಯ ಸಿಗದಿದ್ದಾಗ ಸಾಕಷ್ಟು ಜನರು ಎಳನೀರು ಖರೀದಿಗೆ ಬರುತ್ತಿದ್ದರು. ಏನೇ ಆದರೂ ಆರೋಗ್ಯಕರವಾದ ಪದಾರ್ಥವೊಂದಕ್ಕೆ ಹಣ ಖರ್ಚು ಮಾಡುತ್ತಿದ್ದರು. ಇದೀಗ ಮದ್ಯದ ಅಂಗಡಿಗಳು ಆರಂಭಗೊಂಡಿದ್ದು, ಎಳನೀರು ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಎಳನೀರು ಮಾರಟಗಾರ ಧೀರಜ್ ಎಂಬುವರು ಹೇಳಿದ್ದಾರೆ. 

ಭಾನುವಾರ ಎಳನೀರಿಗೆ ಬೇಡಿಕೆ ಹೆಚ್ಚಾಗಿಯೇ ಇತ್ತು, ಆದರೆ, ಬೇಡಿಕೆ ಈಡೇರಿಸುವಷ್ಟು ಎಳನೀರು ನಮ್ಮಲ್ಲಿರಲಿಲ್ಲ. ಬಳಿ ರೂ.20ರಂತೆ ನೀಡಿ ಎಳನೀರನ್ನು ಇತರೆ ಗ್ರಾಮಗಳಲ್ಲಿ ತರಿಸಲಾಗಿತ್ತು. ಮದ್ಯ ಮಾರಾಟ ಆರಂಭವಾದ ಬಳಿಕ ಇದೀಗ ನಮಗೆ ನಷ್ಟ ಎದುರಾಗಿದೆ. ಪ್ರತೀ ಎಳನೀರಿಗೆ ರೂ.30 ಕೊಟ್ಟು ಖರೀದಿ ಮಾಡುತ್ತಿದ್ದರು. ಶನಿವಾರ 180-200 ಜನರು ಎಳನೀರು ಖರೀದಿ ಮಾಡಿದ್ದರು. ಸಾರಿಗೆ ವೆಚ್ಚ ಸೇರಿ ರೂ.2,500-3,000ರಷ್ಟು ಲಾಭ ಬಂದಿತ್ತು. ಆದರೆ, ಸೋಮವಾರ ಸಂಜೆ 4ರವರೆಗೂ ಕೇವಲ 40 ಮಂದಿ ಮಾತ್ರ ಖರೀದಿ ಮಾಡಿದ್ದಾರೆ. ರೂ.1,500ರಷ್ಟು ವ್ಯಾಪಾರ ಕೂಡ ಆಗಿಲ್ಲ ಎಂದು ಮತ್ತೊಬ್ಬ ವ್ಯಾಪಾರಿ ಬೇಸರ ವ್ಯಕ್ತಪಡಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com