ಲಾಕ್ ಡೌನ್ ಸಡಲಿಕೆ ನಂತರ ಎಲ್ಲಾ ನಾಗರಿಕರಿಗೂ ಆರೋಗ್ಯ ಪರೀಕ್ಷೆ ಈಗ ಅತಿಮುಖ್ಯ

ಲಾಕ್‌ಡೌನ್ ಮಾನದಂಡಗಳನ್ನು ಸಡಿಲಿಸಿದ ನಂತರ ರಾಜ್ಯದಲ್ಲಿ ಕೋವಿಡ್- 19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು,  ಆರೋಗ್ಯ ಇಲಾಖೆಯು ಎಲ್ಲಾ ನಾಗರಿಕರ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲಾಕ್‌ಡೌನ್ ಮಾನದಂಡಗಳನ್ನು ಸಡಿಲಿಸಿದ ನಂತರ ರಾಜ್ಯದಲ್ಲಿ ಕೋವಿಡ್- 19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು,  ಆರೋಗ್ಯ ಇಲಾಖೆಯು ಎಲ್ಲಾ ನಾಗರಿಕರ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ, ತನ್ನ ಗುರಿಯನ್ನು ಸಾಧಿಸಲು ತಂತ್ರಜ್ಞಾನದ ಜೊತೆ ಸಾಂಪ್ರದಾಯಿಕ   ವಿಧಾನಗಳೊಂದಿಗೆ  ಸಂಯೋಜಿಸಲು ಇಲಾಖೆ ನಿರ್ಧರಿಸಿದೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಜಾವೇದ್ ಅಕ್ತರ್ ಹೇಳಿದ್ದಾರೆ.

ಕೊರೋನಾದಂತೆಯೇ ಅಸ್ವಸ್ಥತೆ ಮತ್ತು ರೋಗಲಕ್ಷಣಗಳನ್ನು ಹೊಂದಿರುವ ಜನರನ್ನು ಪರೀಕ್ಷಿಸುವುದರ ಜೊತೆಗೆ, ಇಲಾಖೆಯು ಆಪ್ತಮಿತ್ರ ಅಪ್ಲಿಕೇಶನ್ ಅನ್ನು ಬಳಸಲು ಪ್ರಾರಂಭಿಸಿದೆ. ಅಸ್ವಸ್ಥರನ್ನು ಪತ್ತೆಹಚ್ಚಲು ಈ ಅಪ್ಲಿಕೇಶನ್ ಅನ್ನು ಕಣ್ಗಾವಲು ತಂತ್ರಜ್ಞಾನ ಬಳಸಲಾಗುತ್ತದೆ. 

ಇಲಾಖೆಯು ತಮ್ಮ ವಿವರಗಳನ್ನು ಸಂಗ್ರಹಿಸಲು ರಾಜ್ಯಾದ್ಯಂತ ಜನರಿಗೆ ಕರೆ ಮಾಡಲಾಗುತ್ತದೆ, ನಾಗರಿಕರಿಗೆ ಎಸ್‌ಎಂಎಸ್, ವಾಟ್ಸಾಪ್ ಸಂದೇಶಗಳು ಮತ್ತು ಇಮೇಲ್‌ಗಳನ್ನು ಸಹ ಕಳುಹಿಸಲಾಗುವುದು ಎಂದು ಅಖ್ತರ್ ಹೇಳಿದ್ದಾರೆ.

ಈ ಪರೀಕ್ಷೆಯಿಂದ ಜನರಿಗೆ ಯಾವುದಾದರೂ ರೋಗ ಲಕ್ಷಣ ಇದೆಯೇ  ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ, ಹೀಗಾಗಿ ನಾಗರಿಕರು ಸಹಕರಿಸಬೇಕು ಎಂದು ಜಾವೇದ್ ಅಕ್ತರ ಕೋರಿದ್ದಾರೆ.

ಆರೋಗ್ಯ ಅಧಿಕಾರಿಗಳನ್ನು ಜನರ ಮನೆಗಳಿಗೆ ಪರಿಶೀಲಿಸಲು ಮತ್ತು ಸಮೀಕ್ಷೆಗಳನ್ನು ನಡೆಸಲು ಕಳುಹಿಸಲಾಗುತ್ತಿದೆ, ಹಲವು ಜಿಲ್ಲೆಗಳಲ್ಲಿ ಈಗಾಗಲೇ ಈ ಕಾರ್ಯ ಆರಂಭವಾಗಿದೆ,

ಲಾಕ್‌ಡೌನ್‌ನ  ನಂತರ ಇದು ಅತ್ಯಂತ ನಿರ್ಣಾಯಕ, ಮತ್ತು ನಿರ್ಧರಿತ ಪರೀಕ್ಷೆಯಾಗಿದ್ದು  ಕೊರೋನಾ ಜೊತೆ ಸಂಪರ್ಕ ಇದ್ದವರನ್ನು ಪತ್ತೆ ಹಚ್ಚುವುದು ಮುಖ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com