ಶಿವಾಜಿನಗರದ ಹೊಟೇಲ್ ನ ಹೌಸ್ ಕೀಪಿಂಗ್ ಸಿಬ್ಬಂದಿಗೆ ಕೊರೋನಾ: ವಾಸವಿದ್ದ ಏರಿಯಾ ಸೀಲ್ ಡೌನ್ 

ಶಿವಾಜಿನಗರ ಹೊಟೇಲೊಂದರ ಹೌಸ್ ಕೀಪಿಂಗ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆ ವ್ಯಕ್ತಿ ವಾಸಿಸುತ್ತಿದ್ದ ಕಟ್ಟಡದ ಸುತ್ತಮುತ್ತ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಶಿವಾಜಿನಗರ ಹೊಟೇಲೊಂದರ ಹೌಸ್ ಕೀಪಿಂಗ್ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆ ವ್ಯಕ್ತಿ ವಾಸಿಸುತ್ತಿದ್ದ ಕಟ್ಟಡದ ಸುತ್ತಮುತ್ತ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದೆ.

ಜನರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಈ ನಿರ್ಧಾರಕ್ಕೆ ಬಂದಿದೆ ಎಂದು ಪುಲಕೇಶಿನಗರದ ಎಸಿಪಿ ಫಾತಿಮಾ ಇಂದು ಸ್ಥಳಕ್ಕೆ ಭೇಟಿ ನೀಡಿ ಜನತೆಗೆ ತಿಳಿಸಿದ್ದಾರೆ.

ಜನರ ನೆರವಿಗೆ ಸಿದ್ದ: ಸೀಲ್ ಡೌನ್ ಆದೇಶ ಇಂದಿನಿಂದ ಜಾರಿಗೆ ಬರಲಿದ್ದು ಇನ್ನು 15 ದಿನ ಚಾಲ್ತಿಯಲ್ಲಿರುತ್ತದೆ. ಕೊರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿದ್ದು ನಿವಾಸಿಗಳು ಯಾವುದೇ ಕಾರಣಕ್ಕೂ ಆತಂಕಗೊಳಗಾಗಬೇಕಾಗಿಲ್ಲ. ಜನರು ತಮ್ಮ ಮನೆಯ ಗೇಟು ದಾಟಿ ಆಚೆ ಬರುವಂತಿಲ್ಲ.ಮನೆ ಮುಂದೆ ಚೆಕ್ ಪೋಸ್ಟ್ ಇರುತ್ತದೆ. ಅಲ್ಲದೆ ಬಿಬಿಎಂಪಿ, ಪೊಲೀಸ್ ಸಿಬ್ಬಂದಿಯ ಸಂಪರ್ಕ ಸಂಖ್ಯೆಯನ್ನು ನೀಡಲಾಗುತ್ತದೆ. ಬಿಬಿಎಂಪಿಯ ಸಿಬ್ಬಂದಿ ದಿನಪೂರ್ತಿ ಹಗಲು-ರಾತ್ರಿ ಸೇವೆಗೆ ಇರುತ್ತಾರೆ. ಅಗತ್ಯವಸ್ತುಗಳನ್ನು ಮನೆ ಬಾಗಿಲಿಗೆ ತಂದುಕೊಡುವ ವ್ಯವಸ್ಥೆ ಮಾಡುತ್ತಾರೆ.

ವೈದ್ಯಕೀಯ ಸೇವೆ: ನಿವಾಸಿಗಳಿಗೆ ಯಾವುದೇ ವೈದ್ಯಕೀಯ ಸೇವೆ ಬೇಕೆಂದರು ಸಹ ಅಲ್ಲಲ್ಲಿ ವೈದ್ಯಾಧಿಕಾರಿಯನ್ನು ನೇಮಿಸಲಾಗುತ್ತದೆ. ಅವರ ಮೊಬೈಲ್ ಸಂಖ್ಯೆ ಕೂಡ ಇರುತ್ತದೆ. ಅವರಲ್ಲಿ ಹೇಳಿಕೊಂಡರೆ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂದು ಎಸಿಪಿ ಫಾತಿಮಾ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com