ಮದ್ಯ ಪ್ರಿಯರಿಗೆ ಶಾಕ್: ರಾಜ್ಯದಲ್ಲಿ ಅಬಕಾರಿ ಮೇಲಿನ ಸುಂಕ ಶೇ.17 ರಷ್ಟು ಏರಿಕೆ

ಮದ್ಯದ ಎಂಆರ್‌ಪಿ ಮೇಲೆ ದೆಹಲಿ ಹಾಗೂ ಆಂಧ್ರ ಸರ್ಕಾರ ಹೆಚ್ಚುವರಿ ಅಬಕಾರಿ ತೆರಿಗೆ ಹೆಚ್ಚಳ ಮಾಡಿರುವ ಬೆನ್ನಲ್ಲೆ ಕರ್ನಾಟಕ ಸರ್ಕಾರವೂ ಅಬಕಾರಿ ಮೇಲಿನ ಸುಂಕವನ್ನು ಶೇ. 17 ರಷ್ಟು ಏರಿಕೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮದ್ಯದ ಎಂಆರ್‌ಪಿ ಮೇಲೆ ದೆಹಲಿ ಹಾಗೂ ಆಂಧ್ರ ಸರ್ಕಾರ ಹೆಚ್ಚುವರಿ ಅಬಕಾರಿ ತೆರಿಗೆ ಹೆಚ್ಚಳ ಮಾಡಿರುವ ಬೆನ್ನಲ್ಲೆ ಕರ್ನಾಟಕ ಸರ್ಕಾರವೂ ಅಬಕಾರಿ ಮೇಲಿನ ಸುಂಕವನ್ನು ಶೇ. 17 ರಷ್ಟು ಏರಿಕೆ ಮಾಡಿದೆ.

ದೇಶಾದ್ಯಂತ ಮೂರನೇ ಹಂತದ ಲಾಕ್ ಡೌನ್ ಜಾರಿಯಾಗುವ ಜತೆಗೆ ಸಡಿಲಿಕೆಯ ಭಾಗವಾಗಿ ಸೋಮವಾರದಿಂದ ಮದ್ಯ ಮಾರಾಟ ಮಳಿಗೆಗಳು ತೆರೆದಿವೆ. 

ಈಗಾಗಲೇ 2020-21 ಸಾಲಿನ ಬಜೆಟ್‌ನಲ್ಲಿ ಮದ್ಯದ ಎಲ್ಲಾ 18 ಘೋಷಿತ ಸ್ಪ್ಯಾಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕಗಳ ದರವನ್ನು ಶೇ.6 ರಂದು ಹೆಚ್ಚಿಸಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಏ.1 ರಿಂದ ಜಾರಿಯಾಗದ ಹೊಸ ದರ ಮಂಗಳವಾರದಿಂದಲೇ ಜಾರಿಗೆ ಬಂದಿದೆ.  ಒಟ್ಟಾರೆ ಶೇ.17 ರಷ್ಟು ತೆರಿಗೆ ಏರಿಕೆ ಮಾಡಿದಂತಾಗಿದೆ.


ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಮತ್ತೆ ಶೇ.11 ರಷ್ಟು ಹೆಚ್ಚುವರಿ ಅಬಕಾರಿ ಸುಂಕ ಏರಿಕೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com