ರಾಜ್ಯಕ್ಕೆ ಬರಲು ಅರ್ಜಿ ಸಲ್ಲಿಸಿದ ಹೊರರಾಜ್ಯ ಕನ್ನಡಿಗರ ಸಂಖ್ಯೆ 56 ಸಾವಿರ, ಸರ್ಕಾರ ಅನುಮತಿಸಿದ್ದು ಶೇ.7 ರಷ್ಟು ಮಾತ್ರ!

ಕೊರೋನಾ ಹಿನ್ನೆಲೆ ಹೊರರಾಜ್ಯದಲ್ಲಿರುವ ಕನ್ನಡಿಗರಿಗೆ ರಾಜ್ಯಕ್ಕೆ ಮರಳಲು ನೋಂದಣಿ ಪ್ರಾರಂಬಗೊಂಡ  ಐದು ದಿನಗಳ ನಂತರ, ಇತರ ರಾಜ್ಯಗಳಲ್ಲಿ ಸಿಲುಕಿರುವ 56,000 ಕ್ಕೂ ಹೆಚ್ಚು ಕನ್ನಡಿಗರು  ತಮ್ಮ ತಮ್ಮ ಊರಿಗೆ ಮರಳಲು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದರಲ್ಲಿ  ಕೇವಲ 7 ಪ್ರತಿಶತದಷ್ಟು ಅರ್ಜಿಗಳನ್ನಷ್ಟೇ ರಾಜ್ಯ ಸರ್ಕಾರ ಅನುಮೋದಿಸಿದೆ. 
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ಕೊರೋನಾ ಹಿನ್ನೆಲೆ ಹೊರರಾಜ್ಯದಲ್ಲಿರುವ ಕನ್ನಡಿಗರಿಗೆ ರಾಜ್ಯಕ್ಕೆ ಮರಳಲು ನೋಂದಣಿ ಪ್ರಾರಂಬಗೊಂಡ  ಐದು ದಿನಗಳ ನಂತರ, ಇತರ ರಾಜ್ಯಗಳಲ್ಲಿ ಸಿಲುಕಿರುವ 56,000 ಕ್ಕೂ ಹೆಚ್ಚು ಕನ್ನಡಿಗರು ತಮ್ಮ ತಮ್ಮ ಊರಿಗೆ ಮರಳಲು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದರಲ್ಲಿ  ಕೇವಲ 7 ಪ್ರತಿಶತದಷ್ಟು ಅರ್ಜಿಗಳನ್ನಷ್ಟೇ ರಾಜ್ಯ ಸರ್ಕಾರ ಅನುಮೋದಿಸಿದೆ. 

ಬುಧವಾರ ಸಂಜೆಯ ಹೊತ್ತಿಗೆ, 56,622 ಜನರು ರಾಜ್ಯದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮೇ 2 ರಂದು ನೋಂದಣಿ ಪ್ರಾರಂಭಿಸಿದ ಸರ್ಕಾರ 4,068 ಅರ್ಜಿಗಳಿಗೆ ಅನುಮೋದನೆ ನೀಡಿ 479  ಅರ್ಜಿಗಳನ್ನು ತಿರಸ್ಕರಿಸಿದೆ.

"ಕೆಲವು ಅರ್ಜಿಗಳು ಅಧಿಕೃತ ವಿಳಾಸ ಪುರಾವೆಗಳನ್ನು ಹೊಂದಿರದ ಕಾರಣ ಅವುಗಳನ್ನು ತಿರಸ್ಕರಿಸಲಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಇ-ಆಡಳಿತ ವಿಭಾಗದ ಮುಖ್ಯಸ್ಥರಾಗಿರುವ ರಾಜೀವ್ ಚಾವ್ಲಾ ಅವರ ಪ್ರಕಾರ, ಹೆಚ್ಚಿನ ಅರ್ಜಿಗಳು ಮಹಾರಾಷ್ಟ್ರದಲ್ಲಿ ಸಿಕ್ಕಿಬಿದ್ದ ಜನರಿಂದ ಬಂದಿವೆ. ಇದಲ್ಲದೆ  ತಮಿಳುನಾಡು, ಆಂಧ್ರಪ್ರದೇಶ ಮತ್ತು ಬಿಹಾರದಲ್ಲಿ ಸಿಲುಕಿರುವವರಿಂದ ಅರ್ಜಿಗಳು ಬಂದಿದೆ. ಇವರಲ್ಲಿ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ವೃತ್ತಿಪರರು ಮತ್ತಿತರರು ಇದ್ದಾರೆ. ಕನಿಷ್ಠ 20-30 ರಷ್ಟು ಜನರು ರಸ್ತೆ ಪ್ರಯಾಣಕ್ಕಾಗಿ ಮನವಿ ಮಾಡಿದ್ದಾರೆ.

ಹೀಗೆ ರಾಜ್ಯಕ್ಕೆ ಆಗಮಿಸುವವರಿಗೆ ಆಯಾ ರಾಜ್ಯಗಳಲ್ಲಿ ನೋಂದಣಿ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದ್ದರೂ, ಕರ್ನಾಟಕ ಸರ್ಕಾರವು ತನ್ನ ನಿವಾಸಿಗಳಿಗೆ ತಮ್ಮೂರಿಗೆ ಮರಳಲು ಇನ್ನೂ ಅನುಮತಿ ಇತ್ತಿಲ್ಲ. ರಾಜ್ಯದ ವಿವಿಧ ಜಿಲ್ಲಾಧಿಕಾರಿಗಳ ಬಳಿ 45,326 ಅರ್ಜಿಗಳು ಬಾಕಿ ಉಳಿದಿದ್ದರೆ, 6,749 ಅರ್ಜಿಗಳು ಅನುಮೋದನೆಗಾಗಿ ರಾಜ್ಯ ನೋಡಲ್ ಅಧಿಕಾರಿಗಳ ಬಳಿ ಇವೆ. ಗುಜರಾತ್, ರಾಜಸ್ಥಾನ ಮತ್ತು ತೆಲಂಗಾಣ ಸರ್ಕಾರಗಳು ತಮ್ಮ ರಾಜ್ಯದವರನ್ನು ಮರಳಿ ಕರೆತರಲು ಎನ್‌ಒಸಿಗಳನ್ನು ನೀಡಿವೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com