ಎಲ್ಲಾ ಹಂತಗಳಲ್ಲೂ ಗರ್ಭಿಣಿಯರಿಗೆ ಕೊರೋನಾ ಪರೀಕ್ಷೆ ಕಡ್ಡಾಯ: ಸರ್ಕಾರ

ಇತ್ತೀಚೆಗೆ ಗರ್ಭಿಣಿಯರಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  ಎಲ್ಲಾ ಹಂತಗಳಲ್ಲೂ ಗರ್ಭಿಣಿಯರಿಗೆ ಕೊರೋನಾ ಪರೀಕ್ಷೆ ಮಾಡಿಸಲು ನಿರ್ಧರಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇತ್ತೀಚೆಗೆ ಗರ್ಭಿಣಿಯರಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ  ಎಲ್ಲಾ ಹಂತಗಳಲ್ಲೂ ಗರ್ಭಿಣಿಯರಿಗೆ ಕೊರೋನಾ ಪರೀಕ್ಷೆ ಮಾಡಿಸಲು ನಿರ್ಧರಿಸಲಾಗಿದೆ.ಅವರಿಗೆ ಸೋಂಕಿನ ಲಕ್ಷಣಗಳಿರಲಿ ಅಥವಾ ಇಲ್ಲದಿರಲಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸುವುದು ಅಗತ್ಯವಾಗಿದೆ. ಗರ್ಭಿಣಿ ಕುಟುಂಬದ ಸದಸ್ಯರು ಮತ್ತು ಇತರರ  ಸಂಪರ್ಕಗಳನ್ನು ಪರೀಕ್ಷಿಸಲಾಗುವುದು ಮತ್ತು ಅವರೆಲ್ಲರ ವಿವರವಾದ ಆರೋಗ್ಯ ವರದಿ ಕಾರ್ಡ್ ಅನ್ನು ನಿರ್ವಹಿಸಲಾಗುವುದು
ಎಂದು  ಆರೋಗ್ಯ ಇಲಾಖೆ ನಿರ್ಧರಿಸಿದೆ.

ಕಳೆದ ಮೂರು ತಿಂಗಳಲ್ಲಿ ಗರ್ಭಿಣಿ ಮಹಿಳೆಗೆ ಮಾತ್ರ ಪರೀಕ್ಷೆ ಮಾಡಲಾಗಿತ್ತು, ಅಂತಹ ಮಹಿಳೆಗೆ ಮತ್ತೆ ಪರೀಕ್ಷೆ ಮಾಡಲಾಗುವುದು, ಜೊತೆಗೆ ಆಕೆಯ ಕುಟುಂಬದ ಸದಸ್ಯರಿಗೂ ಪರೀಕ್ಷೆ ಕಡ್ಡಾಯವಾಗಿದೆ ಎಂದು ಹಿರಿಯ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,

ಹಾಲುಣಿಸುತ್ತಿರುವ ಮಹಿಳೆಯರಿಗೊ ಪರೀಕ್ಷೆ ನಡೆಸಲು ಬಿಬಿಎಂಪಿ ಸಿದ್ಧತೆ ನಡೆಸುತ್ತಿದೆ. ಗರ್ಭಿಣಿಯರು ಮತ್ತು ಹಾಲುಣಿಸು ಮಹಿಳೆಯರು ದುರ್ಬಲರಾಗಿದ್ದು, ಅವರು ಪದೇ ಪದೇ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುತ್ತಿರುತ್ತಾರೆ. ಎಲ್ಲಾ ಆರೋಗ್ಯ ಕೇಂದ್ರಗಳಿಂದ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿಗಳಿಂದ ಅವರ ಬಗ್ಗೆಗಿನ ಮಾಹಿತಿ ಸಂಗ್ರಹಿಸಲಾಗುವುದು.

ಅಂತಿಮ ಹಂತದ ಪರೀಕ್ಷೆಗೆ ಬರುವ ಮಹಿಳೆಯರಲ್ಲಿ ಸೋಂಕು ಕಂಡು ಬಂದಲ್ಲಿ ತಾಯಿ ಮತ್ತು ಮಗುವಿನ ಜೀವ ಅಪಾಯದಲ್ಲಿರುತ್ತದೆ.  ಹೀಗಾಗಿ ಪ್ರತಿ ಹಂತದಲ್ಲೂ ಗರ್ಭಿಣಿಯರಿಗೆ ಪರೀಕ್ಷೆ ಕಡ್ಡಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com