ಉಸಿರಾಡಲು ಸಾಧ್ಯವಾಗದೆ ನರಳುವ ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಹೆಲ್ಮೆಟ್: ಇದು ಮಂಗಳೂರು ವೈದ್ಯರ ಸಾಧನೆ!

ಕೊರೋನಾ ಸೋಂಕಿಗೊಳಗಾಗಿ ಉಸಿರಾಡಲು ಸಾಧ್ಯವಾಗದೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ನೆರವಿಗೆ ಧಾವಿಸಿರುವ ಮಂಗಳೂರೂ ವೈದ್ಯರು, ಜೀವ ರಕ್ಷಕ ಸಾಧನ ಆಕ್ಸಿಜನ್ ಹೆಲ್ಮೆಟ್ ವೊಂದನ್ನು ಆವಿಷ್ಕರಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಕೊರೋನಾ ಸೋಂಕಿಗೊಳಗಾಗಿ ಉಸಿರಾಡಲು ಸಾಧ್ಯವಾಗದೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ನೆರವಿಗೆ ಧಾವಿಸಿರುವ ಮಂಗಳೂರೂ ವೈದ್ಯರು, ಜೀವ ರಕ್ಷಕ ಸಾಧನ ಆಕ್ಸಿಜನ್ ಹೆಲ್ಮೆಟ್ ವೊಂದನ್ನು ಆವಿಷ್ಕರಿಸಿದ್ದಾರೆ. 

ಮಂಗಳಾ ಆಸ್ಪತ್ರೆ ವೈದ್ಯ ಡಾ.ಗಣಪತಿ ಅವರ ತಂಡ ಆಕ್ಸಿಜನ್ ಬಬ್ಬಲ್ ಹೆಲ್ಮೆಟ್ ವೊಂದನ್ನು ಸಿದ್ಧಪಡಿಸಿದ್ದಾರೆ. ವೆಂಟಿಲೇಟರ್ ಅಳವಡಿಸಿ ಕೃತಕ ಉಸಿರಾಟ ನೀಡಬೇಕಾದ ರೋಗಿಗಳಿಗೆ ಈ ಸಾಧನ ಸಾಕಷ್ಟು ಸಹಾಯಕವಾಗಲಿದೆ. 

ಸೋಂಕಿಗೊಳಗಾ ರೋಗಿಗಳು ಸಾಮಾನ್ಯವಾಗಿ ಉಸಿರಾಟ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಈ ವೇಳೆ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಅಳವಡಿಸಬೇಕಾಗುತ್ತದೆ. ಈ ಸಂದರ್ಭಲ್ಲಿ ಶ್ವಾಸನಾಳಕ್ಕೆ ಟ್ಯೂಬ್ ಹಾಕಿ ವೆಂಟಿಲೇಟರ್ ಅಳವಡಿಸಲಾಗುತ್ತದೆ. ಆದರೆ, ಈ ರೀತಿ ಮಾಡಿದ ಪ್ರಕರಣಗಳಲ್ಲಿ ಮರಣ ಹೊಂದುವವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸೋಂಕಿತರಿಗೆ ಆಕ್ಸಿಜನ್ ಬಬ್ಬಲ್ ಹೆಲ್ಮೆಟ್ ಬಳಕೆ ಮಾಡಿದರೆ, ರೋಗಿ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ. 

ಈ ಹೆಲ್ಮೆಟ್ ಒಳಗೆ ಅಕ್ಸಿಜನ್ ಸಪ್ಲೈ ಮಾಡುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆಕ್ಸಿಜನ್ ಹೊರಗೆ ಹೋಗದಂತೆ ರಬ್ಬರ್ ಶೀಟ್'ನ್ನು ಹೆಲ್ಮೆಟ್ ನಲ್ಲಿ ಅಳವಡಿಸಲಾಗಿದೆ. ಈಗಾಗಲೇ ವಿದೇಶಗಳಲ್ಲಿ ಇದು ಬಳಕೆಯಲ್ಲಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಅವುಗಳನ್ನು ಭಾರತಕ್ಕೆ ತರಿಸಿಕೊಳ್ಳುವುದು ಕಷ್ಟಸಾಧ್ಯ ಹೀಗಾಗಿ ಇದೇ ಮಾಡೆಲ್'ನ್ನು ಇಟ್ಟುಕೊಂಡು ಸ್ಥಲೀಯವಾಗಿ ಸಿಗುವ ವಸ್ತುಗಳನ್ನು ಬಳಕೆ ಮಾಡಿ ವೈದ್ಯರೂ ಈ ಸಾಧವನ್ನು ಕಂಡು ಹಿಡಿದ್ದಾರೆ. 

ಬಬ್ಬಲ್ ಹೆಲ್ಮೆಟ್ ನಲ್ಲಿ ಸೋಂಕಿತ ವ್ಯಕ್ತಿಗಳು ಸುಲಭವಾಗ ಉಸಿರಾಡಬಹುದಾಗಿದೆ. ಪ್ರಸ್ತುತ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಈ ರಕ್ಷಾ ಕವಚ ಸುಮಾರು ರೂ.6ಸಾವಿರ ಇದ್ದು, ಈ ರಕ್ಷಾ ಕವಚಕ್ಕೆ ಬೇಡಿಕೆ ಹೆಚ್ಚಾಗುವ ಕಾರಣ ತಯಾರಿ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com