ಕೊರೋನಾ ಎಫೆಕ್ಟ್: ಮಲೇಷಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು

ಮಹಾಮಾರಿ ಕೊರೋನಾ ವೈರಸ್ ಪರಿಣಾಮದಿಂದಾಗಿ ಹಲವು ದೇಶಗಳು ಲಾಕ್'ಡೌನ್ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಇದರಂತೆ ಮಲೇಷಿಯಾ ಕೂಡ ಕಠಿಣ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ 75ಕ್ಕೂ ಹೆಚ್ಚು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆಗಳು
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಪಡೆಗಳು

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಪರಿಣಾಮದಿಂದಾಗಿ ಹಲವು ದೇಶಗಳು ಲಾಕ್'ಡೌನ್ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಇದರಂತೆ ಮಲೇಷಿಯಾ ಕೂಡ ಕಠಿಣ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ 75ಕ್ಕೂ ಹೆಚ್ಚು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಈಗಾಗಲೇ ವಿಮಾನಗಳು ಹಾಗೂ ನೌಕಾ ಹಡಗುಗಳನ್ನು ಕಳುಹಿಸುತ್ತಿದೆ. 

ಈ ಎಲ್ಲಾ ಬೆಳವಣಿಗೆಗಳ ನಡುವಲ್ಲೂ ಮಲೇಷಿಯಾದಲ್ಲಿ 75 ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದು, ತವರಿಗೆ ಮರಳುವ ಭರವಸೆಗಳನ್ನು ಕಳೆದುಕೊಂಡಿದ್ದಾರೆ. 75 ಕನ್ನಡಿಗರಲ್ಲಿ ಬೆಂಗಳೂರಿನ ಅನೇಕಲ್ ನಿವಾಸಿ ನವೀನ್ ಕುಮಾರ್ ರೆಡ್ಡಿ ಕೂಡ ಒಬ್ಬರಾಗಿದ್ದು, ಮಲೇಷಿಯಾದಲ್ಲಿ ತಾವು ಅನುಭವಿಸುತ್ತಿರುವ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. 

ಪತ್ನಿ 6 ತಿಂಗಳ ಗರ್ಭಿಣಿಯಾಗಿದ್ದು, ತಾಯಿ ಕೂಡ ಅನಾರೋಗ್ಯ ಪೀಡಿತರಾಗಿದ್ದಾರೆ. ಭಾರತಕ್ಕೆ ಮರಳಲು ಅವಕಾಶ ನೀಡುವಂತೆ ಹಲವು ಬಾರಿ ರಾಯಭಾರಿ ಕಚೇರಿ ಬಳಿ ಮನವಿ ಮಾಡಿಕೊಂಡಿದ್ದೇನೆ. ಆದರೂ ನಮಗೆ ಯಾವುದೇ ರೀತಿಯ ಸಹಾಯಗಳು ಬರುತ್ತಿಲ್ಲ. 

ಮಲೇಷಿಯಾದಲ್ಲಿ 75 ಕನ್ನಡಿಗರು ಸಂಕಷ್ಟದಲ್ಲಿದ್ದಾರೆ. ಇದಕ್ಕೆ ಕಾರಣವೇನು? ಕರ್ನಾಟಕ ಸರ್ಕಾರ ವಿದೇಶಾಂಗ ಸಚಿವಾಲಯದಿಂದ ಅನುಮತಿ ಪಡೆಯುತ್ತಿಲ್ಲ. ಕೇರಳ ಹಾಗೂ ತಮಿಳುನಾಡು ಸರ್ಕಾರ ತಮ್ಮ ರಾಜ್ಯದ ಜನರನ್ನು ಕರೆಸಿಕೊಳ್ಳುತ್ತಿವೆ. ವಿದ್ಯಾರ್ತಿಗಳು, ಗರ್ಭಿಣಿಯರು ಇಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ನಮ್ಮಲ್ಲಿ ಹಣವಿಲ್ಲ. ವಿಸಾಗಳು ಈಗಾಗಲೇ ಅವಧಿ ಮೀರಿವೆ ಎಂದು ನವೀನ್ ರೆಡ್ಡಿ ಹೇಳಿದ್ದಾರೆ. 

ತಮಿಳುನಾಡು ಹಾಗೂ ಕೇರಳ ರಾಜ್ಯಕ್ಕೆ ತೆರಳಲು ನವದೆಹಲಿಯಿಂದ ವಿಮಾನಗಳಿವೆ. ಆದರೆ, ನಮಗೆ ತೆರಳಲು ಅನುಮತಿ ನೀಡಲಾಗುತ್ತಿಲ್ಲ ಎಂದು ಮಲೇಷಿಯಾದಲ್ಲಿರುವ ಕನ್ನಡಿಗರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಗಿದ್ದು, ಸಂಕಷ್ಟದಲ್ಲಿರುವ 75 ಮಂದಿಯ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಪಟ್ಟಿಯಲ್ಲಿ ವೃದ್ಧರು, ಮಕ್ಕಳು ಹಾಗೂ ಗರ್ಭಿಣಿ ಹೆಣ್ಣು ಮಕ್ಕಳು ಇರುವುದು ಕಂಡು ಬಂದಿದೆ. ನಮ್ಮನ್ನು ಯಾರೊಬ್ಬರೂ ಪರಿಶೀಲನೆ ನಡೆಸುತ್ತಿಲ್ಲ. ರಾಯಭಾರಿ ಕಚೇರಿಯೊಂದಿಗೆ ಇಮೇಲ್ ನಲ್ಲಷ್ಟೇ ಸಂವಹನ ನಡೆದಿದೆ. ಈಗಾಗಲೇ ಹಲವರ ವೀಸಾಗಳು ಅವಧಿ ಮೀರಿವೆ. ನಾವಿಲ್ಲಿ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದೇವೆಂದು ರೆಡ್ಡಿ ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com