1 ಲಕ್ಷ ಕೊರೋನಾ ಟೆಸ್ಟ್ ಮೈಲಿಗಲ್ಲು ದಾಟಿದ ಕರ್ನಾಟಕ!

ರಾಜ್ಯದಲ್ಲಿ ಇದುವರಗೆ ಒಂದು ಲಕ್ಷ ಮಂದಿಗೆ ಕೊರೋನಾವೈರಸ್ ಪರೀಕ್ಷೆ ನಡೆಸಲಾಗಿದೆ ಎಂದು  ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಇದುವರಗೆ ಒಂದು ಲಕ್ಷ ಮಂದಿಗೆ ಕೊರೋನಾವೈರಸ್ ಪರೀಕ್ಷೆ ನಡೆಸಲಾಗಿದೆ ಎಂದು  ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಸಚಿವ ಸುಧಾಕರ್ "ಕರ್ನಾಟಕ 1 ಲಕ್ಷ  ಕೊರೋನಾ ಪರೀಕ್ಷೆಗಳ ಮೈಲಿಗಲ್ಲು ದಾಟಿದೆ. ಕರೋನಾ ವಿರುದ್ಧದ ನಮ್ಮ ಹೋರಾಟವು ಹೆಚ್ಚು ಉತ್ಸಾಹದಿಂದ ಮುಂದುವರಿಯುತ್ತದೆ. ಈ ತಿಂಗಳ ಅಂತ್ಯದ ವೇಳೆಗೆ 60  ಟೆಸ್ಟ್ ಲ್ಯಾಬ್‌ಗಳನ್ನು ಹೊಂದಲಿದ್ದು ಮ್ಮ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಲಲಿದ್ದೇವೆ. ಇಷ್ಟಲ್ಲದೆ ದಿನಕ್ಕೆ 10,000 ಪರೀಕ್ಷೆಗಳನ್ನು ನಡೆಸಲು ಇದರಿಂದ ಸಾಧ್ಯವಾಗಲಿದೆ" ಎಂದಿದ್ದಾರೆ.

Karnataka crossed 1 lakh #COVID19 tests milestone. Our fight against Corona will continue with more zeal. We are boosting our testing capacity to have 60 labs by end of this month and will be able to conduct 10,000 tests per day.@PMOIndia @CMofKarnataka @drharshvardhan pic.twitter.com/uKOTyCQd2E

ಈ ಮಧ್ಯೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಇಂದು 36 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 789ಕ್ಕೆ ತಲುಪಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com