ತುಮಕೂರು:ಕೋವಿಡ್-19ನಿಂದ ಸೂರತ್ ಮೌಲ್ವಿ ಗುಣಮುಖ,ಬೆಂಗಳೂರು ವ್ಯಕ್ತಿಗೆ ಪಾಸಿಟಿವ್ 

ಸೂರತ್ ನಿಂದ ಬಂದಿದ್ದ 37 ವರ್ಷದ ಮೌಲ್ವಿಯೊಬ್ಬರು  ಚೇತರಿಸಿಕೊಳ್ಳುವ ಮೂಲಕ ತುಮಕೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ರೋಗಿಯೊಬ್ಬರು ಗುಣಮುಖರಾದಂತಾಗಿದೆ.
ಆಸ್ಪತ್ರೆಯಿಂದ ಬಿಡುಗಡೆಯಾದ ಸೂರತ್ ಮೂಲದ ಮೌಲ್ವಿ
ಆಸ್ಪತ್ರೆಯಿಂದ ಬಿಡುಗಡೆಯಾದ ಸೂರತ್ ಮೂಲದ ಮೌಲ್ವಿ

ತುಮಕೂರು: ಸೂರತ್ ನಿಂದ ಬಂದಿದ್ದ 37 ವರ್ಷದ ಮೌಲ್ವಿಯೊಬ್ಬರು  ಚೇತರಿಸಿಕೊಳ್ಳುವ ಮೂಲಕ ತುಮಕೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ರೋಗಿಯೊಬ್ಬರು ಗುಣಮುಖರಾದಂತಾಗಿದೆ.

ಶಿರಾ ಮೂಲದ 45 ವರ್ಷದ ಮತ್ತೋರ್ವ ವ್ಯಕ್ತಿಯೊಬ್ಬರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು,ಜಿಲ್ಲೆಯಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ.

ಮೇ 4ರ ರಾತ್ರಿ  ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯ ಎಂದು ಗುರುತಿಸಲಾಗಿರುವ ಪಾದರಾಯನಪುರದಿಂದ ಬಂದು ಶಿರಾದ ಪೆಶಿಮಾಮ್ ಮೊಹಲ್ಲಾದಲ್ಲಿದ್ದ 45 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 11 ಮಂದಿಯನ್ನು ಶಿರಾದ ಎಂಸಿಹೆಚ್ ಆಸ್ಪತ್ರೆಯಲ್ಲಿ ಐಸೋಲೇಷನ್ ನಲ್ಲಿಡಲಾಗಿದೆ. ದ್ವಿತೀಯ ಸಂಪರ್ಕಕ್ಕೆ ಬಂದಿದ್ದ 14 ಮಂದಿಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. 

ಪಾಸಿಟಿವ್ ಕಂಡುಬಂದಿರುವ ವ್ಯಕ್ತಿ ಶಿರಾ ಪಟ್ಟಣದಲ್ಲಿ ಓಡಾಡುವುದು ಕಂಡುಬಂದರೆ ಸೆಲ್ ಫೋನ್ ಮೂಲಕ ಪತ್ತೆಹಚ್ಚಲಾಗುವುದು, 1 ಸಾವಿರದ 093 ಮನೆಗಳಿದ್ದು, 5 ಸಾವಿರದ 136 ಜನಸಂಖ್ಯೆವುಳ್ಳ ಪೆಶಿಮಾಮ್ ಮೊಹಲ್ಲಾವನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಹಶೀಲ್ದಾರ್ ನಾಹಿದಾ ಜಾಮ್ ಜಾಮ್ ತಿಳಿಸಿದ್ದಾರೆ.

ಸೂರತ್ ಮೌಲ್ವಿಯ ಕ್ವಾರಂಟೈನ್ ಅವಧಿಯ 12 ಮತ್ತು 13ನೇ ದಿನದ ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್ ಕಂಡುಬಂದಿದ್ದು, ಆಸ್ಪತ್ರೆಯಿಂದ ಇಂದು ಬಿಡುಗಡೆ ಮಾಡಲಾಗಿದೆ. ಇದೀಗ ಅವರನ್ನು 28 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇಡಲಾಗುವುದು, ಒಂದು ವೇಳೆ ಅವರ ಪರೀಕ್ಷೆಯಲ್ಲಿ ನೆಗೆಟಿವ್ ಕಂಡುಬಂದರೆ ಗುಜರಾತ್ ಗೆ ತೆರಳಲು ಅವಕಾಶ ಮಾಡಿಕೊಡಲಾಗುವುದು ಎಂದು ಜಿಲ್ಲಾ ಸರ್ಜನ್ ಡಾ. ಟಿ. ಎ. ವೀರಭದ್ರಯ್ಯ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com