ಪಾದರಾಯನಪುರದ ಇಬ್ಬರು ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಪ್ರಸವ; ಮಕ್ಕಳನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ

ಬೆಂಗಳೂರು ನಗರದ ಅತಿ ಹೆಚ್ಚು ಸೋಂಕಿತ ಪ್ರದೇಶವಾಗಿರುವ ಪಾದರಾಯನಪುರದ ಇಬ್ಬರು ಸೋಂಕಿತ ಗರ್ಭಿಣಿಯರು ಶನಿವಾರ ನವಜಾತ ಶಿಶುಗಳಿಗೆ ಜನ್ಮ ನೀಡಿದ್ದಾರೆ. ಆದರೆ, ಮಾರಣಾಂತಿಕ ಕಾಯಿಲೆ ಹಿನ್ನೆಲೆಯಲ್ಲಿ ಈ ಮಕ್ಕಳನ್ನು ತಾಯಿಯಿಂದ ಪ್ರತ್ಯೇಕವಾಗಿರಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ನಗರದ ಅತಿ ಹೆಚ್ಚು ಸೋಂಕಿತ ಪ್ರದೇಶವಾಗಿರುವ ಪಾದರಾಯನಪುರದ ಇಬ್ಬರು ಸೋಂಕಿತ ಗರ್ಭಿಣಿಯರು ಶನಿವಾರ ನವಜಾತ ಶಿಶುಗಳಿಗೆ ಜನ್ಮ ನೀಡಿದ್ದಾರೆ. ಆದರೆ, ಮಾರಣಾಂತಿಕ ಕಾಯಿಲೆ ಹಿನ್ನೆಲೆಯಲ್ಲಿ ಈ ಮಕ್ಕಳನ್ನು ತಾಯಿಯಿಂದ ಪ್ರತ್ಯೇಕವಾಗಿರಿಸಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಪಾದರಾಯನಪುರದ 19 ವರ್ಷದ ಸೋಂಕಿತ ಗರ್ಭಿಣಿಗೆ ವಾಣಿ ವಿಲಾಸ ಆಸ್ಪತ್ರೆಯ ವೈದ್ಯರು ಸಿಸೇರಿಯನ್ ಮೂಲಕ ಅವಳಿ ಹೆಣ್ಣು ಶಿಶುಗಳನ್ನು ಹೊರತೆಗೆದಿದ್ದಾರೆ. ಆದರೆ, ತಾಯಿಗೆ ಕೊರೊನಾ ಸೋಂಕು ಇರುವುದರಿಂದ ಆಕೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ನವಜಾತ ಶಿಶುಗಳನ್ನು ವಾಣಿವಿಲಾಸ ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ನಲ್ಲಿ ಇರಿಸಲಾಗಿದೆ.

ಪಾದರಾಯನಪಪುರದ 35 ವರ್ಷದ ಇನ್ನೊಬ್ಬ ಮಹಿಳೆ ಕೂಡ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶನಿವಾರ ಹೆಣ್ಣು ಮಗುವಿಗೆ ಜನ್ಮನೀಡಿದ್ದು, ಮಗುವನ್ನು ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com