ಸರ್ಕಾರದ ಪ್ಯಾಕೇಜ್ ಘೋಷಣೆ ಬರೀ ಪ್ರಚಾರಕ್ಕಾಗಿ ಮಾತ್ರ: ಎಚ್ ಡಿ ಕುಮಾರಸ್ವಾಮಿ

ಕೊರೋನಾಕ್ಕಾಗಿ  ಸರ್ಕಾರ ಬಿಡುಗಡೆ ಮಾಡಿರುವ 1610 ಕೋಟಿ ರೂ.ಪ್ಯಾಕೇಜ್ ಸಹ ನೆರೆ  ಪರಿಹಾರದ ಪ್ಯಾಕೇಜ್ ನಂತೆ ಬರೀ ಘೋಷಣೆಯಂತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

Published: 10th May 2020 02:31 PM  |   Last Updated: 10th May 2020 02:33 PM   |  A+A-


HDKumaraswamy1

ಎಚ್. ಡಿ. ಕುಮಾರಸ್ವಾಮಿ

Posted By : nagaraja
Source : UNI

ಬೆಂಗಳೂರು,ಕೊರೋನಾಕ್ಕಾಗಿ  ಸರ್ಕಾರ ಬಿಡುಗಡೆ ಮಾಡಿರುವ 1610 ಕೋಟಿ ರೂ.ಪ್ಯಾಕೇಜ್ ಸಹ ನೆರೆ  ಪರಿಹಾರದ ಪ್ಯಾಕೇಜ್ ನಂತೆ ಬರೀ ಘೋಷಣೆಯಂತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ರಾಜರಾಜೇಶ್ವರಿ ವಿಧಾನ  ಸಭಾಕ್ಷೇತ್ರದಲ್ಲಿ ಜೆಡಿಎಸ್ ಮುಖಂಡ ಜಿ.ಕೃಷ್ಣ ಮೂರ್ತಿ ಸುಮಾರು 15 ಸಾವಿರ ಬಡವರಿಗೆ  ಉಚಿತ ಆಹಾರ ಸಾಮಗ್ರಿಗಳ ವಿತರಿಸಿದರು. ಆಹಾರ ಸಾಮಗ್ರಿಗಳ ವಿತರಣೆಗೆ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ  ಅವರು, ಸರ್ಕಾರ ಹಲವು ವರ್ಗಗಳಿಗೆ ಪರಿಹಾರ ಘೋಷಣೆ ಮಾಡಿದೆಯಾದರೂ ಆ ವರ್ಗದ ಜನರನ್ನು  ಗುರುತಿಸುವ ಕೆಲಸವನ್ನು ಮಾತ್ರ ಮಾಡುತ್ತಿಲ್ಲ. ಅಸಂಘಟಿತ ಕಾರ್ಮಿಕ ವರ್ಗದವರಿಗೆ ಹೇಗೆ  ಪರಿಹಾರ ತಲುಪಿಸುತ್ತೀರಿ? ಎಂದು ಪ್ರಶ್ನಿಸಿದರು.


Stay up to date on all the latest ರಾಜ್ಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp