ರಂಜಾನ್ ವೇಳೆ ವಿಶೇಷ ರೈಲಿನಲ್ಲಿ ಬೆಂಗಳೂರಿನಿಂದ ತೆರಳಿದ ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳು

ಮೇ 3 ರಂದು ವಲಸೆ ಕಾರ್ಮಿಕರಿಗಾಗಿ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಬೆಂಗಳೂರು ರೈಲ್ವೆ ವಿಭಾಗ ಇದೇ ಮೊದಲ ಬಾರಿಗೆ ಭಾನುವಾರ ವಿಶೇಷ ರೈಲಿನಲ್ಲಿ ಜಮ್ಮು-ಕಾಶ್ಮೀರಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಿತು.
ಜಮ್ಮು-ಕಾಶ್ಮೀರಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳು
ಜಮ್ಮು-ಕಾಶ್ಮೀರಕ್ಕೆ ತೆರಳುತ್ತಿರುವ ವಿದ್ಯಾರ್ಥಿಗಳು

ಬೆಂಗಳೂರು: ಮೇ 3 ರಂದು ವಲಸೆ ಕಾರ್ಮಿಕರಿಗಾಗಿ ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಬೆಂಗಳೂರು ರೈಲ್ವೆ ವಿಭಾಗ ಇದೇ ಮೊದಲ ಬಾರಿಗೆ ಭಾನುವಾರ ವಿಶೇಷ ರೈಲಿನಲ್ಲಿ ಜಮ್ಮು-ಕಾಶ್ಮೀರಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಿತು.

ಚಿಕ್ಕ ಬಾಣಾವಾರ ರೈಲ್ವೆ ನಿಲ್ದಾಣದಿಂದ ಮಧ್ಯಾಹ್ನ 12-34ಕ್ಕೆ ಹೊರಟ ರೈಲು ವಲಸಿಗರ ವಿಚಾರದಲ್ಲಿ ಹೊಸ ದಾಖಲೆಯೊಂದು ಸೃಷ್ಟಿಸಿತು. 

ಪವಿತ್ರ ರಂಜಾನ್ ಮಾಸದಲ್ಲಿ ತಮ್ಮೂರಿಗೆ ಹೋಗುತ್ತಿರುವುದಕ್ಕೆ ನೆಮ್ಮದಿಯಾಗುತ್ತಿದೆ. ಅನೇಕ ಜನರು ಉಪವಾಸದಲ್ಲಿರುವುದಾಗಿ ಬೆಂಗಳೂರಿನಲ್ಲಿ ನರ್ಸಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿರುವ ವಿದ್ಯಾರ್ಥಿ ಕಮಿಲ್ ಇಲಾಹಿ ಹೇಳಿದರು. ಇದಕ್ಕೆ ಇತರರು ಧ್ವನಿಗೂಡಿಸಿದರು.

ಕೋಲಾರ ಜಿಲ್ಲೆ ಮಾಲೂರಿನಿಂದ  ಮೊದಲಿಗೆ ಪಶ್ಚಿಮ ಬಂಗಾಳ ಹೋಗಿ ನಂತರ  ಜಮ್ಮು- ಕಾಶ್ಮೀರಕ್ಕೆ ಈ ರೈಲು ತಲುಪಿತು. ತ್ರಿಪುರಾ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರಕ್ಕೆ ಇತರ ನಾಲ್ಕು ರೈಲುಗಳು ಓಡಾಡುತ್ತಿವೆ. ಮೇ 6 ಮತ್ತು ಮೇ 7ನ್ನು ಹೊರತುಪಡಿಸಿದಂತೆ ಮೇ 3ರಿಂದ ಮೇ 10ರವರೆಗೂ ಒಟ್ಟಾರೇ 21 ಶ್ರಮಿಕ್ ವಿಶೇಷ ರೈಲುಗಳು ಓಡಾಡುತ್ತಿವೆ.

ಜಮ್ಮು ಮತ್ತು ಕಾಶ್ಮೀರದ ಉದಂಪುರಕ್ಕೆ ಹೋಗುವ ರೈಲಿನಲ್ಲಿ 980 ಆಸನಗಳಲ್ಲಿ ಕುಳಿತಿದ್ದ ಬಹುತೇಕ ಯುವಕರ ಮೊಗದಲ್ಲಿ ಮಂದಹಾಸ ಮೂಡಿತ್ತು. ಪವಿತ್ರ ರಂಜಾನ್ ಮಾಸದಲ್ಲಿ ಕುಟುಂಬದವರ ಜೊತೆ ಇರದೆ ಪಿಜಿ ಹಾಗೂ ಹಾಸ್ಟೆಲ್ ಗಳಲ್ಲಿಯೇ ಇರಬೇಕೆಂದು ಹತಾಶೆಗೊಂಡಿದ್ದ ವಿದ್ಯಾರ್ಥಿಗಳು ಭಾರತೀಯ ರೈಲ್ವೆಯಿಂದಾಗಿ ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ..

ನಗರದ ವಿವಿಧ ಭಾಗಗಳಿಂದ ಸುಮಾರು 40 ಬಿಎಂಟಿಸಿ ಬಸ್ ಗಳಲ್ಲಿ ವಿದ್ಯಾರ್ಥಿಗಳನ್ನು ಅರಮನೆ ಮೈದಾನಕ್ಕೆ ಕರೆತರಲಾಯಿತು. ತಮ್ಮೂರಿಗೆ ತೆರಳಲು ವಿಶೇಷ ರೈಲು ವ್ಯವಸ್ಥೆ ಮಾಡಿದ ಕರ್ನಾಟಕ ಸರ್ಕಾರಕ್ಕೆ ಹೃತ್ಫೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಮೂರನೇ ವರ್ಷದ ನರ್ಸಿಂಗ್ ಪದವಿ ಮಾಡುತ್ತಿರುವ ವಿದ್ಯಾರ್ಥಿ ಆಕಿಬ್ ಅಹ್ಮದ್ ದಾರ್ ಹೇಳಿದರು.

ಸಹಜವಾಗಿ, ನಾವು ಇಂಟರ್ನೆಟ್ ಮತ್ತು ನಾವು ಇಲ್ಲಿರುವ ಸಂವಹನ ಪ್ರಪಂಚದಿಂದ ಕಡಿತಗೊಳ್ಳಲಿದ್ದೇವೆ, ಆದರೆ ಮನೆ ಮನೆಯಾಗಿರುತ್ತದೆ.  ಫೋನ್‌ನಲ್ಲಿ ಎಲ್ಲವನ್ನೂ ಡೌನ್‌ಲೋಡ್ ಮಾಡಿದ್ದೇನೆ ಆದ್ದರಿಂದ ಬುದ್ ಗಾಮ್ ನಲ್ಲಿರುವ ಮನೆಯನ್ನು ತಲುಪಿದಾಗ ಅದನ್ನು ಆಫ್‌ಲೈನ್‌ನಲ್ಲಿ ಬಳಸಬಹುದು ಎಂದು ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಅಕ್ಸಾ ವಾಶಿವ್ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com