ರಾಯಬಾಗ: ತಾನು ಕೊರೆಸಿದ ಬಾವಿಗೆ ತಾನೇ ಬಿದ್ದು ರೈತನ ಆತ್ಮಹತ್ಯೆ

ಬೆಳೆಗಾಗಿ ಹೊಲದಲ್ಲಿ ಕೊರೆಸಿದ ಕೊಳವೆ ಬಾವಿಗೆ ನೀರು ಬರದೇ ಹಿನ್ನೆಲೆಯಲ್ಲಿ‌ ಅದೇ ಕೊಳವೆ ಬಾವಿಗೆ ರೈತ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಬಾಗ ತಾಲೂಕಿನ ಸುಲ್ತಾನಪುರ್ ಗ್ರಾಮದಲ್ಲಿ ನಡೆದಿದೆ.
ಕೊಳವೆ ಬಾವಿ
ಕೊಳವೆ ಬಾವಿ

ರಾಯಬಾಗ: ಬೆಳೆಗಾಗಿ ಹೊಲದಲ್ಲಿ ಕೊರೆಸಿದ ಕೊಳವೆ ಬಾವಿಗೆ ನೀರು ಬರದೇ ಹಿನ್ನೆಲೆಯಲ್ಲಿ‌ ಅದೇ ಕೊಳವೆ ಬಾವಿಗೆ ರೈತ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಬಾಗ ತಾಲೂಕಿನ ಸುಲ್ತಾನಪುರ್ ಗ್ರಾಮದಲ್ಲಿ ನಡೆದಿದೆ.

ರಾಯಬಾಗ ತಾಲ್ಲೂಕಿನ ಸುಲ್ತಾನಪುರ್ ಗ್ರಾಮದ ರೈತ ಲಕ್ಕಪ್ಪ ದೊಡ್ಡಮನಿ (38) ಮೃತ ದುರ್ದೈವಿ. ಬೇಸಿಗೆ ಸಂದರ್ಭದಲ್ಲಿ ನೀರಿನ ಭವನೆ ಹಾಗೂ ಬೆಳೆಗಳಿಗೆ ನೀರಿನ ಕೊರತೆ ನಿಗಿಸಲು, ಹೊಲದಲ್ಲಿ ಎರಡು ದಿನಗಳ ಹಿಂದೆ ಕೊಳವೆ ಬಾವಿ ಕೊರಿಸಿದ್ದ, ಈ ಬಾವಿಗೆ ನೀರು ಬರಲಿಲ್ಲವೆಂದು, ಆತಂಕಗೊಂಡ ರೈತ ಅದೇ ಕೊಳವೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಆ ಕೊಳವೆ ಭಾವಿ ಸುಮಾರು ೫೦೦ ಅಡಿಯಷ್ಟೂ ಆಳ ತೆಗೆದರೂ ನೀರು ಬರಲಿಲ್ಲ. ಇದರಿಂದ ರೈತ ನೊಂದಿದ್ದ.

ನಿನ್ನೆ ತಡರಾತ್ರಿ ತನ್ನ ಶರ್ಟಗಳನ್ನು ಮೇಲೆಯೇ ತೆಗೆದಿಟ್ಟು ಅದೇ ಕೊಳವೆ ಭಾವಿಯಲ್ಲಿ ಜಿಗಿದಿದ್ದು ಕೇವಲ‌ ೨೦ ಅಡಿ ಆಳಕ್ಕೆ ಹೋಗಿ ಸಿಲು‌ಹಾಕಿಕೊಂಡಿದ್ದಾನೆ. ನಂತ್ರ ಮನೆಯಲ್ಲಿ ಹುಡುಕಾಟ‌ ನಡೆಸಿದ್ದಾರೆ. ನಂತ್ರ ಕೊಳವೆ ಬಾವಿಯ ಹತ್ತಿರ ಬಂದು ನೋಡಿದಾಗ ಆತ‌ನ ಶರ್ಟಗಳನ್ನು ನೋಡಿದಾಗ ಕೊಳವೆ ಭಾವಿಯಲ್ಲಿ ಜಿಗಿದಿದ್ದಾನೆ ಎಂದು ತಿಳಿದು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ಬೊಮ್ಮನಳಿ, ಎಸ್ಪಿ, ರಾಯಬಾಗ ತಹಶಿಲ್ದಾರ, ಡಿವೈಎಸ್ಪಿ ಗಿರೀಶ್ ಅಗ್ನಿಶಾಮಕ ಸಿಬ್ಬಂದಿಗಳು, ಆಗಮಿಸಿದ್ದು, ಜೆಸಿಬಿಯಿಂದ ಶವಕ್ಕಾಗಿ ಶೋದ ಕಾರ್ಯಾಚರಣೆ ನಡೆಸಿದರು. 20 ಅಡಿ ಆಳದಲ್ಲಿ ಲಕ್ಕಪ್ಪ ಸಿಕ್ಕಿದ್ದು, ಕೊಳವೆ ಬಾವಿಯಲ್ಲಿ ಸಾಕಷ್ಟು ಬಿಯಾಗಿ ಸಿಲುಕಿದ್ದರಿಂದ ಹೊರತೆಗೆಯಲು ಸಾಕಷ್ಟು ಅಗ್ನಿಶಾಮಕದಳ ಸಿಬ್ಬಂಧಿಗಳ ಹರ ಸಾಹಸಪಟ್ಟರು.

ಆತ ಯಾವುದೇ ಕೈಕಾಲು ಆಡಿಸಿಲ್ಲ.. ಅಲ್ಲದೇ ಇಂದು ಮದ್ಯಾಹ್ನ ವಿಷಯ ತಿಳಿದಿದ್ದರಿಂದ ಬಹಳ ಸತತ ಮೂರು ಗಂಟೆಗಳ ಕಾರ್ಯಚರಣೆ ಮಾಡಿ ಹೊರ ತೆಗೆಯುಷ್ಟರಲ್ಲಿ ಮೃತ ಹೊಂದಿದ್ದ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com