ಚಾಮರಾಜನಗರದಲ್ಲಿ ಕಾಣಿಸಿಕೊಂಡ ಅತ್ಯಪರೂಪದ ಬೂದು ಬಣ್ಣದ ತೋಳ

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅತ್ಯಪರೂಪದ ಬೂದು ಬಣ್ಣದ ತೋಳ ಕಾಣಿಸಿಕೊಂಡಿದ್ದು, ಖ್ಯಾತ ಅರಣ್ಯ ತಜ್ಞರು ಇದರ ಫೋಟೋ ಕ್ಲಿಕ್ಕಿಸಿದ್ದಾರೆ.
ಬೂದು ಬಣ್ಣದ ತೋಳ
ಬೂದು ಬಣ್ಣದ ತೋಳ

ಬೆಂಗಳೂರು: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅತ್ಯಪರೂಪದ ಬೂದು ಬಣ್ಣದ ತೋಳ ಕಾಣಿಸಿಕೊಂಡಿದ್ದು, ಖ್ಯಾತ ಅರಣ್ಯ ತಜ್ಞರು ಇದರ ಫೋಟೋ ಕ್ಲಿಕ್ಕಿಸಿದ್ದಾರೆ.

ಇದೇ ಏಪ್ರಿಲ್ 7ರಂದು ಖ್ಯಾತ ವನ್ಯಜೀವಿ ಜೀವಶಾಸ್ತ್ರಜ್ಞ ಸಂಜಯ್ ಗುಬ್ಬಿ ಅವರ ನೇತೃತ್ವದ ನೇಚರ್ ಕನ್ಸರ್ವೇಟಿವ್ ಫೌಂಡೇಷನ್ ತಂಡ ಈ ಅಪರೂಪದ ಬೂದು ಬಣ್ಣದ ತೋಳವನ್ನು ಪತ್ತೆ ಮಾಡಿದ್ದಾರೆ. ಅವರ ಈ ತಂಡದಲ್ಲಿ ಸಂದೇಶ್ ಅಪ್ಪು ನಾಯಕ್, ಗಿರೀಶ್ ಎಂ ಎನ್,  ಜ್ಞಾನೇಂದ್ರ, ಪೂರ್ಣೇಶ ಎಚ್‌ಸಿ ಅವರಿದ್ದು, ಬೂದು ಬಣ್ಣದ ತೋಳವನ್ನು ತಮ್ಮ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದಾರೆ. ಚಿರತೆಯನ್ನು ಟ್ರಾಪ್ ಮಾಡಲು ಇಡಲಾಗಿದ್ದ ಕ್ಯಾಮೆರಾದಲ್ಲಿ ಈ ಬೂದು ಬಣ್ಣದ ತೋಳ ಸೆರೆಯಾಗಿದೆ.

ಈ ಬಗ್ಗೆ ಮಾತನಾಡಿರುವ ಸಂಜಯ್ ಗುಬ್ಬಿ ಅವರು, ಚಾಮರಾಜನಗರದಲ್ಲಿ ತೋಳಗಳಿವೆ ಎಂಬ ನಂಬಿಕೆ ಇದೀಗ ಚಿತ್ರ ಸಹಿತ ಆಧಾರ ಸಿಕ್ಕಿದೆ. ಕಾವೇರಿ ಮತ್ತು ಮಲೈ ಮಹದೇಶ್ವರ ಬೆಟ್ಟ ಸಂರಕ್ಷಿತಾರಣ್ಯ, ಬಂಡೀಪುರ ಸಂರಕ್ಷಿತಾರಣ್ಯ, ಬಂಡೀಪುರ ಹುಲಿ ಸಂರಕ್ಷಿತಾರಣ್ಯಗಳಲ್ಲಿ ಬೂದು  ಬಣ್ಣದ ತೋಳಗಳಿವೆ ಎಂಬುದಕ್ಕೆ ಯಾವುದೇ ದಾಖಲೆಗಳಿರಲಿಲ್ಲ. ಈ ಬಗ್ಗೆ ನಡೆದ ಅಧ್ಯಯನದಲ್ಲೂ ಬೂದು ಬಣ್ಣದ ತೋಳಗಳ ಕುರಿತು ಪ್ರಸ್ತಾಪವಾಗಿರಲಿಲ್ಲ. ಇದೀಗ ಚಿತ್ರಸಹಿತ ಆಧಾರ ಸಿಕ್ಕಿದೆ. ಸಾಮಾನ್ಯವಾಗಿ ಉತ್ತರ ಕರ್ನಾಟಕ ದಟ್ಟಾರಣ್ಯಗಳಲ್ಲಿ ಈ ಬೂದು ಬಣ್ಣದ ತೋಳಗಳು  ಅಪರೂಪವಾಗಿ ಕಾಣಸಿಗುತ್ತವೆ ಎಂದು ಹೇಳಿದ್ದಾರೆ.

ಬೂದು ಬಣ್ಣದ ತೋಳಗಳ ಸಂತತಿ ಕ್ಷಿಣಿಸುತ್ತಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿನ ಸಂರಕ್ಷಿಸಲ್ಪಟ್ಟ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಪಟ್ಟಿಗೆ ಬೂದು ಬಣ್ಣದ ತೋಳ ಕೂಡ ಸೇರಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com