ಕೋವಿಡ್-19: ಮೈಸೂರಿನಲ್ಲಿ ಮೊಬೈಲ್ ಲ್ಯಾಬ್ ಮೂಲಕ ಪರೀಕ್ಷಾ ಸಾಮರ್ಥ್ಯ ಹೆಚ್ಚಳ

ಕೊರೋನಾ ಮಟ್ಟಹಾಕಲು ಹೆಣಗಾಡುತ್ತಿರುವ ಮೈಸೂರು ನಗರದ ನೆರವಿಗೆ ಡಿಎಫ್ಆರ್'ಎಲ್ ಸಂಸ್ಥೆ ಬಂದಿದ್ದು, ಡಿಎಫ್ಆರ್'ಎಲ್ ನೀಡಿದ ಮೊಬೈಲ್ ಲ್ಯಾಬ್ ನಿಂದಾಗಿ ಇದೀಗ ಮೈಸೂರು ನಗರದ ಕೋವಿಡ್-19 ಪರೀಕ್ಷಾ ಸಾಮರ್ಥ್ಯ ಹೆಚ್ಚಾದಂತಾಗಿದೆ. 
ಮೊಬೈಲ್ ಲ್ಯಾಬ್
ಮೊಬೈಲ್ ಲ್ಯಾಬ್

ಮೈಸೂರು: ಕೊರೋನಾ ಮಟ್ಟಹಾಕಲು ಹೆಣಗಾಡುತ್ತಿರುವ ಮೈಸೂರು ನಗರದ ನೆರವಿಗೆ ಡಿಎಫ್ಆರ್'ಎಲ್ ಸಂಸ್ಥೆ ಬಂದಿದ್ದು, ಡಿಎಫ್ಆರ್'ಎಲ್ ನೀಡಿದ ಮೊಬೈಲ್ ಲ್ಯಾಬ್ ನಿಂದಾಗಿ ಇದೀಗ ಮೈಸೂರು ನಗರದ ಕೋವಿಡ್-19 ಪರೀಕ್ಷಾ ಸಾಮರ್ಥ್ಯ ಹೆಚ್ಚಾದಂತಾಗಿದೆ. 

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವೈರಾಲಜಿ ವಿಭಾಗಕ್ಕೆ ಡಿಫೆನ್ಸ್ ಫುಡ್ ರಿಸರ್ಚ್ ಲಾಬೊರೇಟರಿ ಕೇಂದ್ರೀಯ ಸಂಸ್ಥೆಯ ಸುಸಜ್ಜಿತ ಪ್ರಯೋಗಾಲಯ (ಮೊಬೈಲ್ ಲ್ಯಾಬ್)ನ್ನು ಹಸ್ತಾಂತರ ಮಾಡಿದೆ. 

ಈ ಲ್ಯಾಬ್ ನಿಂದಾಗಿ ಮೈಸೂರು ನಗರದಲ್ಲಿ ಶೇ.30 ರಷ್ಟು ಪರೀಕ್ಷಾ ಸಾಮರ್ಥ್ಯ ಹೆಚ್ಚಾದಂತಾಗಿದೆ. ಅಲ್ಲದೆ, ಬೆಂಗಳೂರಿನ ನಿಮ್ಹಾನ್ಸ್ ಮೇಲೆ ಅವಲಂಬನೆಯನ್ನೂ ಕಡಿಮೆ ಮಾಡಿದೆ. 

ಈ ಮೊಬೈಲ್ ಲ್ಯಾಬ್ನ್ನು ಕೆಆರ್ ಆಸ್ಪತ್ರೆಗೆ ಡಿಎಫ್ಆರ್ಎಲ್ ನಿರ್ದೇಶಕ ಡಾ.ಅನಿಲ್ ದತ್ ಸೆಮ್ವಾಲ್ ಅವರು ಸೋಮವಾರ ಹಸ್ತಾಂತರ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com