ಮೈಸೂರಿನ ರೈತರಿಗೆ ಲಾಕ್ ಡೌನ್ ಎಫೆಕ್ಟ್: ನೀರಿಲ್ಲದೇ ಒಣಗಿದ ಬೆಳೆಗಳು

ಲಾಕ್ ಡೌನ್ ಹಿನ್ನೆಲೆಯಿಂದಾಗಿ ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳು ಹಾಳಾಗಿವೆ. ಆದರೂ, ಕಬಿನಿ ಜಲಾಶಯದಲ್ಲಿ ಸಾಕಷ್ಟು ನೀರು ಇದೆ. ಮಳೆಗಾಲದಲ್ಲಿ ನಿರಂತರ ಮಳೆಯಿಂದಾಗಿ ಕೃಷಿ ಸಮುದಾಯದಲ್ಲಿ ಭರವಸೆಯನ್ನು ಹುಟ್ಟುಹಾಕಿತ್ತು ಕೊರೋನಾದಿಂದಾಗಿ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಲಾಕ್ ಡೌನ್ ಹಿನ್ನೆಲೆಯಿಂದಾಗಿ ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳು ಹಾಳಾಗಿವೆ. ಆದರೂ, ಕಬಿನಿ ಜಲಾಶಯದಲ್ಲಿ ಸಾಕಷ್ಟು ನೀರು ಇದೆ. ಮಳೆಗಾಲದಲ್ಲಿ ನಿರಂತರ ಮಳೆಯಿಂದಾಗಿ ಕೃಷಿ ಸಮುದಾಯದಲ್ಲಿ ಭರವಸೆಯನ್ನು ಹುಟ್ಟುಹಾಕಿತ್ತು ಕೊರೋನಾದಿಂದಾಗಿ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ.

ಬೆಳೆಗಳಿಗೆ ನೀರು ಹಾಯಿಸುವುದಾಗಿ ನೀರಾವರಿ ಅಧಿಕಾರಿಗಳು ಭರವಸೆ ನೀಡಿದ್ದರು, ಆದರೆ ಪ್ರಸಕ್ತ ಇರುವ ಸನ್ನಿವೇಶದಿಂದಾಗಿ  ಸಾಧ್ಯವಾಗುತ್ತಿಲ್ಲ, ತಮ್ಮ ಬೆಳೆಗಳಿಗೆ ನೀರು ಸಿಗಲಿದೆ ಎಂದು ರೈತರು ಸಂತೋಷದಿಂದಿದ್ದರು, ಹೀಗಾಗಿ ಜೋಳ, ಹೆಸರುಕಾಳು,ರಾಗಿ ಮುಂತಾದ ಕಾಳುಗಳನ್ನು ಬಿತ್ತನೆ ಮಾಡಿದ್ದರು, ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಿದ್ದರು,

ಈ ಪ್ರದೇಶದಲ್ಲಿ ಪೂರ್ವ ಮುಂಗಾರು ಮಳೆಯಾಗಿದ್ದರಿಂದ ಪಡೆದಿದ್ದರಿಂದ ಕೃಷಿ ಚಟುವಟಿಕೆಗಳು ವೇಗವನ್ನು ಪಡೆದುಕೊಂಡಿದ್ದವು. ಆದರೆ ಫೆಬ್ರವರಿಯಲ್ಲಿ 15 ದಿನಗಳ ಕಾಲ ನೀರನ್ನು ಬಿಡುಗಡೆ ಮಾಡಿದ ಜಲಸಂಪನ್ಮೂಲ ಇಲಾಖೆ, ಮಾರ್ಚ್‌ನಲ್ಲಿ ಹಾಗೆ ಮಾಡದ ಕಾರಣ, ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಕಬಿನಿ ಜಲಾಶದಿಂದ ನೀರು ಹರಿಸದ ಕಾರಣ ನಾವು ಬೆಳೆದಿದ್ದ ಜೋಳದ ಬೆಳೆ ಒಣಗಿ ಹೋಗಿದೆ ಎಂದು ರೈತರು ಹೇಳಿದ್ದಾರೆ. ಬೇಸಿಗೆ ಬೆಳೆಗಳಿಗೆ ನೀರು ಹರಿಸಲು ನಮಗೆ ಅನುಮತಿ ಸಿಕ್ಕಿಲ್ಲ  ಎಂದು ಮುಖ್ಯ ಅಭಿಯಂತರ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com