ಹೆಚ್ 1-ಬಿ ವೀಸಾ ನಿರ್ಬಂಧಿಸಲು ಅಮೆರಿಕಾ ಚಿಂತನೆ: ಅನಿಶ್ಚಿತತೆಯಲ್ಲಿ ಭಾರತೀಯ ಐಟಿ ಉದ್ಯಮ

ಹೆಚ್-1 ಬಿ ವೀಸಾಗಳು ಸೇರಿದಂತೆ ವಿವಿಧ ಅತಿಥಿ ಕೆಲಸಗಾರರ ವೀಸಾಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕಾ ಸರ್ಕಾರ ಚಿಂತನೆ ನಡೆಸಿದ್ದು, ಹೆಚ್ಚಾಗಿ ಈ ವೀಸಾಗಳ ಪ್ರಯೋಜನ ಹೊಂದಿರುವ ಭಾರತೀಯ ಐಟಿ ಉದ್ಯಮದ ಮೇಲೆ ಅನಿಶ್ಚಿತತೆಯ ಕಾರ್ಮೋಡ ಆವರಿಸಿದೆ. 

Published: 12th May 2020 02:15 PM  |   Last Updated: 12th May 2020 02:15 PM   |  A+A-


Casual_image1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ಬೆಂಗಳೂರು: ಹೆಚ್-1 ಬಿ ವೀಸಾಗಳು ಸೇರಿದಂತೆ ವಿವಿಧ ಅತಿಥಿ ಕೆಲಸಗಾರರ ವೀಸಾಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕಾ ಸರ್ಕಾರ ಚಿಂತನೆ ನಡೆಸಿದ್ದು, ಹೆಚ್ಚಾಗಿ ಈ ವೀಸಾಗಳ ಪ್ರಯೋಜನ ಹೊಂದಿರುವ ಭಾರತೀಯ ಐಟಿ ಉದ್ಯಮದ ಮೇಲೆ ಅನಿಶ್ಚಿತತೆಯ ಕಾರ್ಮೋಡ ಆವರಿಸಿದೆ. 

ಅಮೆರಿಕಾದ ಅಧಿಕೃತ ಮಾಹಿತಿಗಳ ಪ್ರಕಾರ, 2021ರ ಆರ್ಥಿಕ ವರ್ಷವೊಂದರಲ್ಲಿಯೇ  2, 75, 000 ಹೆಚ್-1 ಬಿ ವೀಸಾ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆದಾಗ್ಯೂ,ಕಠಿಣ ನಿಯಮಗಳು ಮತ್ತು ಅನುಸರಣೆ ವೆಚ್ಚಗಳಿಂದಾಗಿ 2020ನೇ ವರ್ಷದ ಮೊದಲ ತ್ರೈಮಾಸಿಕದಲ್ಲಿ ಈ ವೀಸಾಗಳ ತಿರಸ್ಕೃತ ದರ ಶೇ. 30 ರಷ್ಟಾಗಿದೆ. 

ಅಮೆರಿಕಾದಲ್ಲಿ ಪ್ರಮುಖ ಸಂಸ್ಥೆಗಳಿಗಿಂತಲೂ ಭಾರತೀಯ ಐಟಿ , ಐಟಿಇಎಸ್  ಮತ್ತು ಕನ್ಸಲ್ ಟೆನ್ಸಿ ಸಂಸ್ಥೆಗಳ ತಿರಸ್ಕೃತ ದರವೇ ಹೆಚ್ಚಾಗಿದೆ. 2021ರ ಆರ್ಥಿಕ ವರ್ಷದಲ್ಲಿ ಸುಮಾರು ಶೇಕಡಾ 67 ರಷ್ಟು ಹೊಸದಾಗಿ ಹೆಚ್-1 ಬಿ ವೀಸಾ ಅರ್ಜಿಗಳು ಭಾರತೀಯದಿಂದ ಬಂದಿವೆ ಎಂಬ ಮಾಹಿತಿಯಿದೆ.

ಅಮೆರಿಕಾದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಿನಲ್ಲಿ 20. 5 ಮಿಲಿಯನ್ ನಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದು, ನಿರುದ್ಯೋಗ ಪ್ರಮಾಣ ತಾಂಡವವಾಡುತ್ತಿರುವಂತೆಯೇ ಕನಿಷ್ಠ ಪಕ್ಷ ಮುಂದಿನ ವರ್ಷ ಅಥವಾ ನಿರುದ್ಯೋಗ  ಪ್ರಮಾಣ ಸಹಜ ಸ್ಥಿತಿಗೆ ಮರಳುವವರೆಗೂ ಅತಿಥಿ ಕೆಲಸಗಾರರ ವೀಸಾಗಳನ್ನು ಅಮಾನತುಪಡಿಸಬೇಕೆಂದು ಅಮೆರಿಕಾದ ನಾಲ್ವರು ಜನಪ್ರತಿನಿಧಿಗಳು ಟ್ರಂಪ್ ಗೆ ಪತ್ರ ಬರೆದಿದ್ದಾರೆ.

ಹೆಚ್1- ಬಿ ವೀಸಾಗಳನ್ನು ತಾತ್ಕಾಲಿಕವಾಗಿ ಅಮಾನತುಪಡಿಸುವುದರಿಂದ ಭಾರತೀಯ ಐಟಿ, ಐಟಿಇಎಸ್ ಕ್ಷೇತ್ರಕ್ಕೆ ಅನಿಶ್ಚಿತತೆ ಆವರಿಸಲಿದೆ. ರಿಪಬ್ಲಿಕನ್ ಪಕ್ಷದ ಪ್ರತಿನಿಧಿಗಳು ಕೂಡಾ ಹೆಚ್1- ಬಿ ವೀಸಾಗಳ ನಿರ್ಬಂಧಕ್ಕೆ ವೋಟ್ ಹಾಕಲಿದ್ದಾರೆಯೇ ಎಂಬುದನ್ನು ನೋಡಿಕೊಂಡು ಐಟಿ ಉದ್ಯಮಗಳು ನಿರ್ಧಾರ ಕೈಗೊಳ್ಳಬೇಕಾಗಿದೆ. ಒಂದು ವೇಳೆ ಇಂತಹ ಎಲ್ಲಾ ಕಾನೂನು ಪಾಸ್ ಆದರೆ, 

"ಹೆಚ್1-ಬಿ ವೀಸಾಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವ ಕ್ರಮವು ಭಾರತೀಯ ಐಟಿ / ಐಟಿ ವಲಯಕ್ಕೆ ಅಭೂತಪೂರ್ವವಾಗಿರುತ್ತದೆ. ಅಮೆರಿಕಾದಲ್ಲಿನ ಅನೇಕ ಒಪ್ಪಂದಗಳಿಗೆ ಈ ವೀಸಾಗಳನ್ನು ಹೊಂದಿರುತ್ತಾರೆ. ಹೆಚ್-1 ಬಿ ವೀಸಾಗಳನ್ನು ನಿಷೇಧಿಸುವ ಶಾಸನಕ್ಕೆ ರಿಪಬ್ಲಿಕನ್ನರು ಸಹ ಮತ ಚಲಾಯಿಸುತ್ತಾರೆಯೇ ಎಂಬುದನ್ನು ನೋಡಿಕೊಂಡು ಉದ್ಯಮ ನೀತಿಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಅಂತಹ ಕಾನೂನು ಜಾರಿಗೆ ಬಂದರೆ, ಅದು ಅಲ್ಪಾವಧಿಯಲ್ಲಿಯೇ ಅಮೆರಿಕಾದೊಳಗಿರುವ  ಭಾರತೀಯ ಐಟಿ ಸಂಸ್ಥೆಗಳಿಂದ ಹೊಸ ನೇಮಕಾತಿಯನ್ನು ಪ್ರಚೋದಿಸುತ್ತದೆ. ಸದ್ಯಕ್ಕೆ, ಒಂದು ದೊಡ್ಡ ಅನಿಶ್ಚಿತತೆಯಿದೆ ”ಎಂದು ಸ್ಟ್ರಾಟಾ ಕನ್ಸಲ್ ಟಿಂಗ್  ಸಿಇಒ ಶೈಲೇಶ್ ಷಾ ತಿಳಿಸಿದ್ದಾರೆ. 

ಅಂತಹ ಯಾವುದೇ ಕಾನೂನು ಅಂಗೀಕಾರವಾದರೂ ಮುಂದಿನ ವರ್ಷ ಅನುಷ್ಟಾನವಾಗಲಿದೆ.ಈ ವರ್ಷದ ಹೆಚ್1 - ಬಿ ವೀಸಾ ಅರ್ಜಿಗಳನ್ನು ನೀಡುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಹೆಚ್1- ಬಿ ವೀಸಾಗಳ ತಾತ್ಕಾಲಿಕ ನಿಷೇಧವೂ  ಸಹ ಭಾರತೀಯ ಮತ್ತು ಜಾಗತಿಕ ಐಟಿ ಸಂಸ್ಥೆಗಳಂತೆ ಅಸಂಭವಾಗಿದ್ದು, ಸಿಲಿಕಾನ್ ವ್ಯಾಲಿ ಸ್ಟಾರ್ಟ್ ಆಪ್ ಗಳು ಹೆಚ್1-ಬಿ ವೀಸಾಗಳ ಆಧಾರದ ಮೇಲೆ ಭಾರತೀಯರನ್ನು ನೇಮಕ ಮಾಡಿಕೊಳ್ಳುತ್ತಿವೆ ಎಂದು ಇಐಐಆರ್ ಟಿರೆಂಡ್ ಮತ್ತು ಪರೇಖ್ ಕನ್ಸಲ್ಟಿಂಗ್ ಸಂಸ್ಥಾಪಕ  ಪರೇಖ್ ಜೈನ್ ಹೇಳಿದ್ದಾರೆ

Stay up to date on all the latest ರಾಜ್ಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp