ಲಂಡನ್ ನಿಂದ ಬಂದಿಳಿಯುತ್ತಿದ್ದಂತೆ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಗರ್ಭಿಣಿ ದೌಡು: ಮಗು ಜನನ

ಲಂಡನ್ ನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ 27 ವರ್ಷದ ಗರ್ಭಿಣಿ ಮಹಿಳೆಯೊಬ್ಬರಿಗೆ ತೀವ್ರ  ನೋವು ಕಾಣಿಸಿಕೊಂಡಿದ್ದು,ಅಂಬ್ಯುಲೆನ್ಸ್ ಮೂಲಕ ಮಲ್ಲೇಶ್ವರಂನಲ್ಲಿರುವ ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲಂಡನ್ ನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ 27 ವರ್ಷದ ಗರ್ಭಿಣಿ ಮಹಿಳೆಯೊಬ್ಬರಿಗೆ ತೀವ್ರ  ನೋವು ಕಾಣಿಸಿಕೊಂಡಿದ್ದು,ಅಂಬ್ಯುಲೆನ್ಸ್ ಮೂಲಕ ಮಲ್ಲೇಶ್ವರಂನಲ್ಲಿರುವ ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆ ಮಹಿಳೆ ಮಗುವೊಂದಕ್ಕೆ ಜನ್ಮ ನೀಡಿದ್ದು,ತಾಯಿ ಮತ್ತು ಮಗು ಇಬ್ಬರು ಆರೋಗ್ಯದಿಂದ ಇದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆಕೆಯ ಪತಿ ಲಂಡನ್ ನಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದು, ಪೀಣ್ಯದಲ್ಲಿ ಗೃಹಿಣಿಯಾಗಿದ್ದ ಈ ಮಹಿಳೆ ಇತ್ತೀಚಿಗೆ ಲಂಡನ್ ಗೆ ತಾತ್ಕಾಲಿಕವಾಗಿ ತೆರಳಿದ್ದರು. ವೀಸಾ ಅವಧಿ ಮುಗಿದಿರುವುದರಿಂದ ಗಂಡ ಹಾಗೂ ಹೆಂಡತಿ ಇದೀಗ ಇಬ್ಬರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. 

ಚೊಚ್ಚಲ ಹೆರಿಗೆ ಆಗಿದ್ದರಿಂದ ಗಂಡ ಹೆಂಡತಿ ತುಂಬಾ ಆತಂಕದಲ್ಲಿದ್ದರು.ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಆಸ್ಪತ್ರೆಗೆ ಬಂದಿದ್ದರಿಂದ  ಸುಲಭ ಹೆರಿಗೆ ಆಯಿತು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಶಿಶು ಹೊಟ್ಟೆಯೊಳಗೆ ಆರೋಗ್ಯದಿಂದ ಇರುವುದು ಸ್ಯ್ಕಾನಿಂಗ್ ಮೂಲಕ ತಿಳಿಯಿತು. ಪ್ರಯಾಣದಿಂದಾಗಿ ತಾಯಿ ಆಯಾಸಗೊಂಡಿದ್ದರು. ಪ್ರಸ್ತುತ ತಾಯಿ ಮತ್ತು ಮಗು ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ. ತಾಯಿಗೆ ಅನೇಕ ಪರೀಕ್ಷೆಯಾದ ಬಳಿಕ ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. 

ಲಂಡನ್ ನಿಂದ ಬೆಂಗಳೂರಿಗೆ ಆಗಮಿಸಿದ ಎಲ್ಲಾ 326 ಮಂದಿ ಹೋಟೆಲ್ ಕ್ವಾರಂಟೈನ್ ನಲ್ಲಿ ಇರುವುದಾಗಿ ವೈದ್ಯಕೀಯ ಸಚಿವ ಡಾ. ಸುಧಾಕರ್ ಹಾಗೂ  ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com