ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತು ಪತ್ನಿಯ ಹತ್ಯೆ; ಸ್ವತಃ ಪೊಲೀಸ್ ಠಾಣೆಗೆ ಶರಣಾದ ಆರೋಪಿ ಪತಿ

ಪತಿಯಿಂದಲೇ ಪತ್ನಿ ಹತ್ಯೆಯಾಗಿರುವ ಘಟನೆ ಕೃಷ್ಣರಾಜಪೇಟೆ ತಾಲ್ಲೂಕಿನ ಮೂಡನಹಳ್ಳಿ ಗ್ರಾಮದ ಬಳಿ ನಡೆದಿದೆ. ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮ ಪತ್ನಿ ಮುನಿಯಮ್ಮ (30)ಎಂಬಾಕೆಯೇ ತನ್ನ ಪತಿ ಸ್ವಾಮಿ(40)ಯಿಂದ ಹತ್ಯೆಯಾಗಿದ್ದಾಳೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಡ್ಯ: ಪತಿಯಿಂದಲೇ ಪತ್ನಿ ಹತ್ಯೆಯಾಗಿರುವ ಘಟನೆ ಕೃಷ್ಣರಾಜಪೇಟೆ ತಾಲ್ಲೂಕಿನ ಮೂಡನಹಳ್ಳಿ ಗ್ರಾಮದ ಬಳಿ ನಡೆದಿದೆ. ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮ ಪತ್ನಿ ಮುನಿಯಮ್ಮ (30)ಎಂಬಾಕೆಯೇ ತನ್ನ ಪತಿ ಸ್ವಾಮಿ(40)ಯಿಂದ ಹತ್ಯೆಯಾಗಿದ್ದಾಳೆ.

ಘಟನೆಯ ಹಿನ್ನೆಲೆ: ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮ ಮುನಿಯಮ್ಮ ಮತ್ತು ಮೇಸ್ತ್ರಿ ಸ್ವಾಮಿ ದಂಪತಿಗಳು ಕೆ.ಆರ್.ಪೇಟೆ ತಾಲ್ಲೂಕಿನ ಹರಿಹರಪುರದಲ್ಲಿ ತನ್ನ ಎರಡು ಮಕ್ಕಳೊಂದಿಗೆ ನೆಲೆಸಿದ್ದರು. ಶುಂಠಿ ಬೆಳೆ ಬೇಸಾಯದ ಗುತ್ತಿಗೆಯನ್ನು ಪಡೆದುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಮೇಸ್ತ್ರಿಸ್ವಾಮಿಗೆ ತನ್ನ ಪತ್ನಿ ಮುನಿಯಮ್ಮನ ಮೇಲೆ ನಡತೆಯ ಶೀಲದ ಮೇಲೆ ಅನುಮಾನವಿತ್ತು. ರಂಗಾಪುರ ಗ್ರಾಮದ ವೆಂಕಟೇಶ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಸ್ವಾಮಿ ತನ್ನ ಪತ್ನಿಯ ಜೊತೆ ಆಗಾಗ್ಗೆ ಜಗಳ ಮಾಡುತ್ತಿದ್ದ, ಇಂದು ಕೂಡ ಜಗಳ ಮಾಡಿ ತನ್ನ ಪತ್ನಿ ಮುನಿಯಮ್ಮಳನ್ನು ಶಾಶ್ವತವಾಗಿ ಮುಗಿಸಲು ನಿರ್ಧರಿಸಿದ್ದಾನೆ. ಅಂತೆಯೇ ಇಂದು ಮಧ್ಯಾಹ್ನ ಸುಮಾರು 3.3೦ರ ಸಮಯದಲ್ಲಿ ಅಕ್ಕಿಹೆಬ್ಬಾಳು ಹೋಬಳಿಯ ಮೂಡನಹಳ್ಳಿ ಗ್ರಾಮದ ಹೊರವಲಯದ ನಿರ್ಜನ ಪ್ರದೇಶವಾದ ಹೇಮಾವತಿ ಎಡದಂಡೆಯ ಬಳಿ ಕರೆದೊಯ್ದು ಕತ್ತು ಹಿಸುಕಿ ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಆಕೆಯ ಹತ್ಯೆ ಬಳಿಕ ತಾನೆ ಸ್ವತಃ ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದು ಪತ್ನಿ ಹತ್ಯೆ ಮಾಡಿರುವ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.

ಇದೀಗ ಮುನಿಯಮ್ಮಳ ಕೊಲೆಯಿಂದಾಗಿ ಚಂದು(3) ಮತ್ತು ಸಿಂಚನ(2) ಎಂಬ ಎರಡು ಮಕ್ಕಳು ಅನಾಥವಾದರೆ ಪತಿ ಜೈಲುಪಾಲಾಗಿದ್ದಾನೆ. ಕೃತ್ಯ ನಡೆದ ಸ್ಥಳಕ್ಕೆ ಮಂಡ್ಯ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ಗ್ರಾಮಾಂತರ ಪೋಲಿಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಡಿ.ಲಕ್ಷ್ಮಣ್ ಭೇಟಿ ನೀಡಿ ಪರಿಶೀಲಿಸಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com