ಬೆಂಗಳೂರಿಗೆ ಮರಳುವುದಷ್ಟೇ ಮುಖ್ಯವಾಗಿತ್ತು: ಲಂಡನ್'ನಿಂದ ತವರಿಗೆ ಮರಳಿದ ಬಳಿಕ ನಿಟ್ಟುಸಿರು ಬಿಟ್ಟ ಪೋಷಕರು

ಲಾಕ್'ಡೌನ್ ಪರಿಣಾಮ ಲಂಡನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೆವು. ಕೊನೆಗೂ ಇದೀಗ ನಮ್ಮ ಬೆಂಗಳೂರಿಗೆ ಬಂದಿದ್ದು, ನಿಟ್ಟುಸಿರು ಬಿಟ್ಟಿದ್ದೇವೆಂದು ಲಂಡನ್ ನಿಲ್ಲಿ ಸಿಲುಕಿಕೊಂಡಿದ್ದ ಪೋಷಕರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.  
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತೀಯರು
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತೀಯರು

ಬೆಂಗಳೂರು: ಲಾಕ್'ಡೌನ್ ಪರಿಣಾಮ ಲಂಡನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೆವು. ಕೊನೆಗೂ ಇದೀಗ ನಮ್ಮ ಬೆಂಗಳೂರಿಗೆ ಬಂದಿದ್ದು, ನಿಟ್ಟುಸಿರು ಬಿಟ್ಟಿದ್ದೇವೆಂದು ಲಂಡನ್ ನಿಲ್ಲಿ ಸಿಲುಕಿಕೊಂಡಿದ್ದ ಪೋಷಕರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.  

ಮಗಳು ಲಂಡನ್ ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಆಕೆಯ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ಲಂಡನ್'ಗೆ ತೆರಳಿದ್ದೆವು. ಏಪ್ರಿಲ್ 11 ರಂದು ಹಿಂತಿರುಗಬೇಕಿತ್ತು. ಆದರೆ, ಪರಿಸ್ಥಿತಿ ಈ ಮಟ್ಟಕ್ಕೆ ಹದಗೆಡುತ್ತದೆ ಎಂದು ಎಂದಿಗೂ ಯೋಚಿಸಿರಲಿಲ್ಲ. ವಿಮಾನಗಳ ಎಲ್ಲಾ ಹಾರಾಟವನ್ನೂ ಸ್ಥಗಿತಗೊಳಿಸಲಾಗಿತ್ತು. ಮಗಳ ಜೊತೆಗೆ ಇದ್ದುದ್ದರಿಂದಾಗಿ ನಮಗೆ ಯಾವುದೇ ರೀತಿಯ ಸಮಸ್ಯೆಗಳಾಗಲಿಲ್ಲ. 

ಭಾರತೀಯರ ಕರೆದೊಯ್ಯಲು ವಿಶೇಷ ವಿಮಾನವನ್ನು ನಿಯೋಜಿಸಲಾಗಿದೆ ಎಂಬ ವಿಚಾರ ತಿಳಿದ ಕೂಡಲೇ ಸಂತಸವಾಯಿತು. ವಿಚಾರ ತಿಳಿದ ಕೂಡಲೇ ಬೆಂಗಳೂರಿಗೆ ಬರುವುದಷ್ಟೇ ನಮಗೆ ಮುಖ್ಯವಾಗಿತ್ತು. ಭಾನುವಾರದವರೆಗೂ ನಮಗೆ ಅವಕಾಶ ಸಿಗುತ್ತದೆಯೋ, ಇಲ್ಲವೋ ಎಂಬ ಆತಂಕದಲ್ಲಿಯೇ ಇದ್ದೆವು. ಭಾನುವಾರ ಬೆಳಿಗ್ಗೆ 9.45ಕ್ಕೆ ವಿಮಾನ ಹೊರಡಲಿದೆ ಎಂದು ಹೇಳಲಾಗಿತ್ತು. ಬಳಿಕ ಟಿಕೆಟ್'ಗೆ ಹಣವನ್ನು ಕಟ್ಟಲಾಗಿತ್ತು. ಬೆಳಿಗ್ಗೆ 5 ಗಂಟೆಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದೆವು. 8 ಗಂಟೆಯಾದರೂ ಯಾವುದೇ ಖಚಿತ ಮಾಹಿತಿಗಳೂ ಬಂದಿರಲಿಲ್ಲ. ಅಂತಿಮವಾಗಿ ನಮ್ಮ ಟಿಕೆಟ್ ಗಳು ಕನ್ಫರ್ಮ್ ಆಗಿದೆ ಎಂದು ಹೇಳಲಾಯಿತು. ಸಾಲು ದೊಡ್ಡದಾಗಿಯೇ ಇತ್ತು. ಏಕಾಂಗಿಯಾಗಿದ್ದರಿಂದ ಭಯ ಹೆಚ್ಚಾಗಿಯೇ ಇತ್ತು. 

ವಿಮಾನ ಹತ್ತಿದ ಬಳಿಕ ಎಂದಿಂತೆ ಹತ್ತಿದ ಪರಿಸ್ಥಿತಿ ಅಲ್ಲಿರಲಿಲಲ. ಯಾರೂ ನಮ್ಮನ್ನು ಸ್ವಾಗತಿಸಲಿಲ್ಲ. ಆದರೆ, ತಿಂಡಿ, ಊಟ, ಮಾಸ್ಕ್, ನೀರಿನ ಬಾಟಲಿ, ಸ್ಯಾನಿಟೈಸರ್ ಗಳ ವ್ಯವಸ್ಥೆಗಳಿತ್ತು. ಆಸನಗಳ ವ್ಯವಸ್ಥೆ ಸಾಮಾನ್ಯವಾಗಿಯೇ ಇತ್ತು. ವಿಮಾನದಲ್ಲಿ 300 ಜನ ಪ್ರಯಾಣಿಕರಿದ್ದೆವು. ವಿಮಾನ ಹತ್ತುತ್ತಿದ್ದಂತೆಯೇ ಮಾಸ್ಕ್ ಧರಿಸುವಂತೆ ಸೂಚಿಸಲಾಯಿತು. ಅಂತಿಮವಾಗಿ ವಿಮಾನ 11.45ಕ್ಕೆ ಹೊರಟಿತು. ಈ ವೇಳೆ ಸಾಕಷ್ಟು ಬಾರಿ ಆರೋಗ್ಯ ತಪಾಸಣೆಗಳೂ ನಡೆದವು. ದೆಹಲಿಗೆ 12.30ಕ್ಕೆ ತಲುಪಿದ್ದೆವು. 2.30ರ ಸುಮಾರಿಗೆ ದೆಹಲಿಯಿಂದ ಹೊರಟು ಬೆಂಗಳೂರಿಗೆ 4.45ಕ್ಕೆ ತಲುಪಿದ್ದೆವು. ಒಮ್ಮೆಗೆ 20 ಜನರಿಗೆ ಮಾತ್ರ ಕೆಳಗಿಳಿಯಲು ಅವಕಾಶ ನೀಡಲಾಗಿತ್ತು. ಅಲ್ಲಿಯೂ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಇದಾಗ ಬಳಿಕ ನಿಲ್ದಾಣದಲ್ಲಿ ಅರ್ಜಿಯೊಂದನ್ನು ನೀಡಿದ್ದರು. 

ಅದರಲ್ಲಿ ನಾವು ಹೋಟೆಲ್ ನ್ನು ಆಯ್ಕೆ ಮಾಡಬೇಕಿತ್ತು. ಹೋಟೆಲ್ ನಲ್ಲಿಯೂ ಜ್ವರ ಇರುವ ಕುರಿತು ಪರಿಶೀಲನೆ ನಡೆಸಿದರು. ಅಲ್ಲದೆ, ನಮ್ಮ ಬ್ಯಾಗ್ ಗಳೆಲ್ಲವನ್ನೂ ಸ್ಯಾನಿಟೈಸ್ ಮಾಡಿದರು. ಬಳಿಕ ಹೋಟೆಲ್ ನಲ್ಲಿಯೇ 14 ದಿನಗಳ ಕಾಲ ಇರುವಂತೆ ಸೂಚಿಸಿದರು. ನಮ್ಮ ತವರಿನಲ್ಲಿಯೇ ಹೋಟೆಲ್ ನಲ್ಲಿ ಉಳಿದುಕೊಳ್ಳುವುದು ವಿಚಿತ್ರವೆನಿಸಿತು. ಹೋಟೆಲ್ ರೂಮಿನಿಂದ ಹೊರಗೆ ಬರಲು ಬಿಡುತ್ತಿರಲಿಲ್ಲ. ನಮ್ಮನ್ನು ತವರಿಗೆ ಕರೆತಂದಿದ್ದಕ್ಕೆ ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳಲು ಇಚ್ಚಿಸುತ್ತೇನೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com