ಗ್ರಾಹಕರಿಗೆ ಹೆಚ್ಚುವರಿ ವಿದ್ಯುತ್ ಬಿಲ್: ಬೆಸ್ಕಾಂ ಎಂಡಿ ರಾಜೇಶ್ ಗೌಡ ಸ್ಪಷ್ಟನೆ

ಕಳೆದ ಎರಡು ತಿಂಗಳಿನಿಂದ ಬೆಸ್ಕಾಂ ವಿದ್ಯುತ್ ಬಿಲ್ ನಲ್ಲಿ ತೀವ್ರ ಹೆಚ್ಚಳವಾಗಿದ್ದು ಲಾಕ್ ಡೌನ್ ಹಿನ್ನೆಲೆ ಎರಡೂ ತಿಂಗಳ ಬಿಲ್ ಸೇರಿ ಬಂದಿರುವುದರ ಬಗೆಗೆ ಬೆಸ್ಕಾಂ ಎಂಡಿ ರಾಜೇಶ್ ಗೌಡ  ಸ್ಪಷ್ಟನೆ ನೀಡಿದ್ದಾರೆ. 
ಬೆಸ್ಕಾಂ ಎಂಡಿ ರಾಜೇಶ್ ಗೌಡ
ಬೆಸ್ಕಾಂ ಎಂಡಿ ರಾಜೇಶ್ ಗೌಡ

ಬೆಂಗಳೂರು: ಕಳೆದ ಎರಡು ತಿಂಗಳಿನಿಂದ ಬೆಸ್ಕಾಂ ವಿದ್ಯುತ್ ಬಿಲ್ ನಲ್ಲಿ ತೀವ್ರ ಹೆಚ್ಚಳವಾಗಿದ್ದು ಲಾಕ್ ಡೌನ್ ಹಿನ್ನೆಲೆ ಎರಡೂ ತಿಂಗಳ ಬಿಲ್ ಸೇರಿ ಬಂದಿರುವುದರ ಬಗೆಗೆ ಬೆಸ್ಕಾಂ ಎಂಡಿ ರಾಜೇಶ್ ಗೌಡ  ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಸ್ಕಾಂ ಎಂಡಿ ಹಾಗೂ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಲಾಕ್ ಡೌನ್ ಆಗಿರುವ ಕಾರಣ ಎಲ್ಲರೂ ಮನೆಯಲ್ಲಿದ್ದಾರೆ. ಈ ವೇಳೆ ಬೇಸಿಗೆಯೂ ಇರುವ ಕಾರಣ ಫ್ಯಾನ್, ಎಸಿ, ಫ್ರಿಜ್ ಸೇರಿ ಎಲ್ಲಾ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳು ಹೆಚ್ಚಾಗಿ ಬಳಕೆಯಾಗಿದೆ. ಹಾಗಾಗಿ ವಿದ್ಯುತ್ ಬಿಲ್ ನಲ್ಲಿ ಏರಿಕೆಯಾಗಿದೆ ಎಂದಿದ್ದಾರೆ.

"ನಾವು ಯಾವ ಕಾರಣಕ್ಕೂ ಯದ್ವಾ ತದ್ವಾ ವಿದ್ಯುತ್ ಬಿಲ್ ನೀಡಿಲ್ಲ. ಅಲ್ಲದೆ ವಿದ್ಯುತ್ ಬಿಲ್ ನಲ್ಲಿ ಕೂಡ ಯಾವ ಏರಿಕೆ ಮಾಡಿಲ್ಲ.ಬೇಸಿಗೆ ಕಾರಣ ವಿದ್ಯುತ್ ಬಳಕೆ ಹೆಚ್ಚಾಗಿದೆ ಹೊರತಾಗಿ ಸ್ಲ್ಯಾಬ್ ನಲ್ಲಿ ಯಾವುದೇ ತಪ್ಪು ಮಾಡಿಲ್ಲ" 

"ಪ್ರತಿ ಬಾರಿಯೂ ಮೊದಲ ಸ್ಲ್ಯಾಬ್ ನಲ್ಲಿ 30 ಯೂನಿಟ್ ವರೆವಿಗೆ ಕನಿಷ್ಟ ದರ ಹಾಕಲಾಗುತ್ತದೆ. ಈ ಬಾರಿ ಎರಡೂ ತಿಂಗಳ ಬಿಲ್ ಸೇರಿರುವ ಕಾರಣ 61 ಯೂನಿಟ್ ಗೆ ಇದನ್ನು ನಿಗದಿ ಂಆಡಲಾಗಿದೆ.ಹಾಗಾಗಿ ಸ್ಲ್ಯ‍ಾಬ್ ನ ಹೆಸರಲ್ಲಿ ಹೆಚ್ಚುವರಿ ಬಿಲ್ ಬಂದಿದೆ ಎನ್ನುವುದು ತಪ್ಪು. ಒಂದು ವಿದ್ಯುತ್ ಬಿಲ್ ನಲ್ಲಿ ವಿದ್ಯುತ್ ಶುಲ್ಕ, ನಿಗದಿತ ಶುಲ್ಕ ಹಾಗೂ ತೆರಿಗೆ ಎಂಬ ಮೂರು ಹಂತಗಳಿದೆ. ಈ ಬಾರಿ ಲಾಕ್ ಡೌನ್ ಇದ್ದ ಕಾರಣ ಗ್ರಾಹಕರಿಗೆ ಎರಡೂ ತಿಂಗಳ ಬಿಲ್ಒಟ್ತಾಗಿ ಸರಾಸರಿ ಮೊತ್ತ ನೀಡಲಾಗಿದೆ. ಹಾಗೊಮ್ಮೆ ಬಿಲ್ ಬಗ್ಗೆ ಗೊಂದಲವಿದ್ದಲ್ಲಿ 1912 ಸಹಾಯವಾಣಿಗೆ ಕರೆ ಮಾಡಿ ಬಗೆಹರಿಸಿಕೊಳ್ಳಬಹುದು" ಮಹೇಂದ್ರ ಜೈನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com