ಕೊರೋನಾ ಕ್ರೈಂ: ಬೆಂಗಳೂರಿನಲ್ಲಿ ಈಶಾನ್ಯ ಮಹಿಳೆಯರಿಗೆ ಕಿರುಕುಳ ನೀಡಿದ ವ್ಯಕ್ತಿಯ ಬಂಧನ

ಈಶಾನ್ಯ ರಾಜ್ಯಗಳ ಆರು ಮಹಿಳೆಯರು ತಮ್ಮ ನೆರೆಹೊರೆಯವರಿಂದ ಕಿರುಕುಳಕ್ಕೊಳಗಾಗಿದ್ದು, ಭಾನುವಾರ ಮಧ್ಯರಾತ್ರಿ ಮಹಿಳೆಯರ ಮನಗೆ ನುಗ್ಗಿ ಕೊರೋನಾ ವಿಚಾರಕ್ಕೆ ಸಂಬಂಧಿಸಿದಂತೆ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಈಶಾನ್ಯ ರಾಜ್ಯಗಳ ಆರು ಮಹಿಳೆಯರು ತಮ್ಮ ನೆರೆಹೊರೆಯವರಿಂದ ಕಿರುಕುಳಕ್ಕೊಳಗಾಗಿದ್ದು, ಭಾನುವಾರ ಮಧ್ಯರಾತ್ರಿ ಮಹಿಳೆಯರ ಮನಗೆ ನುಗ್ಗಿ ಕೊರೋನಾ ವಿಚಾರಕ್ಕೆ ಸಂಬಂಧಿಸಿದಂತೆ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ.

ಬಂಧಿತ ವ್ಯಕ್ತಿಯನ್ನು ಆನೆಪಾಳ್ಯದ ಪೇಂಟರ್ ಜಾನ್ ಕೆನಾ ಎಂದು ಗುರುತಿಸಲಾಗಿದ್ದು, ಆರೋಪಿ ಮಹಿಳೆಯರ ಮನೆಗೆ ನುಗ್ಗಿ, ಅವರ ಒಪ್ಪಿಗೆಯಿಲ್ಲದೆ ಅವರ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಮತ್ತು ಅವರು ಕೊವಿಡ್ -19 ಸೋಂಕಿತರು ಎಂದು ಆರೋಪಿಸಿ, ಅವರನ್ನು “ಚೈನೀಸ್” ಮತ್ತು “ಕೊರೊನಾವೈರಸ್” ಎಂದು ನಿಂದಿಸಿರುವುದಾಗಿ ಮಹಿಳೆಯರು ಆರೋಪಿಸಿದ್ದಾರೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಮಹಿಳೆಯರಿಗೆ ಕಿರುಕುಳ ನೀಡಿದ ವದಂತಿ ಹರಡಿದ ಆರೋಪದ ಮೇಲೆ ಕೆನಾ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದು, ಸೋಮವಾರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಆರು ಮಹಿಳೆಯರು ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮೆಘಾಲಯದವರಾಗಿದ್ದು, ನಗರದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com