"ಈ ವರ್ಷ ಮೈಷುಗರ್, ಪಿಎಸ್‌ಎಸ್‌ಕೆ ಆರಂಭ ಅನುಮಾನ".!

ಸರ್ಕಾರದ ಸದ್ಯದ ನಡೆಯನ್ನು ನೋಡಿದರೆ ಪ್ರಸಕ್ತ ಸಾಲಿನಲ್ಲಿ ಮೈಷುಗರ್ ಮತ್ತು ಪಿಎಸ್‌ಎಸ್‌ಕೆ ಕಾರ್ಖಾನೆಗಳು ಆರಂಬವಾಗುವುದು ಅನುಮಾನ ಎಂದು ಶಾಸಕ,ಮಾಜಿ ಸಚಿವರೂ ಆದ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.
'ಈ ವರ್ಷ ಮೈಷುಗರ್, ಪಿಎಸ್‌ಎಸ್‌ಕೆ ಆರಂಭ ಅನುಮಾನ'.!
'ಈ ವರ್ಷ ಮೈಷುಗರ್, ಪಿಎಸ್‌ಎಸ್‌ಕೆ ಆರಂಭ ಅನುಮಾನ'.!

ಮಂಡ್ಯ: ಸರ್ಕಾರದ ಸದ್ಯದ ನಡೆಯನ್ನು ನೋಡಿದರೆ ಪ್ರಸಕ್ತ ಸಾಲಿನಲ್ಲಿ ಮೈಷುಗರ್ ಮತ್ತು ಪಿಎಸ್‌ಎಸ್‌ಕೆ ಕಾರ್ಖಾನೆಗಳು ಆರಂಬವಾಗುವುದು ಅನುಮಾನ ಎಂದು ಶಾಸಕ,ಮಾಜಿ ಸಚಿವರೂ ಆದ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ವರ್ಷ ಮೈಷುಗರ್ ಮತ್ತು ಪಿಎಸ್‌ಎಸ್‌ಕೆ ಕಾರ್ಖಾನೆ ಆರಂಭ ಆಗಲ್ಲ, ಸರ್ಕಾರ ಅಥವಾ ಖಾಸಗಿ ಅವರಿಂದ ಮೈಷುಗರ್ ಅಥವಾ ಪಿಎಸ್‌ಎಸ್‌ಕೆ ಕಾರ್ಖಾನೆ ಶುರು ಮಾಡುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ, ಹೀಗಾಗಿ ಪರ್ಯಾಯವಾಗಿ ಚಾಲನೆಯಲ್ಲಿರುವ ಬೇರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡುವ ವ್ಯವಸ್ಥೆಕಲ್ಪಿಸುವ ಮೂಲಕ ರೈತರನ್ನು ರಕ್ಷಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.

ಈ ಹಿಂದಿನ ವರ್ಷ ಕಾರ್ಖಾನೆಗಳು ರೈತರಿಗೆ ನಾಲ್ಕೂವರೆ ಕೋಟಿ ಬಾಕಿ ನೀಡಬೇಕಿದೆ, ಕಬ್ಬಿನ ಈ ಬಾಕಿ ಹಣ ಪಾವತಿಗೂ ಡಿಸಿಗೆ ತಿಳಿಸಿದ್ದೇವೆ. ಸದ್ಯಕ್ಕೆ ಮೈಷುಗರ್ ಖಾಸಗೀಕರಣವೋ ಸರ್ಕಾರದ ಸ್ವಾಮ್ಯದಲ್ಲೇ ನಡೆಯಬೇಕೋ ಎಂಬುದು ಚರ್ಚೆ ಬೇಡ, ಇಲ್ಲಿ ಒಬ್ಬೊಬ್ಬರದ್ದು ಒಂದು ಅಭಿಪ್ರಾಯ ಇದೆ. ಇದರ ಬಗ್ಗೆ ಮತ್ತಷ್ಟು ಚರ್ಚಿಸುತ್ತೇವೆ, ಕಾರ್ಖಾನೆ ಯಾರ ಸುಪರ್ದಿಯಲ್ಲಿ ನಡೆಯಬೇಕೆಂಬ ಜೆಡಿಎಸ್ ನಿಲುವನ್ನು ಇನ್ನೆರಡೇ ದಿನದಲ್ಲಿ ಸ್ಪಷ್ಟ ಪಡಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಖಾಸಗೀಕರಣದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ ನಮ್ಮನ್ನು ಕಡೆಗಣಿಸಿದೆ,ನಮ್ಮನ್ನು ಕತ್ತಲಲ್ಲಿ ಇಟ್ಟು ಖಾಸಗೀಕರಣ ಮಾಡುವ ನಿರ್ಧಾರ ಕೈಗೊಂಡಿದೆ,ಖಾಸಗೀಕರಣ ಮಾಡಬೇಕೆಂಬ ಸಂಸದೆ ಸುಮಲತಾ ಹೇಳಿಕೆ ಅವರ ವೈಯಕ್ತಿಕವಾದುದು ಅವರ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದರು.

ಮAಡ್ಯ ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆ ಹೇಳತೀರದಾಗಿದೆ,ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ,ಜಿಲ್ಲಾಧಿಕಾರಿಗೆ ಈ ವಿಚಾರವನ್ನು ಗಮನಕ್ಕೆ ತಂದಿದ್ದೇವೆ. ಪ್ರತಿ ಗ್ರಾಮಕ್ಕೂ ನೋಡಲ್ ಅಧಿಕಾರಿಗಳ ನೇಮಕಕ್ಕೆ ಆಗ್ರಹಿಸಿದ್ದೇವೆ ಎಂದು ಅವರು ತಿಳಿಸಿದರು.

ಹೊರಗಿನವರ ಗಡಿಯಲ್ಲೇ ಕ್ವಾರಂಟೈನ್ ಮಾಡಿ:
ಹೊರ ರಾಜ್ಯದಿಂದ ಕರೆತರುತ್ತಿರುವ ಜನರನ್ನು ಮಂಡ್ಯದಗಡಿ ಭಾಗದಲ್ಲಿಯೇ ಪರಿಶೀಲಿಸಿ, ಅವರನ್ನ ಕ್ವಾರೆಂಟೈನ್ ಮಾಡಬೇಕು,ಮಂಡ್ಯ ಜಿಲ್ಲೆಗೆ ಹೊರಗಿನಿಂದ ಎಷ್ಟು ಮಂದಿ ಬಂದಿದ್ದಾರೆAಬ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಹಾಸನದ ಕೊರೋನಾ ಸೋಂಕಿತನಿಗೆ ಮಂಡ್ಯ ಮಿಮ್ಸ್ ನಲ್ಲಿ ಚಿಕಿತ್ಸೆ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಹೊರ ಜಿಲ್ಲೆಯವರಿಗೆ ಕೊರೋನಾ ಸೋಂಕು ಬಂದರೆ ನಮ್ಮ ಜಿಲ್ಲೆಯಲ್ಲಿ ಚಿಕಿತ್ಸೆ ಕೊಡಬೇಡಿ,ಹಾಸನ ಜಿಲ್ಲೆಯ ಸೋಂಕಿತನಿಗೆ ನಮ್ಮ ಜಿಲ್ಲೆಯಲ್ಲಿ ಚಿಕಿತ್ಸೆ ಕೊಡ್ತಿರೋದು ಏಕೆ,ಇದಕ್ಕೆ ನಮ್ಮ ವಿರೋಧ ಇದೆ. ಇನ್ಮುಂದೆ ಹೊರ ಜಿಲ್ಲೆಯವರಿಗೆ ನಮ್ಮಲ್ಲಿ ಚಿಕಿತ್ಸೆ ಬೇಡ,ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು. ಶಾಸಕರಾದ ಡಿ.ಸಿ.ತಮ್ಮಣ್ಣ, ಎಂ.ಶ್ರೀನಿವಾಸ್, ಡಾ.ಕೆ.ಅನ್ನದಾನಿ, ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಒಐಅ ಅಪ್ಪಾಜಿಗೌಡ,ಜೆಡಿಎಸ್ ಜಿಲ್ಲಾದ್ಯಕ್ಷ ಡಿ.ರಮೇಶ್ ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಿದ್ದರು. ಇದಕ್ಕೂ ಮುನ್ನಾ ಜೆಡಿಎಸ್‌ನ ಎಲ್ಲಾ ಶಾಸಕರು ಜಿಲ್ಲಾಧಿಕಾರಿ ಡಾ.ಎಂ.ವಿ.ವೆAಕಟೇಶ್ ಅವರನ್ನು ಭೇಟಿ ಕಾರ್ಖಾನೆಯ ಪ್ರಸ್ತುತದ ಸ್ಥಿತಿಗತಿ,ರೈತರು, ಕೋವಿಡ್ ಸಮಸ್ಯೆ,ಕುರಿತು ಮನವರಿಕೆ ಮಾಡಿಕೊಟ್ಟು ಪರಿಹಾರ ಕ್ರಮಕೈಗೊಳ್ಳುವ ಕುರಿತಂತೆ ಚರ್ಚಿಸಿದರು.
(ನಾಗಯ್ಯ) 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com