ತುಮಕೂರು; ಹಿಂದೂ ಕುಟುಂಬದ ನೆರವಿಗೆ ಬಂದ ಮುಸ್ಲಿಂ ಯುವಕರು; ಕಂಟೈನ್ ಮೆಂಟ್ ಪ್ರದೇಶದಲ್ಲಿ ಅಂತ್ಯಕ್ರಿಯೆಗೆ ಸಹಾಯ

ಇಲ್ಲಿನ ಕಂಟೈನ್ ಮೆಂಟ್ ವಲಯ-2ರಲ್ಲಿ ಕಳೆದ ಮಂಗಳವಾರ ಬೆಳ್ಳಂಬೆಳಗ್ಗೆ 60 ವರ್ಷದ ಹೆಚ್ ಎಸ್ ನಾರಾಯಣ ರಾವ್ ಹಠಾತ್ತಾಗಿ ಮೃತಪಟ್ಟರು. ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಹೊಂದಿರುವ ನಾರಾಯಣ ರಾವ್ ಕುಟುಂಬಕ್ಕೆ ಈ ಸಮಯದಲ್ಲಿ ಏನು ಮಾಡಬೇಕೆಂದೇ ದಿಕ್ಕು ತೋಚದಾಯಿತು. ಆರ್ಥಿಕವಾಗಿ ಬಡ ಕುಟುಂಬ.
ನಾರಾಯಣ ರಾವ್ ಕುಟುಂಬಕ್ಕೆ ಸಹಾಯ ಮಾಡಿದ ಮುಸ್ಲಿಂ ಯುವಕರು
ನಾರಾಯಣ ರಾವ್ ಕುಟುಂಬಕ್ಕೆ ಸಹಾಯ ಮಾಡಿದ ಮುಸ್ಲಿಂ ಯುವಕರು

ತುಮಕೂರು: ಇಲ್ಲಿನ ಕಂಟೈನ್ ಮೆಂಟ್ ವಲಯ-2ರಲ್ಲಿ ಕಳೆದ ಮಂಗಳವಾರ ಬೆಳ್ಳಂಬೆಳಗ್ಗೆ 60 ವರ್ಷದ ಹೆಚ್ ಎಸ್ ನಾರಾಯಣ ರಾವ್ ಹಠಾತ್ತಾಗಿ ಮೃತಪಟ್ಟರು. ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಹೊಂದಿರುವ ನಾರಾಯಣ ರಾವ್ ಕುಟುಂಬಕ್ಕೆ ಈ ಸಮಯದಲ್ಲಿ ಏನು ಮಾಡಬೇಕೆಂದು ದಿಕ್ಕು ತೋಚದಾಯಿತು. ಆರ್ಥಿಕವಾಗಿ ಬಡ ಕುಟುಂಬ ಬೇರೆ.

ಆ ಸಂದರ್ಭದಲ್ಲಿ ಅವರ ನೆರವಿಗೆ ಬಂದಿದ್ದು ಮುಸ್ಲಿಮ್ ಯುವಕರ ಗುಂಪು. 5 ಸಾವಿರ ರೂಪಾಯಿ ಸಂಗ್ರಹಿಸಿ ನಾರಾಯಣ ರಾವ್ ಪತ್ನಿ, ಮಕ್ಕಳಲ್ಲಿ ಧೈರ್ಯ ತುಂಬಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿದರು.

ಸೀಲ್ ಡೌನ್ ಆಗಿದ್ದರಿಂದ ನಾರಾಯಣ ರಾವ್ ಸಂಬಂಧಿಕರು ಯಾರೂ ಅವರ ಮನೆಗೆ ಹೋಗುವಂತಿರಲಿಲ್ಲ. ಆಗ ಈ ಮುಸ್ಲಿಂ ಯುವಕರೇ ಹೊಣೆ ಹೊತ್ತುಕೊಂಡು ಮಾಡಬೇಕಾದ ಕೆಲಸಗಳನ್ನು ಮಾಡಿದರು. ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ವಸ್ತುಗಳನ್ನು ತರುವ ವ್ಯವಸ್ಥೆ ಮಾಡಿದರು. ತೀರಾ ಹತ್ತಿರದ ಅಗತ್ಯ ಸಂಬಂಧಿಕರಿಗೆ ಬರಲು ವ್ಯವಸ್ಥೆ ಮಾಡಿದರು. ಅದಕ್ಕೆ ಆ ಪ್ರದೇಶದ ಕಾರ್ಪೊರೇಟರ್ ನಯಾಝ್ ಅಹ್ಮದ್ ಕೂಡ ಸಹಾಯ ಮಾಡಿದರು.

ನಾರಾಯಣ್ ರಾವ್ ಅವರು ಕಂಟೈನ್ ಮೆಂಟ್ ಪ್ರದೇಶದಲ್ಲಿ ವಾಸಿಸುತ್ತಿದ್ದರಿಂದ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಕೊರೋನಾ ಪರೀಕ್ಷೆಗೆ ಕಳುಹಿಸಲಾಯಿತು, ಅದರಲ್ಲಿ ನೆಗೆಟಿವ್ ಬಂದಿದೆ.

ನಾರಾಯಣ ರಾವ್ ಅವರ ಪುತ್ರನ ಸ್ನೇಹಿತರು ಈ ಮುಸ್ಲಿಂ ಯುವಕರಾಗಿದ್ದು ಸ್ನೇಹಿತನಿಗೆ ಕಷ್ಟದ ಸಂದರ್ಭದಲ್ಲಿ ಹೆಗಲು ಕೊಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com