ಲಾಕ್ ಡೌನ್ ನಿಂದಾಗಿ ಕಳೆಗುಂದಿದ ಕೆಎಸ್ ಐ ಸಿ: ಮದುವೆ, ಹಬ್ಬದ ವ್ಯಾಪಾರವಿಲ್ಲದೆ ಅಪಾರ ನಷ್ಟ!

ಕೊರೋನಾ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಕೆಎಸ್ ಐಸಿ ಕಳೆಗುಂದಿದೆ, ಕೆಎಸ್ ಐಸಿ ನೇಯ್ಗೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. 2 ತಿಂಗಳಲ್ಲಿ 15 ಸಾವಿರ ಸೀರೆಗಳ ತಯಾರಿಕೆ ನಿಂತಿದೆ, ಸರ್ಕಾರಿ ಸ್ವಾಮ್ಯದಲ್ಲಿರುವ ಕೆಎಸ್ ಐಸಿ ಸೀರೆಗಳಿಗೆ ದೇಶ ವಿದೇಶಗಳಲ್ಲಿ ಭಾರೀ ಬೇಡಿಕೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಕೊರೋನಾ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಕೆಎಸ್ ಐಸಿ ಕಳೆಗುಂದಿದೆ, ಕೆಎಸ್ ಐಸಿ ನೇಯ್ಗೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. 2 ತಿಂಗಳಲ್ಲಿ 15 ಸಾವಿರ ಸೀರೆಗಳ ತಯಾರಿಕೆ ನಿಂತಿದೆ, ಸರ್ಕಾರಿ ಸ್ವಾಮ್ಯದಲ್ಲಿರುವ ಕೆಎಸ್ ಐಸಿ ಸೀರೆಗಳಿಗೆ ದೇಶ ವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ.

ಹಬ್ಬ, ಮದುವೆ ಸಮಾರಂಭ, ಗೃಹ ಪ್ರವೇಶ ಮುಂತಾದ ಸಮಾರಂಭಗಳಿಗೆ ಮೈಸೂರು ಸಿಲ್ಕ್ ಸೀರೆಗಳಿಗೆ ಬೇಡಿಕೆಯಿತ್ತು. ಇದರಿಂದ ಉತ್ತೇಜನಗೊಂಡ ಕೆಎಸ್ಐಸಿ ದೊಡ್ಡ ದೊಡ್ಡ ಬಾರ್ಡರ್ ಗಳ 100 ವಿನ್ಯಾಸಗಳ ಸೀರೆಗಳನ್ನು ಹೊರತಂದಿತ್ತು. 159 ಮಗ್ಗಗಳಲ್ಲಿ ಸುಮಾರು 6,000 ಮತ್ತು 80,000 ರುಪಾಯಿ ವರೆಗಿನ ಸೀರೆಗಳು ನೇಯಲ್ಪಡುತ್ತವೆ. ದೇಶಾದ್ಯಂತ ಸುಮಾರು 16 ಶೋರೂಂಗಳಿವೆ.

ಮೈಸೂರನ್ನು ರೆಡ್ ಜೋನ್ ಎಂದು ಘೋಷಿಸಿರುವ ಪರಿಣಾಮ ಎಲ್ಲಾ ನೇಯ್ಗೆ ಕೇಂದ್ರಗಳು ಮುಚ್ಚಲ್ಪಟ್ಟಿವೆ. ಮೇ 18ರ ನಂತರ ನೇಯ್ಗೆ ಕೇಂದ್ರ ಪುನಾರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ವರಮಹಾಲಕ್ಷ್ಮಿ, ಉಗಾದಿ, ದೀಪಾವಳಿ ಹಾಗೂ ಮದುವೆ ಸೀಸನ್ ಗಳಲ್ಲಿ ಸುಮಾರು 175 ಕೋಟಿ ವಹಿವಾಟು ಹೊಂದಿರುತ್ತಿತ್ತು. ಆದರೆ ಈ ವರ್ಷ ಲಾಕ್ ಡೌನ್ ನಿಂದಾಗಿ ವ್ಯಾಪಾರಕ್ಕೆ ಕತ್ತರಿ ಬಿದ್ದಿದೆ. ವ್ಯಾಪಾರವಿಲ್ಲದ ಕಾರಣ 800  ಸಿಬ್ಬಂದಿ ಆತಂಕದಲ್ಲಿದ್ದಾರೆ. ಈ ವರ್ಷಕ್ಕಾಗಿ ಕಂಪನಿ ಈಗಾಗಲೇ 80 ಸಾವಿರ ಸೀರೆ ತಯಾರಿಸಿಕೊಂಡಿದೆ. ಆದರೆ ಸರ್ಕಾರ ಶೀಘ್ರವೇ ಕೆಎಸ್ ಐಸಿ ಶೋರೂಂ ತೆರೆಯಲು ಅನುಮತಿ ನೀಡಲಿದೆ ಎಂಬ ಭರವಸೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com