ಬೆಂಗಳೂರು: ಚಲಿಸುತ್ತಿರುವ ಗೂಡ್ಸ್ ಟ್ರೈನಿನಲ್ಲಿ ಟಿಕ್ ಟಾಕ್ ಮಾಡಲು ಹೋಗಿ ಜೀವಕ್ಕೆ ಅಪಾಯ ತಂದುಕೊಂಡ ಯುವಕ

ಚಲಿಸುತ್ತಿರುವ ಗೂಡ್ಸ್ ಟ್ರೈನಿನಲ್ಲಿ ಟಿಕ್ ಟಾಕ್ ಮಾಡಲು ಹೋಗಿ 22 ವರ್ಷದ ಯುವಕನೊಬ್ಬ ಜೀವಕ್ಕೆ ಅಪಾಯ ತಂದಿಟ್ಟುಕೊಂಡ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಚಲಿಸುತ್ತಿರುವ ಗೂಡ್ಸ್ ಟ್ರೈನಿನಲ್ಲಿ ಟಿಕ್ ಟಾಕ್ ಮಾಡಲು ಹೋಗಿ 22 ವರ್ಷದ ಯುವಕನೊಬ್ಬ ಜೀವಕ್ಕೆ ಅಪಾಯ ತಂದಿಟ್ಟುಕೊಂಡ ಘಟನೆ ನಡೆದಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ  ರೈಲ್ವೆ ನಿಲ್ದಾಣದಲ್ಲಿ ಟಿಕ್ ಟಾಕ್ ವಿಡಿಯೋ ಮಾಡಲು ಹೋಗಿ ಎಲೆಕ್ಟ್ರಿಕ್ ವೈರ್ ತಾಗಿ ಶೇ,20 ರಷ್ಟು ಸುಟ್ಟ ಗಾಯಗಳಾಗಿದ್ದು ಸದ್ಯ ಅಪಾಯದಿಂದ ಪಾರಾಗಿದ್ದಾನೆ.

ಮೈಸೂರಿನಿಂದ ಗೂಡ್ಸ್ ರೈಲಿನ ಟಾಪ್ ನಲ್ಲಿ ಕುಳಿತು ಬಂದಿದ್ದ ಯುವಕ ಸಂಜೆ 6 ಗಂಟೆ ವೇಳೆಗೆ ಬೆಂಗಳೂರು ಸಿಟಿ ರೈಲು ನಿಲ್ದಾಣ ಪ್ರವೇಶಿಸಿದೆ,

ಟಿಕ್ ಟಾಕ್ ವಿಡಿಯೋ ಮಾಡಲು ಪೋಸ್ ಕೊಡುತ್ತಿರುವ ವೇಳೆ ಟೈ ಟೆನ್ಸನ್ ವೈರ್ ಗೆ ತನ ದೇಹ ತಾಗಿ ಸುಟ್ಟ ಗಾಯಗಳೊಂದಿಗೆ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು, ಸದ್ಯ ಅಪಾಯದಿಂದ ಪಾರಾಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com