ಲಾಕ್‌ ಡೌನ್‌ ಸಂದರ್ಭದಲ್ಲಿ ಪ್ರತಿಭಟನೆ: ಕಾರ್ಪೊರೇಟರ್ ಪತಿ, ಪುತ್ರನ ವಿರುದ್ಧ ದೂರು ದಾಖಲು

ಇತ್ತೀಚೆಗೆ ಕಲಾಸಿಪಾಳ್ಯದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಕಾರ್ಪೊರೇಟರ್ ಪತಿ ಹಾಗೂ ಪುತ್ರ ಸೇರಿ ಹಲವರ ವಿರುದ್ಧ ಕಲಾಸಿಪಾಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಪೋರೇಟರ್ ಪತಿ ಪ್ರತಿಭಟನೆ
ಕಾರ್ಪೋರೇಟರ್ ಪತಿ ಪ್ರತಿಭಟನೆ

ಬೆಂಗಳೂರು: ಇತ್ತೀಚೆಗೆ ಕಲಾಸಿಪಾಳ್ಯದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಕಾರ್ಪೊರೇಟರ್ ಪತಿ ಹಾಗೂ ಪುತ್ರ ಸೇರಿ ಹಲವರ ವಿರುದ್ಧ ಕಲಾಸಿಪಾಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.

ಬುಧವಾರ ಬೆಳಿಗ್ಗೆ ಕಲಾಸಿಪಾಳ್ಯದಲ್ಲಿ ಅಕ್ರಮವಾಗಿ ಅಂಗಡಿಗಳನ್ನು ಹಾಕಲಾಗಿದೆ ಎಂಬ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಕಾರ್ಪೊರೇಟರ್ ಪ್ರತಿಭಾ ಅವರ ಪತಿ ಧನರಾಜ್ ತಪಾಸಣೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಕೆಲವರು ಧನರಾಜ್ ಹಾಗೂ ಅವರ ಪುತ್ರನ ಮೇಲೆ ಸಗಣಿ ಎರಚಿದ್ದರು. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಧನರಾಜ್ ಬೆಂಬಲಿಗರು ಗುಂಪು ಗುಂಪಾಗಿ ರಸ್ತೆ ಮಧ್ಯೆಯೇ ಪ್ರತಿಭಟನೆ ನಡೆಸಿದ್ದರು.

ಧರಣಿ ವೇಳೆ ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದರಿಂದ ಸೆಕ್ಷನ್ 143 ಉಲ್ಲಂಘಿಸಿದ್ದಾರೆ ಎಂದು ಕಾರ್ಪೊರೇಟರ್ ಪತಿ, ಮಗ ಸೇರಿ ಹಲವರ ವಿರುದ್ಧ ಕಲಾಸಿಪಾಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ, ಧನರಾಜ್ ಅವರ ಮೇಲೆ ಸಗಣಿ ಎಸೆದವರ ಮೇಲೂ ದೂರು ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com