ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ; ಕಿರುಕುಳ ಶಂಕೆ

ಮದುವೆ ನಿಶ್ಚಯವಾಗಿದ್ದು ಯುವತಿ ನೇಣಿಗೆ ಶರಣಾಗಿರುವ ಘಟನೆ ತಾಲ್ಲೂಕಿನ ಸುಂಡಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಜರುಗಿದೆ.

Published: 15th May 2020 08:45 PM  |   Last Updated: 15th May 2020 08:45 PM   |  A+A-


Bengaluru: Youth commit suicide for love failure

ಪ್ರೇಮ ವೈಫಲ್ಯ: ಯುವಕ ಆತ್ಮಹತ್ಯೆ

Posted By : srinivasamurthy
Source : RC Network

ಮಂಡ್ಯ: ಮದುವೆ ನಿಶ್ಚಯವಾಗಿದ್ದು ಯುವತಿ ನೇಣಿಗೆ ಶರಣಾಗಿರುವ ಘಟನೆ ತಾಲ್ಲೂಕಿನ ಸುಂಡಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಜರುಗಿದೆ.

ಗ್ರಾಮದ ಶಿವಮ್ಮ ಎಂಬುವವರ ಪುತ್ರಿ ರಮ್ಯಶ್ರೀ(೧೯) ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದು ಈಕೆಗೆ ಅದೇ ಗ್ರಾಮದ ಶಿವರಾಮು ಎಂಬುವವರ ಪುತ್ರ ಶಿವರಾಜು ಜೊತೆ ಮದುವೆ ನಿಶ್ಚಯವಾಗಿತ್ತು. ಭೂಸ್ವಾಧೀನ ಪ್ರಕಿಯೆಯಲ್ಲಿ ಶಿವಮ್ಮರ ಜಮೀನು ಸೇರಿದ್ದು ಕೆಲ ದಿನಗಳ ಹಿಂದೆ  ಸರ್ಕಾರದಿಂದ ಹಣ ಮಂಜೂರಾಗಿತ್ತು, ವಿಷಯ ತಿಳಿದಿದ್ದ ಶಿವರಾಜು ಈ ಹಣವನ್ನು ತನಗೆ ವ್ಯವಹಾರಕ್ಕೆ ಕೊಡಿಸಿಕೊಡುವಂತೆ ರಮ್ಯಶ್ರೀಯ ಮೇಲೆ ಒತಡ ಹೇರಿದ್ದ ಎನ್ನಲಾಗಿದೆ. 

ಇದೇ ಹಿನ್ನೆಲೆಯಲ್ಲಿ ಬುಧವಾರ ಕೂಡ ಒತ್ತಡಹಾಕಿ ಜಗಳ ಮಾಡಿದ್ದ,ಇದರಿಂದ ಮಾನಸಿಕವಾಗಿ ನೊಂದ ರಮ್ಯಶ್ರೀ ರಾತ್ರಿ ೮ ರ ವೇಳೆಯಲ್ಲಿ ತಮ್ಮ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ  ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಜಿಲ್ಲಾಸ್ಪತ್ರೆಯಲ್ಲಿ ಶವಪರೀಕ್ಷೆಯ ಬಳಿಕ ವಾರಸುದಾರರಿಗೆ ಶವವನ್ನ ಹಸ್ತಾಂತರಿಸಲಾಯಿತು.

-ನಾಗಯ್ಯ


Stay up to date on all the latest ರಾಜ್ಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp