ಲಾಕ್ ಡೌನ್: ಸಂಕಷ್ಟದಲ್ಲಿರುವವರಿಗೆ ಹೆಚ್ಚುವರಿಯಾಗಿ 162 ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಿಸಿದ ರಾಜ್ಯ ಸರ್ಕಾರ

ಕಳೆದ  ಒಂದು ವಾರದ ಹಿಂದಷ್ಟೇ ಲಾಕ್ ಡೌನ್ ನಿಂದ ಸಂಕಷ್ಟದ ಪರಿಸ್ಥಿತಿಯಲ್ಲಿರುವವರಿಗೆ 1, 610 ಕೋಟಿ ರೂ. ಪರಿಹಾರವನ್ನು ಕರ್ನಾಟಕ ಸರ್ಕಾರ ಘೋಷಿಸಿತ್ತು. ಇದೀಗ ಹೆಚ್ಚುವರಿಯಾಗಿ 162 ಕೋಟಿ ರೂ. ಪರಿಹಾರ ನೀಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ವಲಸೆ ಕಾರ್ಮಿಕರ ಚಿತ್ರ
ವಲಸೆ ಕಾರ್ಮಿಕರ ಚಿತ್ರ

ಬೆಂಗಳೂರು: ಕಳೆದ  ಒಂದು ವಾರದ ಹಿಂದಷ್ಟೇ ಲಾಕ್ ಡೌನ್ ನಿಂದ ಸಂಕಷ್ಟದ ಪರಿಸ್ಥಿತಿಯಲ್ಲಿರುವವರಿಗೆ 1, 610 ಕೋಟಿ ರೂ. ಪರಿಹಾರವನ್ನು ಕರ್ನಾಟಕ ಸರ್ಕಾರ ಘೋಷಿಸಿತ್ತು. ಇದೀಗ ಹೆಚ್ಚುವರಿಯಾಗಿ 162 ಕೋಟಿ ರೂ. ಪರಿಹಾರ ನೀಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ತೋಟಗಾರಿಕೆ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 15 ಸಾವಿರ ರೂಪಾಯಿ, ವಿದ್ಯುತ್ ಮಗ್ಗದ ಕೆಲಸಗಾರರಿಗೆ  2 ಸಾವಿರ ರೂ. ಆರ್ಥಿಕ ನೆರವನ್ನು ಘೋಷಿಸಲಾಗಿದೆ. ಹೆಚ್ಚುವರಿಯಾಗಿ ಅಂದಾಜು 162 ಕೋಟಿ ಪರಿಹಾರವನ್ನು ಘೋಷಿಸಿದ್ದು, ಒಟ್ಟು 1, 772 ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದಂತಾಗಿದೆ.

ಈ ಹಿಂದೆ ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 25 ಸಾವಿರ ರೂ. ಪರಿಹಾರ ನೀಡಲು ನಿರ್ಧರಿಸಲಾಗಿತ್ತು. ಇದೀಗ ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ 137 ಕೋಟಿ ರೂ. ಗಳ ಪರಿಹಾರವನ್ನು ನೀಡಲು ಉದ್ದೇಶಿಸಲಾಗಿದೆ. ಕಾಫಿ, ಕೊಪ್ರಾ ಮತ್ತಿತರ ವಾಣಿಜ್ಯ ಬೆಳೆಗಳಿಗೆ ಅದು ಅನ್ವಯವಾಗಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ನೇಕಾರ ಸಮ್ಮಾನ್ ಯೋಜನೆಯಡಿ 1. 25 ಲಕ್ಷ ವಿದ್ಯುತ್ ಮಗ್ಗದ ಕೆಲಸಗಾರರ ಬ್ಯಾಂಕ್ ಖಾತೆಗಳಿಗೆ 2 ಸಾವಿರ ರೂ. ನೇರವಾಗಿ ವರ್ಗಾವಣೆ ಆಗಲಿದೆ. ಈ ಯೋಜನೆಗಾಗಿ 25 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಪ್ರಕಟಿಸಿರುವ ಎರಡನೇ ಕಂತಿನ ಪ್ಯಾಕೇಜ್ ನಿಂದ ವಲಸೆ ಕಾರ್ಮಿಕರು, ಬೀದಿ ಕಾರ್ಮಿಕರು, ಸಣ್ಣ ರೈತರು ಮತ್ತಿತರ ಬಡ ಜನರಿಗೆ ಅನುಕೂಲವಾಗಲಿದೆ. ಏಕರೂಪದ ಕನಿಷ್ಠ ವೇತನ ನಿಗದಿಯಿಂದ ವಲಸೆ ಕಾರ್ಮಿಕರಿಗೆ ಹೆಚ್ಚಿನ ಲಾಭವಾಗಲಿದೆ. ಉಚಿತ ಪಡಿತರ, ಸ್ಥಿರ ಮನೆ ಬಾಡಿಗೆ ಇತ್ಯಾದಿಗಳು ಅವರಿಗೆ ಸುರಕ್ಷಿತ ಭಾವನೆ ಮೂಡಿಸುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com