ಸ್ಮಾರ್ಟ್ ಸಿಟಿ ಶ್ರೇಯಾಂಕ: ಶಿವಮೊಗ್ಗಕ್ಕೆ ರಾಷ್ಟ್ರಮಟ್ಟದಲ್ಲಿ 16ನೇ ಸ್ಥಾನ, ರಾಜ್ಯದಲ್ಲಿ ದ್ವಿತೀಯ

ಶ್ರೇಯಾಂಕದಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ರಾಷ್ಟ್ರ ಮಟ್ಟದಲ್ಲಿ 16 ನೇ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 2 ನೇ ಸ್ಥಾನಕ್ಕೆ ಏರಿಕೆಯಾಗಿದೆ.
ಶಿವಮೊಗ್ಗ
ಶಿವಮೊಗ್ಗ

ಬೆಂಗಳೂರು: ಶ್ರೇಯಾಂಕದಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ರಾಷ್ಟ್ರ ಮಟ್ಟದಲ್ಲಿ 16 ನೇ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 2 ನೇ ಸ್ಥಾನಕ್ಕೆ ಏರಿಕೆಯಾಗಿದೆ.

ಕೇಂದ್ರ ಸರ್ಕಾರ ನಿಗದಿಪಡಿಸಿದ ವಿವಿಧ ಅಭಿವೃದ್ಧಿ ಸೂಚಕಗಳ ಮಾನದಂಡದಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿಯು ರಾಜ್ಯದಲ್ಲಿ 2 ನೇ ಸ್ಥಾನ ಹಾಗೂ ರಾಷ್ಟ್ರ ಮಟ್ಟದಲ್ಲಿ 16ನೇ ಸ್ಥಾನದ ಶ್ರೇಯಾಂಕ ಪಡೆದಿದೆ. 

ಕೋವಿಡ್ -19 ರ ನಿರ್ಬಂಧದ ಕಾರಣ ಸ್ಥಳದಲ್ಲಿ ಕಾಮಗಾರಿಗಳ ಅನುಷ್ಠಾನದಲ್ಲಿ ಅಡಚಣೆ ಆಗಿದ್ದರೂ , ಪ್ರಮುಖ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾದ ಕಾರಣ ಮೇಲ್ದರ್ಜೆ ಪ್ರಾಪ್ತವಾಗಿದೆ.

ನೆಹರೂ ಕ್ರೀಡಾಂಗಣದಲ್ಲಿ ಈಗಿರುವ ಕ್ರೀಡಾ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸುವ ಹಂತ -2 ರೂ .26.06 ಕೋಟಿ ಕಾಮಗಾರಿಗೆ ಕಾರ್ಯಾದೇಶ ನೀಡಿರುವುದು, ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಹತ್ತಿರದ ಬೀದಿ ವ್ಯಾಪಾರಿಗಳ ವಲಯ ನಿರ್ಮಾಣ ಕಾಮಗಾರಿಯ ರೂ .12.42 ಕೋಟಿ ಮೌಲ್ಯದ ಟೆಂಡರ್ ಪ್ರಕ್ರಿಯೆ ನಡೆಸಿರುವುದು, ಶಿವಮೊಗ್ಗ ನಗರದಲ್ಲಿ ಎಲ್.ಇ.ಡಿ. ಬೀದಿ ದೀಪಗಳ ಅಳವಡಿಕೆಯ ಕಾರ್ಯಕ್ರಮದ ಅನುಷ್ಠಾನಕ್ಕೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತಾಧಿಕಾರ ಚಾಲನಾ ಸಮಿತಿ ಸಭೆಯಲ್ಲಿ ಅನುಮೋದನೆ ದೊರೆತಿದ್ದು, ಸರ್ಕಾರ ನಿಗದಿಪಡಿಸಿದ ಅನುದಾನ ಬಳಕೆಯ ಗುರಿಯನ್ನು ಸಾಧಿಸಿದೆ. 

ಜೊತೆಗೆ ನಗರಾಭಿವೃದ್ಧಿ ಸಚಿವರು , ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸತ್ ಸದಸ್ಯರುಗಳ ನಿರಂತರ ಮಾರ್ಗದರ್ಶನ , ಮಂಡಳಿಯ ಅಧ್ಯಕ್ಷರ ನಿರ್ದೇಶನ , ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆ ಹಾಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳ ಸಹಕಾರದೊಂದಿಗೆ ನಿರಂತರವಾಗಿ ಪ್ರಗತಿ ಪರಿಶೀಲನಾ ಸಭೆ, ಭಾಗೀದಾರ ಇಲಾಖೆಗಳು ಹಾಗೂ ಗುತ್ತಿಗೆದಾರರ ಸಮನ್ವಯ ಸಭೆ ಮತ್ತು ಶಾಸನಬದ್ಧ ಸಭೆಗಳನ್ನು ನಡೆಸಲಾಗಿರುವುದರ ಜೊತೆಗೆ ಶಿವಮೊಗ್ಗ ಸ್ಮಾರ್ಟ್‌ಸಿಟಿಯ ಸಿಬ್ಬಂದಿಯ ಸಮರ್ಪಕ ಕಾರ್ಯ ನಿರ್ವಹಣೆಯಿಂದಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ದರ್ಜೆಗೇರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com