ರಾಮನಗರ: ಲಾಕ್‌ಡೌನ್ ಮಧ್ಯೆ ಜಾತ್ರೆಗೆ ಅನುಮತಿ ಕೊಟ್ಟ ಗ್ರಾಮ ಲೆಕ್ಕಿಗ ಅಮಾನತು

ಲಾಕ್​ಡೌನ್ ಇದ್ದರೂ ಜಾತ್ರೆ ನಡೆಸಲು ಅನುಮತಿಸಿದ್ದ ಗ್ರಾಮ ಲೆಕ್ಕಿಗನೊಬ್ಬನನ್ನು ಅಮಾನತು ಮಾಡಿರುವ ಘಟನೆ ರಾಮನಗರ ಜಿಲ್ಲೆ ಕನಕಪುರದ ಕೊಳಗೊಂಡನಹಳ್ಳಿಯಲ್ಲಿ ನಡೆದಿದೆ.
ಲಾಕ್ ಡೌನ್ ಸಮಯದಲ್ಲಿ ಜಾತ್ರೆ
ಲಾಕ್ ಡೌನ್ ಸಮಯದಲ್ಲಿ ಜಾತ್ರೆ

ರಾಮನಗರ: ಲಾಕ್​ಡೌನ್ ಇದ್ದರೂ ಜಾತ್ರೆ ನಡೆಸಲು ಅನುಮತಿಸಿದ್ದ ಗ್ರಾಮ ಲೆಕ್ಕಿಗನೊಬ್ಬನನ್ನು ಅಮಾನತು ಮಾಡಿರುವ ಘಟನೆ ರಾಮನಗರ ಜಿಲ್ಲೆ ಕನಕಪುರದ ಕೊಳಗೊಂಡನಹಳ್ಳಿಯಲ್ಲಿ ನಡೆದಿದೆ.

ಲಾಕ್‌ಡೌನ್ ಇದ್ದಂತೆಯೇ ಕೊಳಗೊಂಡನಹಳ್ಳಿಯಲ್ಲಿ ಜಾತ್ರೆ ನಡೆದಿದ್ದು ನೂರಾರು ಮಂದಿ ಭಾಗವಹಿಸಿದ್ದರು. ಜಾತ್ರೆಗೆ ಅನುಮತಿ ಇಲ್ಲದಿದ್ದರೂ ಅದ್ದೂರಿಯಾಗಿ ಜಾತ್ರೆ ನಡೆಸಿದ್ದ ಮಾರಮ್ಮ ದೇವಸ್ಥಾನದ ಅರ್ಚಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗ ಜಾತ್ರೆಗೆ ಅನುಮತಿಸಿದ್ದ ಗ್ರಾಮ ಲೆಕ್ಕಿಗನನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಆದೇಶ ಹೊರಡಿಸಿದ್ದಾರೆ.

ಬನ್ನಿಮುಕ್ಕೋಡ್ಲು ಕಂದಾಯ ವೃತ್ತದ ಗ್ರಾಮ ಲೆಕ್ಕಿಗ ಕಲ್ಮಟ್ ಎನ್.ಸಿ  ಅವರನ್ನು ಕರ್ತವ್ಯ ಲೋಪದ ಕಾರಣ ಅಮಾನತು ಮಾಡಲಾಗಿದೆ. 

ಗ್ರಾಮಸ್ಥರು ಜಾತ್ರೆ ನಡೆಸಲು ಗ್ರಾಮ ಲೆಕ್ಕಿಗ ಕಲ್ಮಟ್ ಎನ್.ಸಿ  ಅವರಿಂದ ಅನುಮತಿ ಪಡೆಇದ್ದರೆನ್ನುವ ಮಾಹಿತಿ ಲಭಿಸಿದ್ದು ತಹಶೀಲ್ದಾರ್ ವರದಿಯ ಹಿನ್ನೆಲೆ ಇದೀಗ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com