ಮುಂಗಾರು ಅಧಿವೇಶನ: ಸಾಮಾಜಿಕ ಅಂತರ ನಿಯಮ ಪಾಲಿಸುವುದೇ ದೊಡ್ಡ ಸವಾಲು

ಕೊರೋನಾ ಸೋಂಕಿನ ಆತಂಕದ  ವಿಧಾನಸಭೆ ಮತ್ತು ಸಂಸತ್ತಿನ ಮುಂಗಾರು ಅಧಿವೇಶನ ನಡೆಸಲು ಸಿದ್ದತೆಗಳು ನಡೆಯುತ್ತಿವೆ. ಸದನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಸವಾಲಿನ ಕೆಲಸವಾಗಿದೆ.
ವಿಧಾನ ಸೌಧ
ವಿಧಾನ ಸೌಧ

ಬೆಂಗಳೂರು: ಕೊರೋನಾ ಸೋಂಕಿನ ಆತಂಕದ  ವಿಧಾನಸಭೆ ಮತ್ತು ಸಂಸತ್ತಿನ ಮುಂಗಾರು ಅಧಿವೇಶನ ನಡೆಸಲು ಸಿದ್ದತೆಗಳು ನಡೆಯುತ್ತಿವೆ. ಸದನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಸವಾಲಿನ ಕೆಲಸವಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಆಸನಗಳನ್ನು ದೂರ ಹಾಕಬೇಕಿದೆ. ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಸಾರ್ವಜನಿಕ ಗ್ಯಾಲರಿಯಿಂದ ಕನಿಷ್ಠ ದೂರವಿರಿಸಲು ಪ್ರಸ್ತಾಪವಿದೆ. ತಾಪಮಾನ ಪರಿಶೀಲನೆ ಮತ್ತು ಸ್ಯಾನಿಟೈಸಿಂಗ್ ಕಾರ್ಯವನ್ನು ಕೂಡ ಅನುಷ್ಠಾನಗೊಳಿಸಬೇಕಿದೆ.

ಜೂನ್ ತಿಂಗಳಿನಲ್ಲಿ ಸಂಸತ್ತು ಮತ್ತು ವಿಧಾನಸಭೆ ಅಧಿವೇಶನ ಆರಂಭವಾಗುವ ಸಾಧ್ಯತೆಯಿದೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳ ಬಜೆಟ್ ಅಧಿವೇಶನ ಮೊಟಕುಗೊಳಿಸಲಾಗಿತ್ತು.

ಸದ್ಯ ಆರಂಭಗೊಳ್ಳುವ ಮುಂಗಾರು ಅಧಿವೇಶನಕ್ಕಾಗಿ ಆಸನಗಳ ವ್ಯವಸ್ಥೆ ಬದಲಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಬ್ಲಿಕ್ ಗ್ಯಾಲರಿಯಲ್ಲಿ ಕುಳಿತುಕೊಳ್ಳುವ ಸದಸ್ಯರ ಮೈಕ್ ಮತ್ತು ಇಯರ್ ಫೋನ್ ಗಳನ್ನು ಅಳವಡಿಸುವ ಅವಶ್ಯಕತೆಯಿದೆ, ಮುಂಗಾರು ಅಧಿವೇಶನದ ಬಗ್ಗೆ ಇನ್ನೂ ನಿರ್ಧಾವಾಗಿಲ್ಲ, ಜೂನ್ ಅಥವಾ ಜುಲೈ ತಿಂಗಳಲ್ಲಿ ಅಧಿವೇಶನ ನಡೆಸುವ ಬಗ್ಗೆ ಇನ್ನೂ ತೀರ್ಮಾನಿಸಬೇಕಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com