ರಾಜಧಾನಿ ಎಕ್ಸ್ ಪ್ರೆಸ್ ರೈಲು ದರ ಏರಿಕೆ: ಸರ್ಕಾರದ ವಿರುದ್ಧ ಮುಗಿಬಿದ್ದ ಪ್ರತಿಪಕ್ಷಗಳು

ರಾಜ್ಯ ರಾಜಧಾನಿಗೆ ಬರುವ  ಜನರು ಹೆಚ್ಚಿನ ಹಣ ನೀಡಬೇಕಾಗಿದೆ, ಹೀಗಾಗಿ ಕೆಲ ನಾಯಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಅಧಿಕ ಪ್ರಮಾಣದ ದರ ವಿಧಿಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನವದೆಹಲಿಯಿಂದ ಬೆಂಗಳೂರಿಗೆ ಜನರನ್ನು ಕರೆತರತ್ತಿರುವ ಸಂಬಂಧ ವಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿವೆ.

ರಾಜ್ಯ ರಾಜಧಾನಿಗೆ ಬರುವ  ಜನರು ಹೆಚ್ಚಿನ ಹಣ ನೀಡಬೇಕಾಗಿದೆ, ಹೀಗಾಗಿ ಕೆಲ ನಾಯಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಅಧಿಕ ಪ್ರಮಾಣದ ದರ ವಿಧಿಸಲಾಗುತ್ತಿದೆ. ಪ್ರತಿ ಟಿಕೆಟ್ ಗೆ 2,500, ಎರಡು ವಾರಗಳ ಕಾಲ ಕ್ವಾರಂಟೈನ್  ನಲ್ಲಿರಲು ಹೋಟೆಲ್ ಬಿಲ್  ಒಬ್ಬ ವ್ಯಕ್ತಿಗೆ ಸುಮಾರು 30 ಸಾವಿರ ರು ವರೆಗೆ ತಗಲುತ್ತದೆ.

ಕ್ವಾರಂಟೈನ್ ಗೆ ಒಳಪಡುವವರಿಗೆ ಸ್ಟಾರ್ ಹೋಟೆಲ್ ಗಳಲ್ಲಿರುವ ರೀತಿ ಬಿಲ್ ನೀಡಲಾಗುತ್ತಿದೆ, ಅವರನ್ನೆಲ್ಲಾ ಹಾಸ್ಟೆಲ್ ಗಳಲ್ಲಿ ಕ್ವಾ ರಂಟೈನ್ ಮಾಡುವಂತೆ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತನಾಡುವುದಾಗಿ  ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ನಿಯಮಿತವಾಗಿ ರೈಲುಗಳನ್ನು  ಸಂಚರಿಸಬೇಕು, 500 ರು ದರ ನೀಡುತ್ತಿದ್ದ ಜಾಗದಲ್ಲಿ 2,500 ರು ವಿಧಿಸಲಾಗುತ್ತಿದೆ, ತವರಿಗೆ ಮರಳುತ್ತಿರುವವರಿಗೆ ಸುಮಾರು 28 ಸಾವಿರ ರು ವೆಚ್ಚ ತಗಲುತ್ತಿದೆ, ಸಾಮಾನ್ಯ ಜನರಿಗೆ ಇದು ಆರ್ಥಿಕ ಹೊರೆಯಾಗಿದೆ ಎಂದು ಕಾಂಗ್ರೆಸ್ ಸಂಸದ ಬಿಕೆ ಹರಿಪ್ರಸಾದ್ ಆರೋಪಿಸಿದ್ದಾರೆ.

ವಲಸೆ ಕಾರ್ಮಿಕರ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಲಾಕ್ ಡೌನ್ ನಿಂದಾಗಿ ಕಾರ್ಮಿಕರಿಗೆ ಪ್ರಯಾಣ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com