ಶಾಪಿಂಗ್ ಮಾಲ್ ಪುನರಾರಂಭಕ್ಕೆ ಎಸ್‌ಸಿಎಐಯಿಂದ ಮುಖ್ಯಮಂತ್ರಿಗಳಿಗೆ ಮನವಿ

ಶಾಪಿಂಗ್ ಮಾಲ್ ಗಳ ಕಾರ್ಯಾಚರಣೆ ಪುನರಾರಂಭಿಸಲು ಅನುಮತಿ ನೀಡುವಂತೆ ಶಾಪಿಂಗ್ ಸೆಂಟರ್ ಅಸೋಸಿಯೇಷನ್ ಆಫ್ ಇಂಡಿಯಾ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದೆ.

Published: 16th May 2020 10:54 AM  |   Last Updated: 16th May 2020 10:54 AM   |  A+A-


Yediyurappa

ಯಡಿಯೂರಪ್ಪ

Posted By : Shilpa D
Source : The New Indian Express

ಬೆಂಗಳೂರು: ಶಾಪಿಂಗ್ ಮಾಲ್ ಗಳ ಕಾರ್ಯಾಚರಣೆ ಪುನರಾರಂಭಿಸಲು ಅನುಮತಿ ನೀಡುವಂತೆ ಶಾಪಿಂಗ್ ಸೆಂಟರ್ ಅಸೋಸಿಯೇಷನ್ ಆಫ್ ಇಂಡಿಯಾ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದೆ.

ಫೀನಿಕ್ಸ್ ಮಾಲ್ಸ್ ನ ವ್ಯವಸ್ಥಾಪಕ ನಿರ್ದೇಶಕ ಅತುಲ್ ರುಯಾ ಅವರು ಈ ಬಗ್ಗೆ ಮಾತನಾಡಿ, "ಉದ್ಯಮದ ಮುನ್ನೆಲೆ ಕಾರ್ಯಾಚರಣೆ ನಡೆಸದೇ ಹಿನ್ನೆಲೆ ಕೆಲಸ ಮಾಡಲು ಸಾಧ್ಯವಿಲ್ಲ. ನಾವು ಮಾಲ್ ಗಳಲ್ಲಿ ನಿಯಮಿತವಾದ ಕಾರ್ಯಾಚರಣೆ ಅವಧಿಯನ್ನು ನಿಗದಿಪಡಿಸುವುದು, ಸಾಮಾಜಿಕ ಅಂತರ ಶಿಷ್ಠಾಚಾರಗಳನ್ನು ಜಾರಿಗೆ ತರುವುದು, ಸಿನಿಮಾ
ಮಂದಿರಗಳಲ್ಲಿ ಇಬ್ಬರ ನಡುವೆ ಒಂದು ಸೀಟನ್ನು ಖಾಲಿ ಬಿಡುವುದು, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರ ನಡುವೆ ಅಂತರ, ಹ್ಯಾಂಡ್ ಸ್ಯಾನಿಟೈಸರ್ ಮತ್ತು ಪ್ರವೇಶ ದ್ವಾರಗಳಲ್ಲಿ ಉಷ್ಣಾಂಶ ಪರೀಕ್ಷೆ ಮಾಡುವುದು.

ಎಲ್ಲಾ ರೀಟೇಲ್ ಶಾಪ್ ಗಳಲ್ಲಿ ಸಿಬ್ಬಂದಿಗೆ ಮಾಸ್ಕ್ ಧರಿಸುವುದು ಕಡ್ಡಾಯ ಸೇರಿದಂತೆ ಇನ್ನೂ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಹೀಗಾಗಿ ಮಾಲ್ ತೆರೆಯಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಪಿಂಗ್ ಮಾಲ್ ಗಳನ್ನು ಪುನರಾರಂಭಿಸಿದರೆ ಆರ್ಥಿಕ ಪುನಶ್ಚೇತನಕ್ಕೆ ನೆರವಾಗಲಿದೆ. ಇಷ್ಟೇ ಅಲ್ಲದೇ, ಲಕ್ಷಾಂತರ ಕಾರ್ಮಿಕರಿಗೆ ಮತ್ತು ಅವರು ಅವಲಂಬಿಸಿರುವ ವ್ಯವಹಾರಗಳನ್ನು ಮುಂದುವರಿಸಿ ಆರ್ಥಿಕವಾಗಿ ಸುಧಾರಣೆ ಕಾಣಬಹುದಾಗಿದೆ. ಈ ಮೂಲಕ ಅವರ ಜೀವನೋಪಾಯ ಸುಧಾರಣೆ ಕಾಣಲಿದೆ.

ಇದಲ್ಲದೇ, ಮಾಲ್ ಗಳು ಆರಂಭವಾದರೆ ಪಾವತಿ ವ್ಯವಸ್ಥೆಗಳು, ಬ್ಯಾಂಕಿಂಗ್ ಸಂಸ್ಥೆಗಳು ತಮಗಾಗಿರುವ ಆರ್ಥಿಕ ಆದಾಯದ ಕೊರತೆಯಿಂದ ಹೊರ ಬರಬಹುದಾಗಿದೆ ಎಂದು ಮನದಟ್ಟು ಮಾಡಿದ್ದಾರೆ. ಕೊರೋನಾ ಸೋಂಕಿನ ಭೀತಿಯಿಂದಾಗಿ ಮಾರ್ಚ್ 15 ರಿಂದ ರಾಜ್ಯದ ಎಲ್ಲಾ ಮಾಲ್ ಗಳು ಬಂದ್ ಆಗಿವೆ


 

Stay up to date on all the latest ರಾಜ್ಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp