ಕೋವಿಡ್-19: ರಾಜ್ಯದಲ್ಲಿ ಇಂದು ಒಂದೇ ದಿನ 23 ಹೊಸ ಪ್ರಕರಣ ಪತ್ತೆ,ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆ

ರಾಜ್ಯದಲ್ಲಿ ಇಂದು ಒಂದೇ ದಿನ 23 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆ ಆಗಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 23 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆ ಆಗಿದೆ. ಈ ಪೈಕಿ 548 ಸಕ್ರಿಯ ಸೋಂಕು ಪ್ರಕರಣಗಳಾಗಿದ್ದು, 494 ಮಂದಿ  ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ 36 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರದಲ್ಲಿ 14,  ಹಾಸನ 3,  ಬಾಗಲಕೋಟೆ, ಮಂಡ್ಯ, ಉಡುಪಿ, ಧಾರವಾಡ, ದಾವಣಗೆರೆ ಹಾಗೂ ಬಳ್ಳಾರಿಯಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ. 

ಬೆಂಗಳೂರು ನಗರದಲ್ಲಿ ಸ್ವಲ್ಪ ದಿನದಿಂದಲೂ ಕಡಿಮೆ ಪ್ರಮಾಣದಲ್ಲಿ ಪತ್ತೆಯಾಗುತ್ತಿದ್ದ ಸೋಂಕಿತರ ಸಂಖ್ಯೆ ಇಂದು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. 

1064ನೇ ಸೋಂಕಿತ 27 ವರ್ಷದ ಯುವಕನಾಗಿದ್ದರೆ 1065ನೇ ಸೋಂಕಿತನಿಗೆ 25 ವರ್ಷ. 1066 ಹಾಗೂ 1068ನೇ ಸೋಂಕಿತರ ಕೂಡಾ   20 ವರ್ಷದವರಾಗಿದ್ದಾರೆ.  1069ನೇ ಸೋಂಕಿತ 27 ವರ್ಷದವನಾಗಿದ್ದರೆ 1070ನೇ ಸೋಂಕಿತನಿಗೆ 24 ವರ್ಷ. 1071 ಹಾಗೂ 1072ನೇ ಸಂಖ್ಯೆಯ ರೋಗಿಗಳಿಗೆ ಕ್ರಮವಾಗಿ 23, 24 ವರ್ಷ ಆಗಿದೆ. 1073ನೇ ಸೋಂಕಿತನಿಗೆ 26 ವರ್ಷ, 1075ನೇ ಸೋಂಕಿತ 17 ವರ್ಷದ ಬಾಲಕನಾಗಿದ್ದಾನೆ. 1076 ಹಾಗೂ 1078ನೇ ಸೋಂಕಿತರು ಕ್ರಮವಾಗಿ 18 ಮತ್ತು 19 ವರ್ಷದ ಯುವಕರಾಗಿದ್ದಾರೆ. 

ಕೋವಿಡ್-19 ಸೋಂಕು 60 ವರ್ಷಕ್ಕೂ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಂಡುಬರಲಿದೆ ಎಂಬ ನಂಬಿಕೆಯನ್ನು ಇಂದು ಬೆಂಗಳೂರಿನಲ್ಲಿ ಪತ್ತೆಯಾಗಿರುವ ಪ್ರಕರಣಗಳು ಹುಸಿಯಾಗಿಸಿವೆ. 10ರಿಂದ 20 ವರ್ಷದೊಳಗಿನವರಲ್ಲಿಯೇ ಹೆಚ್ಚಾಗಿ ಕೋವಿಡ್-19 ಸೋಂಕು ಪತ್ತೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com